ಸಾಮಾನ್ಯವಾಗಿ ಪ್ರತಿ ಸೀಸನ್ ಗಳಲ್ಲಿಯೂ ಕೂಡ ಒಂದೊಂದು ಜೋಡಿಗಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ಸೀಸನ್ ಎಂಟರಲ್ಲಿ ಕಾಣಿಸಿಕೊಂಡ ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿಗೆ ಎಲ್ಲರಿಗಿಂತ ಅತಿ ಹೆಚ್ಚು ಜನಪ್ರಿಯತೆ ಕಂಡು ಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ನಿಂದ ಒಂದಾದ ಇವರಿಬ್ಬರೂ, ಹೆಚ್ಚು ಸುದ್ದಿಯಾಗಿದ್ದು ಮಾತ್ರ ಪ್ರೇಮದ ವಿಚಾರದಿಂದಲೇ.
ಪ್ರತಿಯೊಂದು ದಿನ ಕೂಡ ಸುದ್ದಿಯಲ್ಲಿದ್ದ ಈ ಜೋಡಿಗಳು ಒಂದಲ್ಲ ಒಂದು ವಿಚಾರದಲ್ಲಿ ತಾವು ಪ್ರೇಮದಲ್ಲಿ ಬಿದ್ದಿರುವುದು ಖಚಿತ ಎಂಬ ರೀತಿಯಲ್ಲಿ ಪ್ರೇಕ್ಷಕರಿಗೆ ತಿಳಿಯುವಂತೆ ಮಾಡುತ್ತಿದ್ದರು. ಅದರಲ್ಲಿಯೂ ಒಲವಿನ ಉಡುಗೊರೆ ಕೊಡಲೇನೆ ಎಂಬ ಟಾಸ್ಕ್ ನಲ್ಲಿ ದಿವ್ಯಾ ಅವರು ತಮ್ಮ ತಂದೆ ಕೊಟ್ಟಂತಹ ಚಿನ್ನದ ಉಂಗುರವನ್ನು ಅರವಿಂದ್ ಕೆಪಿ ಅವರಿಗೆ ನೀಡಿದ್ದು ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಇವರಿಬ್ಬರು ಮಾಡಿರುವ ಡ್ಯಾನ್ಸ್ ವೈರಲ್ ಆಗಿದೆ ನೋಡಿ .