ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮುಂಬೈನಲ್ಲಿಯೂ ಕನ್ನಡದಲ್ಲೇ ಮಾತಾಡಿದ ಗೂಗ್ಲಿ ನಟಿ ಕೃತಿ…ಚಿಂದಿ ವಿಡಿಯೋ

40,312

Kriti Kharbanda Speaks In Kannada About ‘Veerey Ki Wedding’ Movie: ಯಶ್ ರವರ ಗೂಗ್ಲಿ ಎಂಬ ಸಿನಿಮಾ ಮೂಲಕ ಗಮನಸೆಳೆದ ನಟಿ ಕೃತಿ ಕರಬಂಧ ಅವರು ಸದ್ಯ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಿದ್ದು ಆಗಾಗ ಅವರು ನಟ ಪುಲ್ಕಿಟ್ ಸಾಮ್ರಾಟ್ ರವರ ಜೊತೆಗೆ ಲವ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲಿತ್ತು. ಹೌದು ಆದರೆ ಕೃತಿ ಮಾತ್ರ ಮದುವೆ ಕುರಿತು ಇಲ್ಲಿಯವರೆಗೆ ಅಷ್ಟಾಗಿ ಬಾಯಿಯೇ ಬಿಟ್ಟಿರಲಿಲ್ಲ.

ಸದ್ಯ ಈಗ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮದುವೆ ಪ್ಲ್ಯಾನ್ ಬಿಚ್ಚಿಟ್ಟಿದ್ದು ನನ್ನ ಮದುವೆ ಯಾವಾಗ ಬೇಕಿದ್ದರೂ ಆಗಬಹುದು. ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಒಂದೂವರೆ ವರ್ಷದಿಂದ ಎಲ್ಲ ಶೂಟಿಂಗ್ ಶೆಡ್ಯೂಲ್ ಹಾಳಾಗುತ್ತಿದ್ದು ನಾನು ಯಾವಾಗ ಈ ಬಗ್ಗೆ ಮಾತನಾಡುತ್ತೀನೋ ಆಗಲೇ ತಪ್ಪಾಗತ್ತೆ. ಯಾವಾಗ ಮದುವೆ ಕನ್ಫರ್ಮ್ ಮಾಡ್ತೀನೋ ಆಗ ಎಲ್ಲರಿಗೂ ಹೇಳುವೆ.

ನನ್ನನ್ನು ದತ್ತು ತೆಗೆದುಕೊಂಡಿರುವ ಪೇಪರ್ ಇದ್ದರೆ ತೋರಿಸಿ. ಹೌದು ಏಕೆಂದರೆ ಮದುವೆ ಪ್ರಶ್ನೆ ಬಂದಾಗ ನಾನು ನನ್ನ ತಂದೆ-ತಾಯಿಗೆ ಮಾತ್ರ ಉತ್ತರ ನೀಡುವೆ. ಇನ್ನು ನಾನು ತುಂಬ ಖಾಸಗಿ ವ್ಯಕ್ತಿಯಾಗಿದ್ದು ಅದರ ಜೊತೆಗೆ ಸತ್ಯ ಏನು ಎಂಬುದನ್ನು ಒಪ್ಪಿಕೊಳ್ಳದೆ ಓಡಿ ಹೋಗುವ ವ್ಯಕ್ತಿಯೂ ಅಲ್ಲ ಎಂದು ಮದುವೆ ಬಗ್ಗೆ ಪ್ರಶ್ನೆ ಕೇಳುವವರಿಗೆ ಕೃತಿ ಈ ರೀತಿ ಉತ್ತರ ನೀಡಿದ್ದಾರೆ.

ಇನ್ನು ನಾನು ಹಾಗೂ ಪುಲ್ಕಿಟ್ ಡೇಟಿಂಗ್ ಮಾಡಲು ಆರಂಭಿಸಿದಾಗ ನಾನು ಇದರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದೆ. ನಾನು ಎಲ್ಲರ ಬಳಿ ಈ ವಿಷಯ ಹಂಚಿಕೊಂಡಿದ್ದೆ ಎಂದು ಭಾವಿಸುವೆ.ರಿಲೇಶನ್‌ಶಿಪ್‌ನಲ್ಲಿರೋದು ನನಗೆ ನಿಜಕ್ಕೂ ಭಯ ಹುಟ್ಟಿಸುವುದು. ಇನ್ನು ಇವೆಲ್ಲವೂ ನನಗೆ ಹಾಗೂ ನನ್ನ ಕುಟುಂಬಕ್ಕೆ ಸೇರಿದ ತುಂಬ ಖಾಸಗಿ ವಿಷಯ. ಅದೃಷ್ಟವೋ ದುರಾದೃಷ್ಟವೋ ನಾನು ಇದರಲ್ಲಿ ಯಾರನ್ನು ಒಳಗೆ ಬಿಡಲು ಅವಕಾಶ ಮಾಡಿಕೊಡೋದಿಲ್ಲ ಎಂದು ಈ ಹಿಂದೆ ಕೃತಿ ಹೇಳಿದ್ದರು..

