ಸದ್ಯ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ರವರು ವರುಷಗಳ ಬಳಿಕ ಮತ್ತೊಮ್ಮೆ ಸಿನಿಮಾದತ್ತ ಮುಖ ಮಾಡಿದ್ದು ಪುತ್ರನಿಗೆ ಹೆಚ್ಚಿನ ಸಮಯ ಕೊಟ್ಟಿದ್ದ ಮೇಘನಾ ರಾಜ್ ರವರು ಬಣ್ಣದ ಲೋಕಕ್ಕೆ ಈಗಾಗಲೇ ಮರಳಿದ್ದಾರೆ. ಸದ್ಯ ನಟಿ ಚಿರಂಜೀವಿ ಸರ್ಜಾ ಗೆಳೆಯರೆಲ್ಲ ಜೊತೆಗೆ ಇರುವುದರಿಂದ ಮೊದಲಿನ ಅದೇ ಕಾನ್ಫಿಡೆನ್ಸ್ ನಲ್ಲಿಯೇ ಮೇಘನಾ ರಾಜ್ ರವರು ಇದೀಗ ಮರಳಿ ಬಣ್ಣದ ಜಗತ್ತಿಗೆ ಕಾಲಿಟ್ಟಿರುವುದು ಬಹಳ ವಿಶೇಷವಾಗಿದೆ.
ಹೌದು ಮೇಘನಾ ರಾಜ್ ಅಭಿನಯದ ಬಗ್ಗೆ ಕನ್ನಡ ಪ್ರೇಕ್ಷಕರ ಚೆನ್ನಾಗಿ ಗೊತ್ತೇ ಇದೆ. ಮೇಘನಾ ಅವರಿಗೆ ತಮೆಫೆ ಹೊಂದುತ್ತದೆ ಅನಿಸುವ ಪಾತ್ರವನ್ನೆ ನಿರ್ದೇಶಕ ಪನ್ನಗಾ ಭರಣ ರವರು ಪಾತ್ರದ ಡಿಸೈನ್ ಮಾಡಿದ್ದು ಆ ಕ್ಯಾರೆಕ್ಟರ್ನ ಚಿತ್ರೀಕರಣ ಸಹ ಇದೀಗ ಶುರು ಆಗಿದೆ. ವಿಶೇಷವೆಂದರೆ ಮೇಘನಾ ಅಭಿನಯದ ಈ ಚಿತ್ರಕ್ಕೆ ಈಗ ಕನ್ನಡದ ಮತ್ತೊಬ್ಬ ನಾಯಕನ ಎಂಟ್ರಿ ಆಗಿರುವುದು ವಿಶೇಷ.
ನಟ ಚಿರಂಜೀವಿ ಸರ್ಜಾ ಸ್ನೇಹ ಜೀವಿ ಅನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಗೊತ್ತಿದೆ. ಹೌದು ಗೆಳೆಯರಿಗೂ ಕೂಡ ಹೆಚ್ಚು ಸಮಯ ಕೊಡುತ್ತಿದ್ದಂತಹ ಚಿರಂಜೀವಿ ಸರ್ಜಾ ಅಂದರೆ ಎಲ್ಲರಿಗೂ ಕೂಡ ಪಂಚ ಪ್ರಾಣವೇ ಆಗಿದ್ದು ಚಿರು ಇದ್ದಲ್ಲಿ ನಗು ಗ್ಯಾರಂಟಿ ಅನ್ನೋ ವಿಷಯ ಎಲ್ಲರಿಗೂ ಗೊತ್ತಿತ್ತು.
ಹೌದು ಆದರೆ ಚಿರು ಇಲ್ಲವಾದ ಮೇಲೆ ಗೆಳಯರ ಬಳಗದಲ್ಲಿದ್ದ ಆ ನಗು ಮಾಸಿ ಹೋಗಿದ್ದು ಪತ್ನಿ ಮೇಘನಾ ರಾಜ್ ಕೂಡ ಚಿರುನನ್ನ ಬಹಳಾನೇ ಮಿಸ್ ಮಾಡಿಕೊಳ್ತಿದ್ದಾರೆ ಎನ್ನಬಹುದು. ಇದೀಗ ಮೇಘನಾ ರಾಜ್ ಹೇಗೆ ಮಲಯಾಳಿ ಮಾತಾಡುತ್ತಾರೆ ನೋಡಿ.