ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾ ರಾ ರಕ್ಕಮ್ಮ ಹಾಡು ಹೇಳಿದ ಸಪ್ತಮಿ ಗೌಡ…ಚಿಂದಿ ವಿಡಿಯೋ

4,290

ಸದ್ಯ ಭಾರತೀಯ ಚಿತ್ರರಂಗದಲ್ಲೇ ಸನ್ಸೇಷನ್ ಮೂಡಿಸುತ್ತಿರುವ ಕಾಂತಾರ ಸಿನಿಮಾದಲ್ಲಿ ಶಿವನ ಪ್ರೇಯಸಿಯಾಗಿ ಹಾಗೂ ಫಾರೆಸ್ಟ್ ಗಾರ್ಡ್ ಆಗಿ ಮಿಂಚಿದ ಲೀಲಾ ಎಲ್ಲರಿಗೂ ಈಗ ಫೇವರೇಟ್ ಆಗಿದ್ದು ಕಾಂತಾರ ಸಿನಿಮಾದ ಲೀಲಾ ಸದ್ಯ ಎಲ್ಲೆಡೆ ವೈರಲ್ ಆಗಿದ್ದಾರೆ ಎನ್ನಬಹುದು.

ಇನ್ನು ಸಪ್ತಮಿ ಗೌಡ ಮೂಲತಃ ಬೆಂಗಳೂರಿನವರು ಎಂದರೆ ಖಂಡಿತವಾಗಿಯೂ ಈ ಸಿನಿಮಾ ನೋಡಿ ನಂಬುವುದು ಕಷ್ಟ ಎನ್ನಬಹುದು. ಯಾಕೆಂದರೆ ಕಾಂತಾರ ಸಿನಿಮಾದಲ್ಲಿ ಅಪ್ಪಟ ದೇಸಿ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಸಪ್ತಮಿಯ ಲೀಲಾ ಪಾತ್ರದ ಲುಕ್ ಕಾಸ್ಟ್ಯೂಮ್ ಹಾವ ಭಾವ ಎಲ್ಲರಿಗೂ ಮೆಚ್ಚುಗೆಯಾಗಿದ್ದು ಖಡಕ್ ಹಳ್ಳಿ ಹುಡುಗಿಯಾಗಿ ಕಾಣಿಸಿದ್ದಾರೆ ಸಪ್ತಮಿ ಗೌಡ.

ಹೌದು ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಕಾಣಿಸಿಕೊಂಡ ಸಪ್ತಮಿ ಯವರು ಅದೇ ಸಮಯದಲ್ಲಿ ಸುಂದರವಾದ ಹಳ್ಳಿ ಯುವತಿಯಾಗಿಯೂ ಕೂಡ ಪ್ರೇಕ್ಷಕರನ್ನ ರಂಜಿಸಿದ್ದಾರೆ.
ಇನ್ನು ಈ ಸಿನಿಮಾದ ಸಿಂಗಾರ ಸಿರಿಯೇ ಹಾಡು ನಂಬರ್ ವನ್ ಆಗಿದ್ದು ಎಲ್ಲೆಡೆ ವೈರಲ್ ಆಗಿದೆ.

ಹೌದು ಶಿವ ಹಾಗೂ ಲೀಲಾ ಅವರ ಕ್ಯೂಟ್ ಲುಕ್ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದ್ದು ಇನ್ನು ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಯುವ ನಟಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್​​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿಯಾಗಿರುವುದು ವಿಶೇಷ.ಇದೀಗ ಗಾನ ಬಜಾನ ಸೀಸನ್ ೩ ಶೋನಲ್ಲಿ ಅವರು ರಕ್ಕಮ್ಮ ಹಾಡು ಹಾಡಿರುವ ವಿಡಿಯೋ ನೋಡಿ.