ಚಿರು ಮತ್ತು ಮೇಘನಾ ರಾಜ್ ಮೊದ ಮೊದಲು ಕಲಾವಿದರಾಗಿ ಪರಿಚಯವಾದವರು. ಆನಂತರ ಇಬ್ಬರಲ್ಲೂ ಸ್ನೇಹ ಚಿಗುರಿತು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಹೀಗಾಗಿ ಇಬ್ಬರೂ ಪರಸ್ಪರ ಆ ಪ್ರೀತಿಯನ್ನು ಒಪ್ಪಿಕೊಂಡು, ಮನೆಯವರ ಅನುಮತಿ ಪಡೆದುಕೊಂಡೇ ಮದುವೆಯಾದರು. ಈ ಮದುವೆ ಸಿನಿಮಾ ರಂಗದ ಅನೇಕರು ಸಾಕ್ಷಿಯಾದರು.
ಮೇಘನಾ ಮತ್ತು ಚಿರು ಅವರದ್ದು ವಿಶೇಷ ರೀತಿಯ ಮದುವೆ. ಮೇಘನಾ ರಾಜ್ ಕುಟುಂಬ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಮಾಡಿದರೆ, ಚಿರು ಕುಟುಂಬ ಹಿಂದೂ ಸಂಪ್ರದಾಯದಂತೆ ಇಬ್ಬರನ್ನೂ ಸತಿಪತಿಯಾಗಿಸಿದರು. ಎರಡೂ ಕುಟುಂಬಗಳು ಒಪ್ಪಿಕೊಂಡು ಅದ್ದೂರಿಯಾಗಿಯೇ ಮದುವೆ ಮಾಡಿದರು. ಆದರೆ, ಎರಡೂ ಕುಟುಂಬಕ್ಕೂ ಈ ಆನಂದ ಹೆಚ್ಚು ಕಾಲ ಉಳಿಯಲಿಲ್ಲ.
ಚಿರಂಜೀವಿ ಸರ್ಜಾ ಅತೀ ಚಿಕ್ಕ ವಯಸ್ಸಿನಲ್ಲೇ 2020ರ ಜೂನ್ 7 ರಂದು ಹೃದಯಾಘಾತದಿಂದ ನಿಧನರಾದರು. ಜೊತೆಗೆ ಮೇಘನಾಗೆ ಉಡುಗೊರೆ ಎನ್ನುವಂತೆ ಪುತ್ರ ರಾಯನ್ ರಾಜ್ ಸರ್ಜಾ ಮಗುವನ್ನು ಕೊಟ್ಟು ಹೋಗಿದ್ದಾರೆ.ಇದೀಗ ಮಗುಗೆ ಮೇಘನಾ ಊಟ ಮಾಡಿಸಲು ಪಡುತ್ತಿರುವ ಕಷ್ಟ ನೋಡಿ.