ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾತ್ರಿ ಒಟ್ಟಿಗೆ ಕಾಣಿಸಿಕೊಂಡ ಚಿರತೆ ಮತ್ತು ಹುಲಿ…ಸಿಸಿಟಿವಿ ವಿಡಿಯೋ ಚಿಂದಿ

24,471

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಾಡಿನ(Forest) ಉಗ್ರ ಪ್ರಾಣಿಗಳು(Fierce Animals)
ನಾಡಿನತ್ತ ಲಗ್ಗೆ ಇಡುತ್ತಿವೆ. ಹೌದು ಇದರಿಂದ ಜನಸಾಮಾನ್ಯರ ಜೀವನವು ಕೊಂಚ ಭಯ ಭೀತವಾಗಿದ್ದು (Fear)
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿರುವುದಕ್ಕೆ ಕಾರಣಗಳು ಕೂಡ ಹಲವಾರಿದೆ. ಹೌದು ಇದನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಇದು ನಾವೇ ತಂದುಕೊಂಡ ಆತಂಕವಾಗಿದೆ.

ಬೆಂಗಳೂರಿನ (Banglore) ಪೂರ್ವ ವಲಯದಲ್ಲಿ ಚಿರತೆ (Leopard) ಪ್ರತ್ಯಕ್ಷ ಹಾಗೂ ಚಾಮರಾಜನಗರದ (Chamarajanagar)ಹಳ್ಳಿಗಳಿಗೆ ದಾಳಿ ಇಟ್ಟ ಆನೆಯ(Elephant) ರೌದ್ರಾವತಾರವೂ ಈ ಹಿಂದೆ ದೊಡ್ಡ ಸುದ್ದಿಯಾಗಿತ್ತು.

ಅಷ್ಟಕ್ಕೂ ಈ ಕಾಡು ಪ್ರಾಣಿಗಳು(Wild Animals) ನಾಡಿಗೆ ದಾಳಿ ಇಡುತ್ತಿರುವುದು ಯಾಕೆಂದು ಪ್ರಶ್ನಿಸುವವರಿಗೆ ಒಂದೇ ಶಬ್ದದಲ್ಲಿ ಉತ್ತರಿಸುವುದಾದರೆ ಅರಣ್ಯ ನಾಶ (Forest Destruction) ಎಂದೇ ಹೇಳಬಹುದು. ಹೌದು ಇದು ನಾವೇ ತಂದುಕೊಂಡ ಆಪತ್ತಾಗಿದ್ದು ಅವುಗಳ ಆಹಾರ(Food) ಮತ್ತು ವಾಸಸ್ಥಾನದ ಮೇಲೆ ದಾಳಿ ಮಾಡಿದ್ದರಿಂದ ಇಂದು ನಾವು ಇದನ್ನು ಅನುಭವಿಸಲೇಬೇಕು.

5 ವರುಷಗಳ ಹಿಂದೆ ವರ್ತೂರಿನ ವಿಬ್ ಗಯಾರ್ ಶಾಲೆಗೆ ಚಿರತೆಯಿಂದು ನುಗ್ಗಿದ್ದು ನಂತರದ ದಿನಗಳಲ್ಲಿ ಮತ್ತೆರಡು ಚಿರತೆಗಳು ಕೂಡ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದವು. ಹೌದು ಹೀಗೆ ಇವು ಯಾಕೆ ನಾಡಿನತ್ತ ಮುಖ ಮಾಡುತ್ತಿವೆ ಎಂದು ಉತ್ತರ ಹುಡುಕಿ ಹೊರಟಾಗ ಅನೇಕ ಅಂಶಗಳು ಕಣ್ಣಿಗೆ ಬಂದಿದ್ದು.

ವರ್ತೂರು ಮಹಾನಗರದ ಕಸ ವಿಲೇವಾರಿಯಮ್ನು ಕೇಂದ್ರವಾಗಿ ಬದಲಾಗಿಸಿದ್ದರಿಂದ ಇದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ನಿರಂತರ ಪ್ರತಿಭಟನೆಯನ್ನು ಮಾಡಿದ್ದು ಕಸದ ರಾಶಿ ಹೆಚ್ಚಿದ್ದರಿಂದ ಬೀದಿ ನಾಯಿಗಳು(Dogs) ಕೂಡ ಹೆಚ್ಚಿದವು. ಆದ ಕಾರಣ ನಾಯಿಗಳನ್ನು ತಿನ್ನಲು ಚಿರತೆಗಳು ಅರಣ್ಯ ಬಿಟ್ಟು ನಾಡಿಗೆ ಆಗಮಿಸಿದ್ದು ವರ್ತೂರು ಹೊರವಲಯದ ಕೃಷ್ಣಗಿರಿ ಅರಣ್ಯದಿಂದ(Krishna Giri Forest) ಚಿರತೆಗಳು ಬಂದಿದ್ದವು ಎಂದೇ ಹೇಳಲಾಗುತ್ತಿತ್ತು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅರಣ್ಯ ಪ್ರದೇಶ ಕಣ್ಮರೆಯಾಗುತ್ತಿರುವುದರಿಂದ ವನ್ಯಜೀವಿಗಳು ಹಾಗೂ ಮಾನವ ನಡುವಿನ ಸಂಘರ್ಷ ಹೆಚ್ಚುತ್ತಲೇ ಇದೆ. ಹೌದು ಪ್ರತಿ ವರುಷವೂ ಕೂಡ ಇಂಥಹ 300 ಘಟನೆಗಳು ಸಂಭವಿಸುತ್ತಿದ್ದು ಮಾನವನ ಅತಿಕ್ರಮ ಪ್ರವೇಶವೇ ಈ ರೀತಿಯಾದ ಘಟನೆಗಳಿಗೆ ಕಾರಣವಾಗುತ್ತಿದೆ ಎಂದೇ ಹೇಳಲಾಗುತ್ತಿದೆ.

ತಲೆ ಎತ್ತಿರುವ ಕಾಂಕ್ರೀಟ್ ಗಳು ಅರಣ್ಯ ಪ್ರದೇಶದ ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆ ಇಟ್ಟಿದ್ದು ವನ್ಯಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ಸುರಕ್ಷತಾ ವಲಯ ಸ್ಥಾಪಿಸಿದರೆ ಇಂಥ ಘಟನೆಗಳಿಂದ ರಕ್ಷಣೆ ಪಡೆಯಬಹುದು ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಸದ್ಯ ಇದೀಗೆ ಪಟ್ಟಣ ವೊಂದರಲ್ಲಿ ಚಿರತೆ ಹಾಗೂ ಹುಲಿ (Leopard & Tiger) ಎರಡು ಪ್ರತ್ತಕ್ಷವಾಗಿದ್ದು ಏನು ಮಾಡಿವೆ ನೀವೆ ನೋಡಿ.