ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟಿ ಅಮೂಲ್ಯ ಎಂಗೇಜ್ಮೆಂಟ್ ಹೇಗಿತ್ತು ನೋಡಿ…ಚಿಂದಿ ವಿಡಿಯೋ

63,367

ಚಿತ್ರರಂಗದಲ್ಲಿ ಗೋಲ್ಡನ್ ಕ್ವಿನ್ ಎಂದೇ ಖ್ಯಾತಿ ಪಡೆದಿರುವ ಅಪ್ಪಟ ಕನ್ನಡತಿ ಎಂದರೆ ನಟಿ ಅಮೂಲ್ಯ. ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ನಂತರದ ದಿನಗಳಲ್ಲಿ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆಯುತ್ತಾರೆ. ಇನ್ನು ಮೂಲತಃ ಮಂಡ್ಯದಲ್ಲಿ ಜನಿಸಿದ ಅಮೂಲ್ಯ ರವರು ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಕೆಂಪರಸ ಹಾಗೂ ಜಯಲಕ್ಷ್ಮಿ ಎಂಬ ದಂಪತಿಗೆ ಜನಿಸಿದ ಅಮೂಲ್ಯ ಅವರಿಗೆ ಇಬ್ಬರು ಸಹೋದರರು ಕೂಡ ಇದ್ದು ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯ ಕ್ರೀಡೆ ಹಾಗೂ ನೃತ್ಯ ಎಲ್ಲದರಲ್ಲೂ ಕೂಡ ಪರಿಣಿತಿ ಹೊಂದಿದ್ದರು.

ಇನ್ನು ಐದನೇ ವಯಸ್ಸಿನಲ್ಲಿಯೇ ವಿಷ್ಣುವರ್ಧನ್ ರವರ ಪರ್ವ ಚಿತ್ರದ ಮೂಲಕ ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಬಾಲನಟಿಯಾಗಿ ಸುಮಾರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಅಮೂಲ್ಯ ಕಲಾ ಸಾಮ್ರಟ್ ಎಸ್ ನಾರಾಯಣ್ ನಿರ್ದೇಶನದಲ್ಲಿ 2007 ರಲ್ಲಿ ಬಿಡುಗಡೆಯಾದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲೇ ತಮ್ಮ ಮುಗ್ದತೆ ಹಾಗೂ ಅಭಿನಯದ ಮೂಲಕ ಸೂಪರ್ ಸ್ಟಾರ್ ಅದ ಈ ನಟಿ ಚಿತ್ರರಂಗದ ಭರವಸೆಯ ನಟಿಯಾಗುತ್ತಾರೆ.

 

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅವರ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳಲ್ಲವೂ ಸಹ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ. ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡುಕೊಂಡ ಈ ಜೋಡಿಗೆ ಈಗಲೂ ಸಹ ಚಿತ್ರರಂಗದಲ್ಲಿ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ತಮ್ಮ ಮೊದಲ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡ ಅಮೂಲ್ಯ ನಾನು ನನ್ನ ಕನಸು ಚಿತ್ರದಲ್ಲಿ ಪ್ರಬುದ್ಧ ಮಗಳಾಗಿ ಅಭಿನಯಿಸುವುದರ ಮೂಲಕ ಕನ್ನಡ ನಾಡ ಜನತೆಯ ಮನೆ ಮಗಳಾಗುತ್ತಾರೆ.

ಶ್ರಾವಣಿ ಸುಬ್ರಮಣ್ಯ ಚಿತ್ರದಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ಗೋಲ್ಡನ್ ಕ್ವೀನ್ ಎಂಬ ಹೆಸರು ಪಡೆದುಕೊಂಡ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಗಜಕೇಸರಿ ಚಿತ್ರದಲ್ಲಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡು ಸಿನಿ ರಸಿಕರ ಗಮನ ಸೆಳೆಯುತ್ತಾರೆ. ಮಳೆ ಚಿತ್ರದಲ್ಲಿ ಇವರ ಅದ್ಭುತ ಅಭಿನಯಕ್ಕೆ ಎಲ್ಲರೂ ಮನಸೋತಿದ್ದು ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ತಮ್ಮ ಪಾತ್ರದ ಮೂಲಕ ವಿಭಿನ್ನವಾಗಿ ನಟಿಸಿ ತಾವೊಬ್ಬ ಅದ್ಭುತ ನಟಿ ಎಂಬುದನ್ನು ಸಾಬೀತುಪಡಿಸುತ್ತಾರೆ.

