ಕೆಲುವೊಮ್ಮೆ ಆನೆಗಳ ಆರ್ಭಟಕ್ಕೆ ಪ್ರವಾಸಿಗರ ಜೀವ ಬಾಯಿಗೆ ಬರುವಂತಾಗುತ್ತದೆ. ಈ ರೀತಿಯಾದ ಹಲವಾರು ಘಟನೆಗಳು ನಡೆದಿದ್ದು, ಪ್ರವಾಸಿಗರು ಸಫಾರಿಯ ಸಹವಾಸವೇ ಬೇಡ ಎಂದು ಹೇಳುತ್ತಿದ್ದಾರೆ. ಈ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆನೆಯ ಫೋಟೋವನ್ನು ತೆಗೆಯಲು ಪ್ರವಾಸಿಗರು ಮುಂದಾಗಿದ್ದರು.
ಇದೇ ವೇಳೆ ಬೈಕ್ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಆಕ್ರೋಶಗೊಂಡ ಈ ಮದಗಜ ಆತನನ್ನ ಹಿಂಬಾಲಿಸುತ್ತದೆ. ಈ ವೇಳೆ ಜೀಪ್ ನಲ್ಲಿದ್ದ ಮಹಿಳೆಯರು ಆನೆಯ ಫೋಟೋವನ್ನು ತೆಗೆಯುತ್ತಿದ್ದು ಇದರಿಂದ ಆಕ್ರೋಶಗೊಂಡ ಆನೆ ವೇಗವಾಗಿ ಜೀಪ್ ಬಳಿ ಬಂದು ನಿಲ್ಲುತ್ತದೆ.
ಆಕ್ರೋಶವಾಗಿ ತಮ್ಮ ಬಳಿ ಬರುತ್ತಿರುದ್ದ ಆನೆಯನ್ನು ನೋಡಿದ ಮಹಿಳೆಯರು ಜೋರಾಗಿ ಕೂಗೂತ್ತ ಜೀಪ್ ಅನ್ನು ಚಲಾಯಿಸುವಂತೆ ಕಿರುಚುತ್ತಾರೆ.ಇನ್ನೇನು ಆ ಆನೆ ಜೀಪ್ ಹತ್ತಿರ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಜೀಪ್ ಮುಂದಕ್ಕೆ ಪಾಸಾಗಿದ್ದು ಹೋದ ಜೀವ ಬಂದಂತಾಗಿದೆ.
ಆದರೆ ಸ್ಥಳದಲ್ಲೇ ನಿಂತಿದ್ದ ಬೈಕ್ ಬಳಿ ಹೋದ ಆನೆ ಅದನ್ನು ತಳ್ಳಿ ಕೆಳಗೆ ಬೀಳಿಸುತ್ತದೆ. ಒಟ್ಟಿನಲ್ಲಿ ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಆನೆಯನ್ನು ಕೆಣಕಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಕೆಲವೊಮ್ಮೆ ಜನರದ್ದು ಯಾವುದೇ ರೀತಿಯಾ ತಪ್ಪಿಲ್ಲದ್ದರು ಕೂಡ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಒಂಟಿ ಸಲಗಗಳು ದಾಳಿ ಮಾಡಿರುವ ಅನೇಕ ಘಟನೆಗಳಿವೆ. ಅದೇ ರೀತಿಯ ವಿಡಿಯೋ ನೋಡಿ.