Rapid Fire With Cute Rachita Ram: ನಮ್ಮ ಕನ್ನಡ ಚಿತ್ರರಂಗದ ಗುಳಿಗೆನ್ನೆ ಸುಂದರಿ ಪಡ್ಡೆ ಹುಡುಗರ ಪಟ್ಟದರಸಿ ನಟಿ ರಚಿತಾ ರಾಮ್ ರವರು ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಸ್ಯಾಂಡಲ್ವುಡ್ ಗೆ ಕಾಲಿಟ್ಟು ದಶಕ ಕಳೆದರೂ ಕೂಡ ಇನ್ನೂ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಏಕೈಕ ನಟಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಒಂದು ರೀತಿ ಲಕ್ಕಿ ಹೀರೋಯಿನ್ ಎಂದೇ ಹೇಳಲಾಗುವ ರಚಿತಾ ರಾಮ್ ರವರು ಪಡ್ಡೆ ಹೈಕಳ ಮನದರಸಿಯೂ ಕೂಡ ಹೌದು. ರಚಿತಾ ರಾಮ್ ಕಿರುತೆರೆಯಲ್ಲಿ ಅಭಿನಯಿಸಿದ ಒಂದೇ ಧಾರಾವಾಹಿಗೆ ಸ್ಯಾಂಡಲ್ವುಡ್ ನಲ್ಲಿ ಅವಕಾಶ ದೊರೆತಿದ್ದು ಅದರಲ್ಲಿಯೂ ಕೂಡ ಡಿ ಬಾಸ್ ದರ್ಶನ್ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ರಚಿತಾ ರಾಮ್ ಅವರ ಅದೃಷ್ಟವೇ ಬದಲಾಯಿತು ಹಾಗೂ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು.
ರಚಿತಾ ರಾಮ್ ಅವರ ಮುದ್ದಿನ ಅಕ್ಕನ ಹೆಸರು ನಿತ್ಯಾ ರಾಮ್. ನಿತ್ಯ ಅವರು ಬೆಂಕಿಯಲ್ಲಿ ಅರಳಿದ ಹೂವು ರಾಜಕುಮಾರಿ ಕರ್ಪೂರದ ಗೊಂಬೆ ಮನೆದೇವ್ರು ಹೀಗೆ ಕನ್ನಡದ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ತೆಲುಗು ಕಿರುತೆರೆ 2 ಧಾರಾವಾಹಿಗಳಲ್ಲಿ
ಯೂ ಕೂಡ ಅಭಿನಯಿಸಿದ್ದು ಇನ್ನು ಕನ್ನಡದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರ್ಯಾಪಿಡ್ ಫೇರ್ ಪ್ರಶ್ನೆಯಲ್ಲಿ ರಚಿತಾರಾಮ್ ಕೊಟ್ಟ ಉತ್ತರ ನೋಡಿ.