ಅಗ್ನಿಸಾಕ್ಷಿ ಧಾರಾವಾಹಿಯ (Agnisakshi Serial) ಸುಂದರಿ ಬಿಗ್ ಬಾಸ್(Bigg Boss) ಸ್ಪರ್ಧಿ ವೈಷ್ಣವಿ ಗೌಡ(Vayshnavi Gowda) ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್(YouTube) ಚಾನೆಲ್ ಆರಂಭಿಸಿದ್ದರು. ಇನ್ನು ಹೊಸ ವರ್ಷದಿಂದ(New Year) ಹೊಸ ರೀತಿಯಲ್ಲಿ ವಿಡಿಯೋ(Video) ಮಾಡುವೆ ಎಂದು ಹೇಳಿ ಪೆಟ್ ಶಾಪ್ಗೆ(Pet Shop) ಭೇಟಿ ನೀಡಿದ್ದಾರೆ. ಇನ್ನು ನಾಯಿ ಬೆಕ್ಕು(Dog & Cat) ಇರುತ್ತದೆ ಎಂದುಕೊಂಡು ಹಾವು (Snake) ನೋಡಿ ಶಾಕ್ (Shock) ಆಗಿದ್ದಾರೆ.
ಇವತ್ತು ನಾನೊಂದು ಇಂಟ್ರೆಸ್ಟಿಂಗ್ (Intresting) ವಿಡಿಯೋ ಮಾಡುತ್ತಿರುವೆ. ಎಕ್ಸಾಟಿಕ್ ಪೆಟ್ ಶಾಪ್ಗೆ(Pet Shop) ಭೇಟಿ ನೀಡುತ್ತಿರುವೆ. ಏಕೆಂದರೆ ನನಗೆ ಪೆಟ್ಗಳು ಅಂದರೆ ತುಂಬಾನೇ ಇಷ್ಟ. ಮೊದಲ ಸಲ ನಾನು ಹೋಗುತ್ತಿರುವೆ. ಜೀವನದಲ್ಲಿ ಹೊಸ (Experiance) ಎಕ್ಸ್ಪೀರಿಯನ್ಸ್ ಗಳನ್ನು ಮಾಡಬೇಕು ಅಂತಿರುವೆ. ಆ ಲಿಸ್ಟ್ಗೆ ಇದು ಸೇರಿಕೊಳ್ಳುತ್ತಿದೆ ಎಂದು ಹೇಳುವ ಮೂಲಕ ವೈಷ್ಣವಿ ವಿಡಿಯೋ ಆರಂಭಿಸುತ್ತಾರೆ. ಆದರೆ ಅಂಗಡಿಗೆ ಭೇಟಿ ನೀಡಿದ ಮೇಲೆ ತಿಳಿಯುತ್ತದೆ ಅದು ಪೆಟ್ ಶಾಪ್ ಅಲ್ಲ reptile shop ಎಂದು. ಹೌದು ಅಲ್ಲಿದ್ದ ಹಾವುಗಳನ್ನು(Snakes) ನೋಡಿ ವೈಷ್ಣವಿ(Vaishnavi) ಶಾಕ್ ಆಗಿದ್ದಾರೆ.
ಅಂಗಡಿಯಲ್ಲಿದ್ದ ಹಾವು ಹಾಹೂ ವಿಚಿತ್ರ ವಿಚಿತ್ರ ಪ್ರಾಣಿಗಳನ್ನು ನೋಡಿ ಭಯದಿಂದ ವೈಷ್ಣವಿ ಬಾಗಿಲಿನ ಬಳಿ ನಿಂತು ಬಿಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ನನ್ನ ಕನಸಿನಲ್ಲಿ ಹಾವು ಬರುತ್ತಿತ್ತು ಆಗ ನಿದ್ರೆಯಿಂದ ಎದ್ದು ಬಿಡುತ್ತಿದ್ದೆ ಎಂದು ವೈಷ್ಣವಿ ವಿಡಿಯೋದಲ್ಲಿ ಹೇಳಿದ್ದು ಅಂಗಡಿ ಮಾಲೀಕರು ಹಾವು ಹಿಡಿದುಕೊಳ್ಳಲು ಕೈಗೆ ಕೊಡುತ್ತಿದ್ದಂತೆ ವೈಷ್ಣವಿ ಅಲ್ಲಿಂದ ಓಡಿದ್ದಾರೆ.
