ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮುದುಕನ ಮೇಲೆ ದಾಳಿ ಮಾಡಿದ ವಿಚಿತ್ರ ಪ್ರಾಣಿ…ಚಿಂದಿ ವಿಡಿಯೋ

39,747

ಬೈಕ್ ಸವಾರ (Bike Rider) ಮತ್ತು ರಸ್ತೆಯ(Road) ಮೇಲೆ ನಡೆದುಕೊಂಡು(Walking) ಹೋಗುತ್ತಿದ್ದಂತಹ ವೃದ್ಧನ(Old Man) ಮೇಲೆ ಗಾಯಗೊಂಡಿದ್ದ ಕತ್ತೆಕಿರುಬ(Hyna) ದಾಳಿ ನಡೆಸಿದ್ದು ಬಳಿಕ ಈ ಪ್ರಾಣಿ (Animal) ಪ್ರಾಣ ಕಳೆದುಕೊಂಡಿರುವಂತಹ ಘಟನೆ ಇದೀಗ ಮಹಾರಾಷ್ಟ್ರದ (Maharashtra) ಖೇಡ್ ತಾಲೂಕಿನ ಖಾರ್ಪುಡಿ ಗ್ರಾಮದಲ್ಲಿ ನಡೆದಿದೆ.

ಹೌದು ಸದ್ಯ ವೃದ್ಧನ ಮೇಲೆ ಏಕಾಏಕಿ ಕಿತ್ತುಕಿರುಬ ಪ್ರಾಣಿ ದಾಳಿ ಮಾಡಿರುವ ವಿಡಿಯೋವನ್ನು(Video) ದಾರಿ ಹೋಕರು ಕ್ಯಾಮೆರಾದಲ್ಲಿ(Camera) ಸರೆಹಿಡಿದಿದ್ದು ಖಾರ್ಪುಡಿ ಗ್ರಾಮದಲ್ಲಿ
ಕತ್ತೆಕಿರುಬ ದಾಳಿಯಿಂದ ಬೈಕ್ ಸವಾರ ಮತ್ತು ವೃದ್ಧನಿಗೆ ಗಾಯವಾಗಿದೆ. ಇನ್ನು ಗಾಯಕೊಂಡಿದ್ದ ಕತ್ತೆಕಿರುಬ ಇಬ್ಬರ ಮೇಲೆ ದಾಳಿ ಮಾಡಿದೆ ನಂತರ ಪ್ರಾಣ ಕಳೆದುಕೊಂಡಿದೆ. ಗಾಯದ ನೋವಿನಿಂದ ಈ ರೀತಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು(Forest Officers) ತಿಳಿಸಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು ಲೇಖನಿಯ ಕೆಳಗೆ ನೋಡಬಹುದು.

ಇನ್ನು ಉರುವಲು ಕಟ್ಟಿಗೆ ತರಲು ಹೋದಾಗ ಕತ್ತೆಕಿರುಬ ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿದ ಘಟನೆ ತಾಲೂಕಿನ ಬೇಕ್ಕೋಡ ಗ್ರಾಮದಲ್ಲಿ ನಡೆದಿತ್ತು.ಪುಂಡಲಿಕ ನಾರಾಯಣ ನಾಯ್ಕ ಎಂಬವರೆ ಗಾಯಗೊಂಡ ವ್ಯಕ್ತಿ. ಇವರು ಬೇಕ್ಕೋಡ ಅರಣ್ಯದಲ್ಲಿ ಮಾ. 12ರಂದು ಉರುವಲು ಕಟ್ಟಿಗೆ ತರಲು ಹೋಗಿದ್ದರು.

ಈ ವೇಳೆ ಕತ್ತೆಕಿರುಬ ಪ್ರಾಣಿಯೂ ದಾಳಿ ನಡೆಸಿ ಗಾಯಗೊಳಿಸಿದೆ. ಉರುವಲು ಕಟ್ಟಿಗೆ ಸಂಗ್ರಹಿಸುತ್ತಾ ಕತ್ತೆಕಿರುಬದ ಮರಿಗಳ ಬಳಿ ಹೋಗಿದ್ದ ಪುಂಡಲಿಕನ ಮೇಲೆ ಇದು ದಾಳಿ ಮಾಡಿದ ಪರಿಣಾಮ ಪರಚಿದ ಗಾಯಗಳಾಗಿವೆ.ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಪುಂಡಲಿಕ ಗುಣಮುಖರಾಗಿದ್ದು ಈ ಕುರಿತು ಅರಣ್ಯ ಇಲಾಖೆಯಲ್ಲಿ ಯಾವೂದೇ ದೂರು ದಾಖಲಾಗಿಲ್ಲ.

ಇತ್ತೀಚೆಗಷ್ಟೇ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್‌ ಹೋಬಳಿಯಲ್ಲಿ ಕತ್ತೆ ಕಿರುಬವನ್ನು ಕೆಲವರು ಹೊಡೆದು ಪ್ರಾಣ ತೆಗೆದಿದ್ದು ಇದಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಂಡೆಗಳ ನಡುವೆ ಇದ್ದ ಕತ್ತೆ ಕಿರುಬದ ಮೇಲೆ ಕಲ್ಲು ಬಡಿಗೆ ಕೊಡಲಿಯಿಂದ ದಾಳಿ ನಡೆಸಿ ಪ್ರಾಣ ತೆಗೆದು ವಿಕೃತಿ ಮೆರೆದಿದ್ದು ಹಲ್ಲೆ ನಡೆಸುವ ದೃಶ್ಯಗಳು ವೈರಲ್‌ ಆಗಿವೆ.

ಹಲ್ಲೆಕೋರರಿಂದ ತಪ್ಪಿಸಿಕೊಂಡು ಕತ್ತೆಕಿರುಬ ಬಂಡೆಗಳ ಗವಿಯೊಳಗೆ ಹೋದರೂ ಬಿಡದೆ ಕಲ್ಲಿನಿಂದ ಹೊಡೆದು ಅದರ ಕಾಲು ಮುರಿದು ಹೊರಗೆಳೆದು ಕೊಡಲಿ ಬಡಿಗೆಯಿಂದ ಬಡಿದು ಅಗಲಿಸಲಾಗಿದೆ. ದಾಳಿಯ ದೃಶ್ಯ ವೈರಲ್‌ ಆಗಿದ್ದರೂ ರಾಯಚೂರು ಜಿಲ್ಲಾ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.