ಸಾಮಾನ್ಯವಾಗಿ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ಬಗ್ಗೆ ತಮಲ್ಲರಿಗೂ ತಿಳಿದಿದೆ. ಆದರೆ ಅವರ ಪ್ರೇಮ್ ಕಹಾನಿ ಹಾಗೂ ಅವರಿಬ್ಬರ ನಡುವಿನ ವಯ್ಯಸ್ಸಿನ ಅಂತರದ ಬಗ್ಗೆ ಈ ಲೇಖನಿಯ ಮೂಲಕ ತಿಳಿಯೋಣ ಬನ್ನಿ. ಹೌದು ನಟಿ ರಕ್ಷಿತಾ ಅವರು ಧಮ್ ಎಂಬ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಡಬ್ಬಿಂಗೋಸ್ಕರ ಅಶ್ವಿನಿ ಸ್ಟುಡಿಯೋಗೆ ಹಾಜರಿದ್ದರು.
ಅಲ್ಲಿ ರಾಮ್ ಪ್ರಸಾದ್ ರವರ ಕ್ಯಾಬಿನ್ ನಲ್ಲಿ ಕುಳಿತುಕೊಂಡು ಅವರ ಜೊತೆ ಮಾತಾಡುತಿದ್ದರು. ಅದೇ ಸಮಯದಲ್ಲಿ ಪ್ರೇಮ್ ಅವರು ನಡೆದುಕೊಂಡು ಬಂದಿದ್ದು ಆಗ ರಾಮ್ ಪ್ರಸಾದ್ ರವರು ಇಬ್ಬರಿಗೂ ಪರಿಚಯ ಮಾಡಿಸುತ್ತಾರೆ. ಇವರು ಪ್ರೇಮ್, ಇವರು ರಕ್ಷಿತಾ ಅಂತ.ಹೀಗೆ ಪರಿಚಯವಾದ ಜೋಡಿಗಳು ಸ್ನೇಹಿತರಾಗಿದ್ದು ಸಾಕಷ್ಟು ದಿನಗಳು ಉತ್ತಮ ಸಮಯವನ್ನು ಕಳೆಯುತ್ತಾರೆ.
ನಂತರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ನಂತರ ರಕ್ಷಿತಾ ಅವರಿಗೆ ಪ್ರೇಮ್ ರವರ ನಡುವಳಿಕೆ ಹಾಗೂ ಕೇರಿಂಗ್ ನೋಡಿ ಪ್ರೀತಿ ಮೂಡುತ್ತದೆ. ಹೌದು ಅದೊಂದು ದಿನ ರಕ್ಷಿತಾ ಅವರು ನಾನು ನಿಮ್ಮನ್ನು ತುಂಬಾ ಇಷ್ಟಪಡ್ತೀನಿ ಆದರೆ ನೀವು ಕೂಡ ನನ್ನನ್ನು ಇಷ್ಟ ಪಡಲೇಬೇಕು ಅಂತ ಅಲ್ಲ. ನೀವು ಇಷ್ಟಪಡಲಿಲ್ಲ ಅಂದರೆ ನನಗೆ ಬೇಜಾರಿಲ್ಲ ಅಂತ ಫೋನ್ ಮಾಡಿ ಹೇಳುತ್ತಾರೆ. ನಂತರ ಪ್ರೇಮ್ ಅವರು ಡೈರೆಕ್ಟ್ ಆಗಿ ತಪ್ಪು ತಿಳ್ಕೋಬೇಡಿ ಆತರ ಏನಿಲ್ಲ ಅಂತ ಹೇಳಿ ಫೋನ್ ಇಟ್ಟುಬಿಡುತ್ತಾರೆ. ಸದ್ಯ ಇದೀಗ ಪ್ರೇಮ್ ರಕ್ಷಿತಾ ಅವರ ಡ್ಯಾನ್ಸ್ ವೈರಲ್ ಆಗಿದೆ ನೋಡಿ.