Gijjagiri Song | Full Song | Speaker | Mangli | Kanakavva : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಗಾಯಕಿ ಮಂಗ್ಲಿ ಧ್ವನಿ ಅಂದರೆ ಎಲ್ಲರಿಗೂ ಕೂಡ ಇಷ್ಟ. ಹೌದು ಕನ್ನಡದಲ್ಲಿ ಹಾಡಿರುವುದು ಕೆಲವೇ ಹಾಡುಗಳಾದರೂ ಕೂಡ ಆಕೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಹೊಂದಿದ್ದು ಈಗಾಗಲೇ ತೆಲುಗಿನಲ್ಲಿ ಅನೇಕ ಸಿನಿಮಾ ಜಾನಪದ ಆಲ್ಬಂಗಳನ್ನು ಹಾಡಿರುವ ಮಂಗ್ಲಿಯವರು ಇತ್ತೀಚೆಗಷ್ಟೇ ಮೊದಲ ಬಾರಿಗೆ ಕನ್ನಡದಲ್ಲಿ ಭಕ್ತಿ ಗೀತೆಯೊಂದನ್ನು ಹಾಡಿದ್ದರು.
ಹೌದು ಇದು ಶಿವನನ್ನು ಸ್ತುತಿಸುವ ಹಾಡಾಗಿದ್ದು ಬೆಳ್ಳಿ ಬೆಟ್ಟವನಾಳೋನೆ ಎಂಬ ಹಾಡು ಸಂಗೀತಪ್ರಿಯರಿಗೆ ಬಹಳ ಮೆಚ್ಚುಗೆಯಾಗಿದ್ದು ಗಣೇಶ ಹಬ್ಬದ ವಿಶೇಷವಾಗಿ ಈ ಹಾಡು ಬಿಡುಗಡೆಯಾಗಿದ್ದು ಈ ಹಾಡಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ.
ಹೌದು ಬಾಜಿ ಎಂಬುವವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದು ದಾಮು ರೆಡ್ಡಿ ಈ ವಿಡಿಯೋ ನಿರ್ದೇಶನ ಮಾಡಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಮಂಗ್ಲಿ ಈ ಹಾಡನ್ನು ತೆಲುಗಿನಲ್ಲಿ ಹಾಡಿದ್ದು ಇದೀಗ ಕನ್ನಡದಲ್ಲಿ ಈ ಗೀತೆಯನ್ನು ಹೊರ ತರಲಾಗಿದೆ. ಇನ್ನು ಮಂಗ್ಲಿ ಈ ಹಾಡಿಗೆ ಹಾಡು ಹಾಡಿರುವುದಲ್ಲದೆ ಹೆಜ್ಜೆ ಕೂಡಾ ಹಾಕಿದ್ದರು.
ಇನ್ನು ಸುಮಾರು 66ಸಾವಿರಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದು ಮಂಗ್ಲಿ ಹೊಸ ಹಾಡಿಗೆ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ಮತ್ತಷ್ಟು ಕನ್ನಡ ಹಾಡುಗಳನ್ನು ಕೇಳಲು ನಾವು ಬಯಸುತ್ತೇವೆ ಎಂದು ಕೆಲವರು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಸಿನಿಮಾ ಭಕ್ತಿಗೀತೆ ಎಲ್ಲದಕ್ಕೂ ಮಂಗ್ಲಿ ಧ್ವನಿ ಹೊಂದುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಆಂಧ್ರಪ್ರದೇಶದ ಅನಂತಪುರಂಗೆ ಸೇರಿದ ಪುಟ್ಟ ಹಳ್ಳಿಯೊಂದರಲ್ಲಿ ಬಾಲು ನಾಯಕ್ ಹಾಗೂ ಲಕ್ಷ್ಮಿದೇವಿ ದಂಪತಿಯ ಮೊದಲ ಪುತ್ರಿಯಾಗಿ ಜನಿಸಿದ ಮಂಗ್ಲಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ ಇದ್ದು ತಂದೆ ತಾಯಿಯೊಂದಿಗೆ ವ್ಯವಸಾಯ ಮಾಡಲು ತೆರಳುತ್ತಿದ್ದ ಮಂಗ್ಲಿ ಯವರು ರಾಗಬದ್ಧವಾಗಿ ಹಾಡುತ್ತಾ ಕೆಲಸ ಮಾಡುವುದನ್ನು ನೋಡುತ್ತಿದ್ದ ನೆರೆಹೊರೆಯವರು ಮಗಳಿಗೆ ಸಂಗೀತ ಕಲಿಸುವಂತೆ ಮಂಗ್ಲಿ ತಂದೆಗೆ ಸೂಚಿಸಿದ್ದಾರೆ.
ಹೌದು ಅದರಂತೆ ಬಾಲು ನಾಯಕ್ ಮಗಳನ್ನು ಸಂಗೀತ ತರಗತಿಗೆ ಸೇರಿಸಿದ್ದು ಅನೇಕ ಸ್ಪರ್ಧೆಗಳಲ್ಲಿ ವೇದಿಕೆಗಳಲ್ಲಿ ಹಾಡಿರುವ ಮಂಗ್ಲಿ ಇದುವರೆಗೂ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಮಂಗ್ಲಿ ಸಹೋದರಿ ಇಂದ್ರಾವತಿ ಕೂಡಾ ಉತ್ತಮ ಗಾಯಕಿಯಾಗಿದ್ದು ಪುಷ್ಪ ಚಿತ್ರದ ಊ ಅಂಟಾವಾ ಮಾವ ಊಹೂ ಅಂಟಾವ ತೆಲುಗು ಹಾಡನ್ನು ಹಾಡಿದ್ದು ಇದೇ ಇಂದ್ರಾವತಿ.
ಕನ್ನಡದಲ್ಲಿ ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಇನ್ನು ಮಂಗ್ಲಿ ಗಾಯಕಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದು ಯಶ್ ಅಭಿನಯದ ಕೆಜಿಎಫ್ ಸಿನಿಮಾ ತೆರೆ ಕಂಡ ನಂತರ ತೆಲುಗಿನಲ್ಲಿ ಯಶ್ ಹಾಗೂ ಶ್ರೀನಿಧಿ ಶೆಟ್ಟಿಯನ್ನು ಮಂಗ್ಲಿ ಇಂಟರ್ ವ್ಯೂ ಮಾಡಿದ್ದರು.
ಹೌದು ಮಂಗ್ಲಿ ಹಾಡಿರುವ ಬಹುತೇಕ ಎಲ್ಲಾ ಸಿನಿಮಾ ಹಾಡುಗಳೂ ಹಿಟ್ ಆಗಿದ್ದು ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಕನ್ನಡಿಗರಿಗೆ ಪರಿಚಯವಾದ ಮಂಗ್ಳಿ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಹಾಡಿಗೂ ಧ್ವನಿ ನೀಡಿದ್ದಾರೆ. ಈ ಹಾಡು ಕೂಡಾ ಈಗಾಗಲೇ ಬಹಳ ಫೇಮಸ್ ಆಗಿದೆ. ಸದ್ಯ ಇದೀಗ ತೆಲುಗಿನಲ್ಲಿ ಮಂಗ್ಲಿ ಯವರ ಗಿಜ್ಜಗಿರಿ ಎಂಬ ಹೊಸ ಹಾಡು ಬಿಡುಗಡೆ ಆಗಿದ್ದು ಹಳ್ಳಿ ಸ್ಟೈಲ್ ನ ಈ ಹಾಡು ಹೇಗಿದೆ ನೀವೆ ನೋಡಿ.