ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪುಟ್ಟ ಡ್ರೆಸ್ ಹಾಕಿ ನಡೆದುಕೊಂಡು ಬಂದ ರಶ್ಮಿಕಾ ಮಂದಣ್ಣ..ಚಿಂದಿ ವಿಡಿಯೋ

626

ನಟಿ ರಶ್ಮಿಕಾ ಮಂದಣ್ಣ ರವರು ಸದ್ಯ ದಕ್ಷಿಣದಿಂದ ಉತ್ತರದವರೆಗೂ ಮಿಂಚುತ್ತಿದ್ದಾರೆ. ಹೌದು  ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ  ಇದೀಗ ಬಾಲಿವುಡ್ ಸಿನಿಮಾ ಮಾಡಲು ಸಜ್ಜಾಗಿದ್ದು ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ರಶ್ಮಿಕಾ ಈಗ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಟಾಲಿವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿ ಯಶಸ್ಸು ಗಳಿಸುತ್ತಿದ್ದಂತೆ ರಶ್ಮಿಕಾ ಸದ್ಯ ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಹೌದು ಕನ್ನಡದಿಂದ ಟಾಲಿವುಡ್ ಗೆ ಹಾರಿದ್ದ ರಶ್ಮಿಕಾ ತೆಲುಗಿನಲ್ಲಿ ಯಶಸ್ಸು ಗಳಿಸುತ್ತಿದ್ದು ಹೈದರಾಬಾದ್ ಗೆ ಶಿಫ್ಟ್ ಆಗಿದ್ದಲ್ಲದೇ ಹೈದರಾಬಾದ್ ನಲ್ಲಿ ಮನೆ ಸಹ ಖರೀದಿಸಿದ್ದರು. ಸದ್ಯ ಇದೀಗ ಮುಂಬೈಗೆ ಶಿಫ್ಟ ಆಗುತ್ತಿದ್ದಾರೆ.

 

ಹೌದು ಬಾಲಿವುಡ್ ನಲ್ಲಿ ಒಂದು ಸಿನಿಮಾಗೆ ಅವಕಾಶ ಸಿಗುತ್ತಿದ್ದಂತೆ ರಶ್ಮಿಕಾ ರವರು ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಹಿಂದಿ ಸಿನಿಮಾಗಾಗಿ ರಶ್ಮಿಕಾ ಮುಂಬೈ ಮತ್ತು ಹೈದರಾಬಾದ್ ನಡುವೆ ತುಂಬಾ ಓಡಾಡುತ್ತಿದ್ದು ಹಾಗಾಗಿ ಮುಂಬೈನಲ್ಲೇ ಮನೆ ಇದ್ದರೆ ಉತ್ತಮ ಎಂದು ನಿರ್ಧರಿಸಿ ಮುಂಬೈ ನಗರದಲ್ಲಿ ಮನೆ ಖರೀದಿಸಿದ್ದಾರಂತೆ.

ರಶ್ಮಿಕಾ ಸದ್ಯ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದು ಇದಲ್ಲದೆ ರಶ್ಮಿಕಾ ಹಿಂದಿಯ ಮತ್ತೊಂದು ಸಿನಿಮಾಗೆ ಸಹಿ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ಮುಂದೆ ರಶ್ಮಿಕಾ ಬಾಲಿವುಡ್ ನಲ್ಲಿ ಬ್ಯುಸಿಯಾಗುವ ಸಾಧ್ಯತೆ ಇರುವ ಕಾರಣ ಮೊದಲೇ ಯೋಚಿಸಿ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಮುಂಬೈನಲ್ಲಿ ರಶ್ಮಿಕಾ ಇಷ್ಟು ದಿನ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರಂತೆ. ಆದರೆ ಇನ್ಮುಂದೆ ತನ್ನದೆ ಮನೆಯಲ್ಲಿ ಇರಲಿದ್ದು ಮುಂಬೈ ನಗರಕ್ಕೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಮನೆ ಖರೀದಿಯ ಬಗ್ಗೆ ರಶ್ಮಿಕಾ ಎಲ್ಲೂ ಬಹಿರಂಗ ಪಡಿಸಿಲ್ಲ. ಇನ್ನು ಇತ್ತೀಚಿಗಷ್ಟೆ ರಶ್ಮಿಕಾ ಹೊಸ ಕಾರನ್ನು ಖರೀದಿಸಿದ್ದು ದುಬಾರಿ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದರು.

ರಶ್ಮಿಕಾ ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ ೨ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ತೆಲುಗಿನ ಮತ್ತೊಂದು ಸಿನಿಮಾಗೂ ಸಹಿ ಮಾಡಿದ್ದಾರೆ. ಸದ್ಯ ರಶ್ಮಿಕಾ ಮುಂಬೈನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು ರಶ್ಮಿಕಾ ಎಷ್ಟು ಕ್ಯೂಟ್ ಆಗಿ ಕಾಣುಸುತ್ತಿದ್ದಾರೆ ನೀವೆ ನೋಡಿ.