Sapthami Gowda Age: ಕರಾವಳಿ ಭಾಗದ, ಜಾನಪದ ಹಿನ್ನಲೆಯುಳ್ಳ ಒಂದು ದೈವದ ಕಥೆಯನ್ನು ಕಾಡಿನೊಳಗಡೆ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಹೇಳಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರು ಕಾಂತಾರದ ಮೂಲಕ ಸಾಕಷ್ಟು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಚಿತ್ರ ಕನ್ನಡದಲ್ಲಿ ದೊಡ್ಡ ಹಿಟ್ ಆಗಿ, ಬೇರೆ ಭಾಷೆಗಳಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ
ಕರ್ನಾಟಕದ ಯಾವುದೇ ಚಿತ್ರಮಂದಿರ ಮಲ್ಟಿಪ್ಲೆಕ್ಸ್ ಗಳಿಗೆ ಹೋದರು ಕಾಂತರಾ ಸಿನಿಮಾದ್ದೇ ಹವಾ. ಸಿನಿಮಾದಲ್ಲಿ ಅಭಿನಯಿಸಿರುವಂತಹ ಪ್ರತಿಯೊಂದು ಪಾತ್ರವೂ ಬಹಳ ಹೈಲೈಟ್ ಆಗಿದ್ದು, ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರೆ ತಪ್ಪಾಗಲಾರದು. ತಮ್ಮ ಅಮೋಘ ನಟನೆಯ ಮೂಲಕ ಸಾಕಷ್ಟು ಜನಪ್ರಸಿದ್ಧಿ ಪಡೆದಿರುವ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಒಂದೇ ಒಂದು ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಹೀಗಿರುವಾಗ ಈ ನಟಿಯ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಲೇ ಇರುತ್ತದೆ. ಅದರಂತೆ ನಾವಿವತ್ತು ನಟಿ ಸಪ್ತಮಿ ಗೌಡ ಅವರ ನಿಜವಾದ ವಯಸ್ಸೆಷ್ಟು?
ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಂತಹ ಸಪ್ತಮಿ ಗೌಡ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸಕ್ಕತ್ ರಗಡಾಗಿ ಕಾಣಿಸಿಕೊಂಡು ಸ್ಟಾಂಗ್ಗಾದ ಡೈಲಾಗ್ಗಳನ್ನು ಹೊಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸೌಂಡು ಮಾಡಿದ್ದರು. ಅದರಂತೆ ಇದೀಗ ರಿಷಬ್ ಶೆಟ್ಟಿ ಅವರ ಕಾಂತರಾ ಸಿನಿಮಾದಲ್ಲಿ ಕಾಣಿಸಿಕೊಂಡು ಮತ್ತಷ್ಟು ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಕರ್ನಾಟಕದಾದ್ಯಂತ ಮಾತ್ರವಲ್ಲದೆ ಇಡೀ ದೇಶದಲ್ಲೇ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ತುಳು ಸೊಗಡಿನ ಕಾಂತರಾ ಸಿನಿಮಾ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನ ನೀಡುವಲ್ಲಿ ಯಶಸ್ವಿಯಾಗಿದ್ದು, ಮಂಗಳೂರಿನ ಭೂತಕೋಲ ಆರಾಧನೆ ಹಾಗೂ ಪಂಜುರ್ಲಿ ದೈವದ ವಿಶೇಷತೆಯನ್ನು ಎತ್ತಿ ತೋರಿಸಿದೆ.

ಇನ್ನು ಸಿನಿಮಾದಲ್ಲಿ ಲೀಲ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವಂತಹ ಸಪ್ತಮಿ ಗೌಡ ಫಾರೆಸ್ಟ್ ಆಫೀಸರ್ ಪಾತ್ರವನ್ನು ನಿಭಾಯಿಸಿದ್ದಾರೆ. ಇವರ ಅಭಿನಯಕ್ಕೆ ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾಗೆ ಹೇಳಿ ಮಾಡಿಸಿದಂತಹ ಹೀರೋಯಿನ್ ಎಂದು ಅಭಿಮಾನಿಗಳು ಲೀಲಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದ್ದಾರೆ.
ಸಿಂಗಾರ ಸಿರಿಯೇ ಹಾಡಂತೂ ಎಲ್ಲರ ನೆಚ್ಚಿನ ಮ್ಯೂಸಿಕ್ ಆಗಿದ್ದು ಇದರ ಮೂಲಕ ನಟಿ ಸಪ್ತಮಿ ಗೌಡ ಹೈಲೈಟ್ ಆದರೂ ಎಂದರೆ ತಪ್ಪಾಗಲಾರದು. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ 8 ಜೂನ್ 1996 ರಂದು ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಸಪ್ತಮಿ ಗೌಡ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳನೇ.
ಆಸಕ್ತಿ ಇದ್ದ ಕಾರಣ ಒಳ್ಳೆಯ ತರಬೇತಿ ಪಡೆದುಕೊಂಡು ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ 26 ವರ್ಷ ವಯಸ್ಸಾಗಿದ್ದು ಮುಂದಿನ ದಿನಗಳಲ್ಲಿ ಕನ್ನಡದ ಒಳ್ಳೊಳ್ಳೆ ಸಿನಿಮಾಗಳ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.