ಸುಮಾರು 14 ಚಿತ್ರಗಳಲ್ಲಿ ಅಭಿನಯಿಸಿ ತಾವು ಮಾಡಿರುವ ಎಲ್ಲ ಪಾತ್ರಗಳಿಗೆ ನ್ಯಾಯ ಒದಗಿಸಿರುವ ನಟಿ ಅಮೂಲ್ಯ ಶ್ರಾವಣಿ ಸುಬ್ರಮಣ್ಯ ಪಾತ್ರಕ್ಕಾಗಿ ಪ್ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ತಮ್ಮ ಸಿನಿ ಜೀವನದಲ್ಲಿ ಒಟ್ಟು ಹದಿನೈದು ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಿಂದ ಉತ್ತಮ ನಟಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಚಿತ್ರರಂಗದ ಭರವಸೆಯ ನಟಿಯಾಗಿದ್ದರು.

ಬಹುಬೇಡಿಕೆಯ ನಟಿಯಾಗಿ ಹಲವಾರು ಚಿತ್ರಗಳ ಆಫರ್ ಬರುತ್ತಿರುವಾಗಲೇ 2017 ರಲ್ಲಿ ಜಗದೀಶ್ ಆರ್ ಚಂದ್ರ ಅವರೊಂದಿಗೆ ಅದ್ಧೂರಿಯಾಗಿ ವಿವಾಹವಾದ ಅಮೂಲ್ಯ ಗೋ ಗ್ರೀನ್ ಸೇರಿದಂತೆ ಸಮಾಜಕ್ಕೆ ಹಲವಾರು ಒಳ್ಳೆ ಕೆಲಸಗಳನ್ನ ಮಾಡುತ್ತಿದ್ದಾರೆ. ಸದ್ಯ ಈ ಎಲ್ಲಾ ಕಾರಣದಿಂದ ಎಲ್ಲರ ಗಮನ ಸೆಳೆದರುವ ಅಮೂಲ್ಯ ಜಗದೀಶ್ ಅವರು ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.

ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಅವರ ನಿಶ್ಚಿತಾರ್ಥದ ವಿಡಿಯೋ ವೈರಲ್ ಆಗುತ್ತಿದ್ದು ಈ ನಿಶ್ಚಿತಾರ್ಥದ ಸಮಯದಲ್ಲಿ ಗಣೇಶ್ ರವರು ಯಾವ ರೀತಿ ನವದಂಪತಿಗಳಿಗೆ ಸಂತೋಷತಂದಿದ್ದಾರೆ ಹಾಗೂ ಅಮೂಲ್ಯ ಯಾವ ರೀತಿ ಭಾವುಕರಾಗಿದ್ದಾರೆ ನೀವೆ ನೋಡಿ.

ಇನ್ನು ಅಮೂಲ್ಯ ಮಾರ್ಚ್​ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದು ಈ ಬಗ್ಗೆ ಅವರ ಪತಿ ಜಗದೀಶ್ ರವರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಹೌದು ಆದರೆ ನಂತರ ಅಮೂಲ್ಯ ಸಾಮಾಜಿಕ ಜಾಲತಾಣದಿಂದ ಸ್ವಲ್ಪ ದೂರವಿದ್ದು ತದ ನಂತರ ಮಕ್ಕಳ ಕಾಲಿನ ಫೋಟೋ ಹಾಗೂ ಅವರ ಕೆಲ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಆಕ್ಟೀವ್​ ಆಗಿದ್ದರು. ಇತ್ತೀಚೆಗಷ್ಟೇ ಅವರು ತಮ್ಮ ಮೊದಲ ರೀಲ್ಸ್​ ಮಾಡಿ ಹಾಕಿದ್ದು ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು.

ಹೌದು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಮೊದಲ ಬಾರಿ ಹಾಡಿಗೆ ಡ್ಯಾನ್ಸ್​ ಮಾಡುವ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೂಲ್ಯ ಸುಂದರವಾಗಿ ಕಾಣಿಸಿಕೊಂಡಿದ್ದು ಫ್ಯಾನ್ಸ್​ ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ.

ನಟಿ ಅಮೂಲ್ಯ ನಟ ಶರಣ್ ಮತ್ತು ನಟಿ ನಿಶ್ವಿಕ ನಾಯ್ಡು ಅಭಿನಯದ ಗುರು ಶಿಷ್ಯರು ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಅವರು ಆಣೆ ಮಾಡಿ ಹೇಳುತೀನಿ ಎನ್ನುವ ಹಾಡಿಗೆ ರೀಲ್ಸ್ ಮಾಡಿದ್ದು ವಿಡಿಯೋಗೆ ನನ್ನ ಮೊದಲ ರೀಲ್ಸ್​ ಇದು ಅದರಲ್ಲೂ ಇದು ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಬರೆದುಕೊಂಡಿದ್ದಾರೆ.