ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕನ್ನಡದಲ್ಲಿ ಡೈಲಾಗ್ ಹೊಡೆದ ಸಲ್ಮಾನ್ ಖಾನ್…ಚಿಂದಿ ವಿಡಿಯೋ

183

Sudeep teaches kannada dialogue to Salman Khan : ಸದ್ಯ ದಬಾಂಗ್-3 ಸಿನಿಮಾದ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಹೌದು ಸ್ನೇಹಿತರು ಎನ್ನುವುದಕ್ಕಿಂದ ಸಹೋದರರ ಹಾಗೆ ಇದ್ದಾರೆ ಅಂದರೆ ತಪ್ಪಾಗಲ್ಲ. ಯಾಕಂದರೆ ಸುದೀಪ್ ನನ್ನ ಸಹೋದರ ಇದ್ದಹಾಗೆ ಎಂದು ಸಲ್ಮಾನ್ ಖಾನ್ ಸದಾ ಹೇಳುತ್ತಿರುತ್ತಾರೆ. ದಬಾಂಗ್-3 ಸಿನಿಮಾ ರಿಲೀಸ್ ಆಗಿ ವರುಷಗಳು ಕಳೆಯುತ್ತಾ ಬಂತು. ಸಿನಿಮಾ ನಂತರವು ಇಬ್ಬರ ಸ್ನೇಹ ಸಂಬಂಧ ಹಾಗೆ ಮುಂದುವರೆದಿದೆ.

ಇನ್ನು ಎಷ್ಟರ ಮಟ್ಟಿಗೆ ಅಂದರೆ ಸಲ್ಮಾನ್ ಖಾನ್ ಸಹೋದರನಂತೆ ಇರುವ ಕಿಚ್ಚನಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಹೌದು ಸಲ್ಮಾನ್ ಖಾನ್ ಬೆಲೆಬಾಳುವ ಉಡುಗೊರೆಯೊಂದಿಗೆ ಸುದೀಪ್ ಮನೆಗೆ ಬಂದಿದ್ದು ಸಲ್ಲು ಜೊತೆ ಕಿಚ್ಚನ ಮನೆಗೆ ಬಂದ ಆ ಉಡುಗೊರೆ BMW M5 ಕಾರು. ದುಬಾರಿ ಉಡುಗೊರೆ ಜೊತೆಗೆ ಮನೆಗೆ ಬಂದ ಸಲ್ಮಾನ್ ನೋಡಿ ಸುದೀಪ್ ಮೂಕವಿಸ್ಮಿತರಾಗಿದ್ದರು.

ಹೌದು ಸಲ್ಮಾನ್ ಖಾನ್ ಪ್ರೀತಿಯ ಕಿಚ್ಚನಿಗೆ 1.8 ಕೋಟಿ ಬಲೆ ಬಾಳುವ BMW M5 ಕಾರನ್ನು ಗಿಫ್ಟ್ ಆಗಿ ನೀಡಿದ್ದು ಇದೆ ದುಬಾರಿ ಕಾರಿನಲ್ಲಿ ಸಲ್ಮಾನ್ ಖಾನ್ ಸುದೀಪ್ ಮತ್ತು ಸುದೀಪ್ ತಂದೆ ಕುಳಿತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಜೊತೆಗೆ ಸುದೀಪ್ ಮನೆಗೆ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಕೂಡ ಬಂದಿದ್ದರು.

ಇನ್ನು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುದೀಪ್ ರವರು ನೀವು ಒಳ್ಳೆಯದು ಮಾಡಿದರೆ ನಿಮಗೆ ಖಂಡಿತ ಒಳ್ಳೆಯದೆ ಆಗುತ್ತದೆ. ನಟ ಸಲ್ಮಾನ್ ಖಾನ್ ಬಿಎಂಬ್ಲ್ಯೂ ಜೊತೆಗೆಯೆ ಮನೆಗೆ ಬಂದಿರುವುದು ಈ ಸಾಲನ್ನು ಮತ್ತಷ್ಟು ನಂಬುವ ಹಾಗೆ ಮಾಡಿದ್ದು ನನ್ನ ಮತ್ತು ನನ್ನ ಕುಟುಂಬದ ಮೇಲೆ ಈ ರೀತಿ ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸರ್. ನಿಮ್ಮ ಜೊತೆ ಕೆಲಸ ಮಾಡಿರುವುದು ನನ್ನ ಭಾಗ್ಗ ಎಂದು ಸಂತಸ ವ್ಯಕ್ತಪಡಿಸಿದ್ದರು.

ಇನ್ನು ಈ ಮೊದಲು ಅಂದರೆ ದಬಾಂಗ್-3 ಚಿತ್ರೀಕರಣ ಪ್ರಾರಂಭದಲ್ಲಿ ಸಲ್ಮಾನ್ ಖಾನ್ ಸುದೀಪ್ ಗೆ ಒಂದಿಷ್ಟು ಟಿ ಶರ್ಟ್ ಗಳನ್ನು ಗಿಫ್ಟಾಗಿ ನೀಡಿದ್ದಿ ಅಲ್ಲದೆ ಇತ್ತೀಚಿಗಷ್ಟೆ ಸಲ್ಮಾನ್ ಗೆ ತುಂಬ ಇಷ್ಟವಾದ ಜಾಕೆಟ್ ಅನ್ನು ಸುದೀಪ್ ಗೆ ಉಡುಗೊರೆಯಾಗಿ ಕೊಟ್ಟಿದ್ದರು. ಹೌದು ಜಾಕೆಟ್ ನಲ್ಲಿ ಸಲ್ಲುಗೆ ಇಷ್ಟವಾದ ಶ್ವಾನದ ಫೋಟೋ ಇತ್ತು. ಸಲ್ಲು ಕೊಟ್ಟಿರುವ ಜಾಕೆಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

ಇನ್ನು ಸುದೀಪ್ ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಇಬ್ಬರು ಸೂಪರ್ ಸ್ಟಾರ್ಸ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವಂತೆ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಇಬ್ಬರು ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಾರಾ ಕಾದುನೋಡಬೇಕು. ಈ ನಡುವೆ ಸುದೀಪ್ ರವರು ಸಲ್ಮಾನ್ ಗೆ ಕನ್ನಡ ಕಲಿಸುವ ವಿಡಿಯೋ ವೈರಲ್ ಆಗಿದ್ದು ಸಲ್ಲು ಕನ್ನಡದಲ್ಲಿ ಹೇಗೆ ಮಾತನಾಡಿದ್ದಾರೆ ನೀವೆ ನೋಡಿ.