ಸೋಶಿಯಲ್ ಮೀಡಿಯಾದಲ್ಲಿ ಸದಾ ಈ ರೀತಿಯ ಮದುವೆ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಮದುವೆಯಲ್ಲಿ ನಡೆದ ಸಣ್ಣ ಸಣ್ಣ ಫನ್ನಿ ದೃಶ್ಯಗಳು ಸಹ ಮಿಂಚಿನಂತೆ ಹರಿದಾಡುತ್ತವೆ. ಮದುವೆಯಲ್ಲಿ ಕೆಲವೊಮ್ಮೆ ನವದಂಪತಿಯೇ ಹೆಜ್ಜೆ ಹಾಕಿ ಎಲ್ಲರನ್ನು ಅಚ್ಚರಿಗೊಳಿಸುತ್ತಾರೆ. ಇನ್ನು ಕೆಲ ಮದುವೆಗಳಲ್ಲಿ ಮಂಟಪಕ್ಕೆ ವಧು- ವರನ ಎಂಟ್ರಿಯೇ ರೋಚಕವಾಗಿರುತ್ತದೆ.
ಮದುವೆ ಅಂದ್ರೆ ಸಂಭ್ರಮ. ಕೇವಲ ಹೆಣ್ಣು-ಗಂಡಿನ ಬಂಧನವಲ್ಲ. ಎರಡು ಕುಟುಂಬಗಳ ನಡುವಿನ ಸಂಬಂಧ. ಇಂದು ಮದುವೆ ಅಂದ್ರೆ ಸಾಕು ಅಲ್ಲಿ ಡ್ಯಾನ್ಸ್ ಇರಲೇಬೇಕು. ದಕ್ಷಿಣ ಭಾರತದಲ್ಲಿಯೂ ಉತ್ತರ ಭಾರತದ ಶೈಲಿಯಂತೆ ಮದುವೆಗಳು ನಡೆಯುತ್ತಿದೆ. ಅರಿಶಿನ ಶಾಸ್ತ್ರ, ಮೆಹೆಂದಿ, ಸಂಗೀತ್, ಆರತಕ್ಷತೆ, ಮದುವೆ ಹೀಗೆ ಐದು ದಿನ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ನಗರ ಭಾಗಗಳಲ್ಲಿ ಸಂಗೀತ್ ದಿನದಂದು ಎರಡೂ ಕುಟುಂಬಗಳ ಸದಸ್ಯರು ಸಂತೋಷವಾಗಿ ಕುಣಿದು ಕುಪ್ಪಳಿಸುತ್ತಾರೆ,
ಇಲ್ಲೊಂದು ನವ ಜೋಡಿ ತಮ್ಮ ಆರತಕ್ಷತೆ ದಿನ ಸಿನೆಮಾ ಸ್ಟೈಲ್ ನಲ್ಲಿಕುಣಿದು ಕುಪ್ಪಳಿಸಿದ್ದಾರೆ. ಸಂತೋಷದಿಂದ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ನೆಟ್ಟಿಗರು ಅತ್ತಿಗೆಯ ಸಂಭ್ರಮವನ್ನು ಕಂಡು ಹಿರಿ ಹಿರಿ ಹಿಗ್ಗಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸರ್ವಾಂಕೃತಳಾದ ವಧು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ?.ಇದೀಗ ಮೆಹೆಂದಿಯ ಡಾನ್ಸ್ ನೋಡಿ.