Kabza movie release date: ಕಬ್ಜಾದ ಟೀಸರ್ ಸೆಪ್ಟೆಂಬರ್ 17 ರಂದು ಪ್ರೀಮಿಯರ್ ಆಗಿದ್ದು, ರವಿ ಬಸ್ರೂರ್ ಅವರ ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್ ಅವರ ವಿನ್ಯಾಸ ಮತ್ತು ಎಜೆ ಶೆಟ್ಟಿ ಅವರ ನುಣುಪಾದ ಛಾಯಾಗ್ರಹಣವನ್ನು ಹೊಂದಿರುವ ಚಿತ್ರವು ಮೆಗಾ ಚಮತ್ಕಾರವಾಗಿ ಕಾಣುತ್ತಿದೆ. ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ನಿಂದ ಸಿನಿರಸಿಕರಿಗೆ ಯುಗಾದಿ ಹಬ್ಬಕ್ಕೆ ಭರ್ಜರಿ ಉಡುಗೊರೆ* .
ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕನ್ನಡಿಗರ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”, 2023 ರ ಮಾರ್ಚ್ 17 ಅಂದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಇದೇ ಸಂದರ್ಭದಲ್ಲಿ ನಾಡಿನ ದೊಡ್ಡ ಹಬ್ಬವಾದ ಯುಗಾದಿ ಕೂಡ ಸಮೀಪದಲ್ಲಿರುವುದು ವಿಶೇಷ. ಕನ್ನಡದ ಅಭಿಮಾನಿಗಳು ಉಪೇಂದ್ರ ಅಭಿನಯದ ಕಬ್ಜಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಇದು ಅಪರಾಧ ಮತ್ತು ಗ್ಯಾಂಗ್ ಸ್ಟಾರ್ ಗಳ ಆಕ್ಷನ್ ಮತ್ತು ಮಾಸ್ ಚಿತ್ರವಾಗಿ ಬರುತ್ತಿದೆ.