ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಗ್ಗೇಶ್ ಜೋಕಿಗೆ ಬಿದ್ದು ಬಿದ್ದು ನಕ್ಕ ಸುದೀಪ್…ಚಿಂದಿ ವಿಡಿಯೋ

27,106

ನವರಸ ನಾಯಕ ಜಗ್ಗೇಶ್ (Jaggesh) ರವರು ಕನ್ನಡ ಚಿತ್ರರಂಗ (Kannada Filim Industry) ಕಂಡ ಹೆಮ್ಮೆಯ ನಟರಾಗಿದ್ದು ಅಸಾದ್ಯ ಹಾಸ್ಯ ಪ್ರತಿಭೆಯೂ ಹೌದು. ಬೇಸರದಲ್ಲಿದ್ದಾಗ ಜಗ್ಗಣ್ಣನ ಜೊತೆ ಮಾತಾನಾಡಿದರೆ ಅಥವಾ ಅವರ ಸಿನಿಮಾ ಕಾಮಿಡಿ ಸೀನ್ಸ್ ಗಳನ್ನು (Comedy Scenes) ನೋಡಿದರೆ ಮನದಲ್ಲಿ ಒಂದು ರೀತಿ ಖುಷಿ ಎದ್ದು ಬರುತ್ತದೆ. ಈ ಹಾಸ್ಯ ಚಕ್ರವರ್ತಿ ಜೀವನದ ಮೊದಲ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದರು. ಇನ್ನು ಬಾಲ್ಯದಿಂದಲೂ ರಾಜ್ ಕುಮಾರ್ (Rajkumar) ಅವರ ಭಕ್ತರಾದ ಜಗ್ಗೇಶ್ ರವರಯ ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರು. ಅಣ್ಣಾವ್ರ ಅಭಿನಯ ನೋಡುತ್ತಾ ತಾನು ಒಬ್ಬ ನಟನಾಗ ಬೇಕು ಎಂದು ಕನಸು ಕಂಡಿದ್ದು ಕೂಡ ಅಷ್ಟೇ ಸತ್ಯ. ಆದರೆ ತನ್ನ ಮಗ ನಟನಾಗುವುದು ಆವರ ತಂದೆ ಒಂದು ಚೂರು ಇಷ್ಟವಿರಲಿಲ್ಲ.

ಹೌದು ಎಷ್ಟೋ ಬಾರಿ ಹೊಡೆದಿದ್ದು ಉಂಟು. ಆದರೆ ಪಟ್ಟು ಹಿಡುದು ಸಿನಿಮಾದ ಅವಕಾಶಕ್ಕಾಗಿ ಬೆಂಗಳೂರಿಗೆ ಬಂದ ಅವರು ಸಿನಿಮಾ ಎಂಬ ಸಾಗರದಲ್ಲಿ ಪ್ರತಿಭಾವಂತ ನಟನಾಗುವ ಕನಸು ಕಾಣುತ್ತಾರೆ. ಆದರೆ ಅವರ ಪಾಲಿಗೆ ಮೊದಲು ಸಿಕ್ಕಿದ್ದು ಕೇವಲ ಅವಮಾನಗಳು. ಹೌದು ಎಷ್ಟೋ ಮಂದಿ ಅವರು ಕಪ್ಪುಗಿದ್ದಾರೆ ಎಂದು ಗೇಲಿ ಮಾಡಿದ್ದುಂಟು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಮಲಗಲು ಜಾಗವಿಲ್ಲದೆ ತಿನ್ನಲು ಸರಿಯಾದ ಊಟವಿಲ್ಲದೆ ಶತಾಯಘತಾಯ ಪ್ರಯತ್ನ ಮಾಡಿ ಈ ಹಂತಕ್ಕೆ ತಲುಪಿದ್ದಾರೆ.

ಹಸಿವಿನ ಬೆಲೆ ಏನು ಎಂಬುದು ಅವರಿಗೆ ಬಹಳ ಚೆನ್ನಾಗಿ ತಿಳಿದಿದೆ. ಪ್ರತಿಭಾವಂತರಿಗೆ ಸರಿಯಾದ ವೇದಿಕೆ ಸಿಗದೆ ಇರುವುದು ಅವರ ಮನಸ್ಸಿನಲ್ಲಿ ಯಾವಗಲೂ ಒಂದು ರೀತಿ ನೋವು ತರುತ್ತದೆ. ಇನ್ನು ಗ್ರಾಮೀಣ ಪ್ರತಿಭೆಗಳ ಮೇಲೆ ಅವರಿಗೆ ವಿಶೇಷವಾದ ಪ್ರೀತಿಯುಮಿದ್ದು ಅಂತವರಿಗೆ ಬೆನ್ನು ತಟ್ಟಿ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹಸಿವಿನ ರೋದನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಅವರಿಗೆ ಅವರ ಬಳಿ ಯಾರೇ ಹೋಗಿ ಸಹಾಯ ಕೇಳಿದರು ಜಗ್ಗಣ್ಣ ಇಲ್ಲ ಎಂಬುವುದಿಲ್ಲ.

ಇನ್ನು ಚಿತ್ರರಂಗದಲ್ಲಿ ಎಲ್ಲರ ಜೊತೆ ಉತ್ತಮ ಬಾಂದವ್ಯ ಹೊಂದಿರುವ ಜಗ್ಗೇಶ್ ರವರಿಗೆ ಸುದೀಪ್(Sudeep) ಮೇಲೆ ವಿಶೇಷ ಪ್ರೀತಿ. ಸುದೀಪ್ ತುಂಬಾನೇ ಕಷ್ಟದಿಂದ ಮೇಲೆ ಬಂದ ನಟ. ಈ ಬಗ್ಗೆ ಜಗ್ಗೇಶ್​ಗೆ ಹೆಮ್ಮೆ ಇದೆ. ಸುದೀಪ್ ಈ ಮೊದಲು ಸಾಕಷ್ಟು ಪರಭಾಷೆಯ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ(World) ಕೊಂಡೊಯ್ದ ಮೊದಲಿಗ ಸುದೀಪ್. ನಾವು ಅಂದು ಅಮಿತಾಭ್​ ಬಚ್ಚನ್​ (Amithabh Bacchan) ಅವರನ್ನು ನೋಡಬೇಕು ಎಂದು ಹಂಬಲಿಸುವಾಗಲೇ ಅವರ ಜತೆ ಸುದೀಪ್ ಹೋಗಿ ನಟಿಸಿ ಬಂದಿದ್ದ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಜಗ್ಗೇಶ್. ಸದ್ಯ ಈ ನಡುವೆ ಕ್ಯೂಟ್ ವಿಡಿಯೋ ವೊಂದು ವೈರಲ್ ಆಗಿದ್ದು ಜಗ್ಗೇಶ್ ಪಕ್ಕ ಕುಳಿತು ಸುದೀಪ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದು ಯಾಕೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.