Agnisakshi Vaishnavi Gowda dance video : ನಮ್ಮ ಕನ್ನಡ ಕಿರುತೆರೆಯಲ್ಲಿ ಭಾರಿ ಸೆನ್ಸೇಷನ್ ಮೂಡಿಸಿದ್ದ ಧಾರವಾಹಿಗಳಲ್ಲಿ ಅಗ್ನಿ ಸಾಕ್ಷಿ ಕೂಡ ಒಂದಾಗಿದ್ದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಅಗ್ನಿಸಾಕ್ಷಿ ಧಾರಾವಾಹಿ ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿಯಾಗಿದ್ದು ಮನೆಮಂದಿಯೆಲ್ಲ ಕುಳಿತು ಈ ಧಾರಾವಾಹಿಯನ್ನು ತಪ್ಪದೇ ವೀಕ್ಷಿಸುತ್ತಿದ್ದರು. ಹೌದು ಈ ಧಾರಾವಾಹಿಯ ಮೂಲಕ ಅನೇಕ ಕಲಾವಿದರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು ಅವರಲ್ಲಿ ಸನ್ನಿದಿ ಪಾತ್ರಧಾರಿ ವೈಷ್ಣವಿ ಪ್ರಮುಖರು ಎನ್ನಬಹುದು.
ನಟಿ ವೈಷ್ಣವಿ ಅವರನ್ನು ಕಿರುತೆರೆ ಮಂದಿ ಇಂದಿಗೂ ಕೂಡ ಸನ್ನಿಧಿ ಅಂತಲೇ ಗುರುತಿಸುತ್ತಿದ್ದು ಈ ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ನಟಿ ವೈಷ್ಣವಿ ಗೌಡ ತದ ನಂತರ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಿನ್ ಎಂಟಕ್ಕೆ ಪಾದಾರ್ಪಣೆ ಮಾಡಿದ್ದು ಟಾಪ್ ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಹೌದು ಬಿಗ್ ಬಾಸ್ ಮನೆಯೊಳಗೆ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿದ್ದ ವೈಷ್ಣವಿ ಅವರ ನಡೆ ಮತ್ತು ನುಡಿ ಹಾಗೂ ಧರಿಸುವ ಬಟ್ಟೆ ಎಲ್ಲವೂ ಕೂಡ ವೀಕ್ಷಕರಿಗೆ ಬಹಳ ಇಷ್ಟವಾಗಿದ್ದು ಮತ್ತೊಮ್ಮೆ ಕರ್ನಾಟಕದ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಇನ್ನು ವೈಷ್ಣವಿಗೌಡ ಅವರು ಅಗ್ನಿಸಾಕ್ಷಿ ನಂತರ ಕೆಲವೊಂದು ಕಾರ್ಯಕ್ರಮವನ್ನು ನಿರೂಪಣೆ ಕೂಡ ಮಾಡಿದ್ದು ಅಲ್ಲದೇ ಹಲವು ಶೋ ಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದ ಅವರು ಕೆಲವು ಸಿನಿಮಾಗಳಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿದ್ದರು. ಕಿರುತೆರೆ ಸಿನಿಮಾ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಬಹಳ ಸರಳವಾಗಿ ಮತ್ತು ಹೆಚ್ಚು ಮಾತನಾಡದೆ ಸೈಲೆಂಟ್ ಆಗಿದ್ದರು.
ತದನಂತರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ವಲ್ಪ ಸ್ಟ್ರಾಂಗ್ ಆಗಿಯೂ ಸಹ ಕಾಣಿಸಿಕೊಂಡ ಅವರು ಇದೀಗ ಬಿಗ್ ಬಾಸ್ ಮುಗಿದು ಸಹಜ ಜೀವನಕ್ಕೆ ಬಂದಿದ್ದಾರೆ.ಇನ್ನು ದೊಡ್ಮನೆಯಿಂದ ಹೊರಬಂದ ನಂತರ ವೈಷ್ಣವಿ ಗೌಡ ಅವರು ಹಲವಾರು ಫೋಟೋಶೂಟ್ ಗಳನ್ನು ಮಾಡಿಸಿದ್ದು ಎಲ್ಲವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಜೊತೆಗಿನ ಅವರ ಕೀಟಲೆ ವೀಕ್ಷಕರಿಗೆ ಭಾರೀ ಇಷ್ಟವಾಗಿದ್ದು ಯಾರ ಜೊತೆಯೂ ಕೂಡ ಅನ್ಯತಾ ಕಿರಿಕ್ ಮಾಡದೆ ಧ್ಯಾನ ಯೋಗ ಮಾಡುತ್ತಾ ಎಲ್ಲರ ಜೊತೆ ಖುಷಿ ಖುಷಿ ಇಂದ ವ್ಯವಹರಿಸುತ್ತಿದ್ದ ವೈಷ್ಣವಿ ಗೌಡ ರವರು ಬಿಗ್ ಬಾಸ್ ಮನೆಯ ಸ್ಟೈಲಿಷ್ ಐಕಾನ್ ಆಗಿದ್ದರು. ಹೌದು ಅವರಿಗೆ ಅಪಾರ ಅಭಿಮಾನಿಗಳು ಕೂಡ ಹುಟ್ಟಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರ ಬಂದ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ತನ್ನ ಡ್ಯಾನ್ಸ್ ಮೂಲಕ ಅಭಿಮಾನಿಗಳ ಮನಸ್ಸನ್ನು ಬರಸೆಳೆದಿದ್ದಾರೆ.
ಸದ್ಯ ಇತ್ತೀಚೆಗಷ್ಟೇ ಖ್ಯಾತ ಕೊರಿಯೋಗ್ರಾಫರ್ ಆದ ತಾರಕ್ ಕ್ಸೇವಿಯರ್ ಜೊತೆ ಡ್ಯಾನ್ಸ್ ರಿಹರ್ಸಲ್ ಮಾಡುತ್ತಾ ಫನ್ನಿ ಫನ್ಬಿಯಾಗಿ ಆಡಿರುವ ವೈಷ್ಣವಿ ಗೌಡ ಅವರ ವಿಡಿಯೋ ಒಂದು ಯೂ ಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದು ಇಬ್ಬರೂ ಕೀಟಲೆ ಮಾಡುತ್ತಾ ಕೊನೆಗೆ ಕಿರಿಕ್ ಪಾರ್ಟಿ ಸಿನಿಮಾದ ಹೇ ಹೂ ಆರ್ ಯೂ ಹಾಡಿಗೆ ಸಖತ್ ಆಗಿರುವ ಕೆಂಬಣ್ಣದ ಅಟೈರ್ ಹಾಕಿಕೊಂಡ ವೈಷ್ಣವಿ ಅವರು ತಾರಕ್ ಜೊತೆ ಸೂಪರ್ ಆಗಿ ಸ್ಟೆಪ್ ಹಾಕಿದ್ದರು.
ಈಗಾಗಲೇ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಈ ನಡುವೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು.
ವೈಷ್ಣವಿ ಗೌಡ ಅವರ ಈ ಡ್ಯಾನ್ಸ್ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.