ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಅನಭಿಷಕ್ತ ನಾಯಕಿಯಾಗಿ ಆಳಿ ಮೋಹಕತಾರೆಯಾಗಿ ಕನ್ನಡಿಗರ ಮನಸ್ಸು ಗೆದ್ದ ಚೆಲುವೆ ರಮ್ಯಾ. ಇನ್ನು ರಮ್ಯಾ ಅವರು 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಆ ನಂತರ ಅವರು ರಂಗ ಎಸ್ಎಸ್ಎಲ್ಸಿ ಎಕ್ಸ್ ಕ್ಯೂಸ್ ಮಿ ಕಂಠಿ ಗೌರಮ್ಮ ಅಮೃತದಾರೆ ಜೊತೆ ಜೊತೆಯಲಿ ಅರಸು ಕಿಚ್ಚ ಹುಚ್ಚ ಸಿದ್ಲಿಂಗು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ ಎನ್ನಬಹುದು.
ಸಿನಿಮಾ, ರಾಜಕಾರಣದಿಂದ ದೂರವಾಗಿರುವ ‘ಸ್ಯಾಂಡಲ್ವುಡ್ ಕ್ವೀನ್’ ನಟಿ ರಮ್ಯಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಪತ್ತೆ ಆಗ್ತಾರೆ. ಸಮಾಜದಲ್ಲಿ ನಡೆಯುವ ಘಟನೆ, ರಾಜಕಾರಣ ಬೆಳವಣಿಗೆ, ಸಿನಿಮಾ ಕುರಿತಂತೆ ಅವರು ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್ ಮಾಡಿದ ವಿಡಿಯೋ ನೋಡಿ.
Ramya Super Dance Performance At Puneeth Parva Event