ಇನ್ನು ಕನ್ನಡದ ಚಿರು ಗೂಗ್ಲಿ ಪ್ರೇಮ ಅಡ್ಡಾ ಸೂಪರ್ ರಂಗಾ,ಬೆಳ್ಳಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಯಶ್‌ಗೆ ನಾಯಕಿಯಾಗಿ ನಟಿಸಿದ್ದ ಗೂಗ್ಲಿ ಚಿತ್ರದ ಕೃತಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿತ್ತು.

ಹೌದು ಸದ್ಯ ಬಿಟೌನ್ ಅಡ್ಡಾದಲ್ಲಿ ಒಂದರ ಹಿಂದೆ ಒಂದು ಸಿನಿಮಾ ಮಾಡುತ್ತಾ ಮಾಡುತ್ತಾ ಬ್ಯುಸಿಯಾಗಿದ್ದು ಸದ್ಯ ಈಗ ಮದುವೆ ವಿಷ್ಯವಾಗಿ ಈ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ನಟಿ ಕೃತಿ ಕರಬಂಧ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದು ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಗೂಗ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಕೃತಿ ಕರಬಂಧ ಇದೀಗ ಖ್ಯಾತ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಗೂಗ್ಲಿ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ಗುರುತಿಸಿಕೊಂಡ ನಟಿಯ ಕೃತಿ ಕರಬಂದ ನಂತರ ಶಿವಣ್ಣ ನೆನಪಿರಲಿ ಪ್ರೇಮ್ ಚಿರಂಜೀವಿ ಸರ್ಜಾ ಪ್ರೇಮ್ ಅವರ ಜೊತೆ ಅಭಿನಯಿಸಿದ್ದರು. ಆದರೆ ಸುಂದರವಾಗಿದ್ದರೂ ಸಹ ನಂತರದ ದಿನಗಳಲ್ಲಿ ಅದು ಯಾಕೋ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದು 30 ವರ್ಷದ ಕೃತಿ ಕರಬಂಧ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ..

ಬಾಲಿವುಡ್ ಖ್ಯಾತ ನಟನ ಜೊತೆ ಸದ್ಯ ಇದೀಗ ಎರಡನೇ ಮದುವೆಯಾಗುತ್ತಿತ್ತು ಮುಂದಿನ ದಿನಗಳಲ್ಲಿ ಮದುವೆಯ ಸಮಾರಂಭ ನೆರವೇರಲಿದ್ದು ಇನ್ನು ಕೃತಿಕರಬಂದ ಮದುವೆಯಾಗುತ್ತಿರುವ ನಟ ಮತ್ತ್ಯಾರು ಅಲ್ಲ ಪುಲ್ಕಿತ್ ಸಾಮ್ರಾಟ್. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ಈ ಹಿಂದೆ ಒಂದು ಸಿನಿಮಾದಲ್ಲಿ ಕೃತಿಕರಬಂದ ಅವರು ಅಭಿನಯಿಸಿದ್ದು ಮದುವೆಯಾಗಿರುವ ನಟ ಪುಲ್ಕಿತ್ ಸಾಮ್ರಾಟ್ ಕಾನೂನಿನ ಮೂಲಕ ಮೊದಲ ಹೆಂಡತಿಯಿಂದ ದೂರವಾಗಿದ್ದು ಕೃತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಹೌದು 37 ವರ್ಷದ ಪುಲ್ಕಿತ್ ಸಾಮ್ರಾಟ್ ಅವರ ಜೊತೆ 30 ವರ್ಷದ ಕೃತಿ ಕರಬಂಧ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಇವರ ಆಪ್ತ ಮೂಲಗಳು ತಿಳಿಸಿದ್ದಾರೆ. ಈ ನಡುವೆ ಕೃತಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹೌದು ತಮ್ಮ ಹಿಂದಿ ಸಿನಿಮಾದ ಪ್ರಚಾರದ ವೇಳೆ ಬೆಂಗಳೂರಿಗೆ ಬಂದಿದ್ದ ಕೃತಿ ಅಚ್ಚುಕಟ್ಟಾಗಿ ಕನ್ನಡ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ. ಹೌದು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಜವಾದ ಕನ್ನಡತಿ ಕೃತಿ ರಶ್ಮಿಕ ಅಲ್ಲ ಎಂದು ನ್ಯಾಷನಲ್ ಕ್ರಶ್ ಕಾಲೆಳೆದಿದ್ದಾರೆ ನೆಟ್ಟಿಗರು.