ದೊಡ್ಡ ಗಾತ್ರದ ಬ್ಲಡ್ ಪೈಥಾನ್ (Blood python)ನ ವೈಷ್ಣವಿ ಹೆಗಲೆ ಮೇಲೆ ಹಾಕಿದ್ದಾರೆ. ಎಷ್ಟು ಸಲ ಕೇಳಿದ್ದರೂ ಹಾವು ತೆಗೆದುಕೊಳ್ಳದೆ ಯೂಟ್ಯೂಬ್ (YouTube)ತಂಡ ವಿಡಿಯೋ ಮಾಡುತ್ತಿದ್ದರು. ಶೂಟಿಂಗ್ ಸ್ಥಳಕ್ಕೆ ಹಾವು ಕರೆದುಕೊಂಡು ಬಂದರೂ 200 ಕಿಲೋಮೀಟರ್ ದೂರ ನಿಲ್ಲುವೆ.
ಸದ್ಯ ಇದೇ ಮೊದಲು ನನ್ನ ಮೈ ಮೇಲೆ ಹಾಕು ಹಾಕಿಸಿಕೊಂಡಿರುವುದು. ಪ್ರತಿ ಸಲ ನಾನು ಹೇಳುವ ಹಾಗೆ ಪ್ರತಿಯೊಂದು ಹೊಸ ಎಕ್ಸ್ಪೀರಿಯನ್ಸ್ನಿಂದ ಹೊಸ ಹೊಸ ವಿಚಾರಗಳು ಕಲಿಯುವ ಅವಕಾಶ ಸಿಗುತ್ತದೆ. ಇನ್ನು ಜೆಪಿ ನಗರದಲ್ಲಿರುವ ಕರ್ನಾಟಕ ಅಕ್ವೇರಿಯಂಗೆ ನಾನಿವತ್ತು ಬಂದಿರುವುದು ಎಂದು ಹೇಳಿದ್ದಾರೆ.
ಇನ್ನು ಯುಟ್ಯೂಬ್ (YouTube ) ಲೋಕದಲ್ಲಿ ಸಖತ್ ಬ್ಯುಸಿಯಾಗಿರುವ ವೈಷ್ಣವಿಗೌಡ ಮೊದಲ ಬಾರಿ ಪೀರಿಯಡ್ಸ್ ಬಗ್ಗೆ ಜನರು ಏನೆಲ್ಲಾ ತಿಳಿದುಕೊಳ್ಳ ಬೇಕು ಎಂದು ರಿವೀಲ್ ಮಾಡಿದ್ದು ಮಡಿವಂತಿಕೆ ಮಾಡಬೇಡಿ ಏಕೆಂದರೆ ಈಗಲ್ಲೂ ನಾನು ಪೀರಿಯಡ್ಸ್ ಆಗಿದೆ ಎಂದು ಹೇಳುವುದಕ್ಕೆ ಸಂಕೋಚ ಆಗುತ್ತದೆ ಎಂದಿದ್ದಾರೆ.
ನಮ್ಮ ಸ್ಕೂಲ್ನಲ್ಲಿ ಸೆಕ್ಸ್ ಎಜುಕೇಷನ್(Sex Education) ಇತ್ತು ಪ್ರತಿಯೊಂದನ್ನು ನಮಗೆ ಹೇಳಿಕೊಟ್ಟಿದ್ದರು. ಒಂದು ವಯಸ್ಸು ಆದ್ಮೇಲೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಎಂದು. ನನಗೆ ನೆನಪಿದೆ. ಮೊದಲ ಸಲ ಪೀರಿಯಡ್ಸ್ ಆದಾಗ ನನಗೆ ಎಕ್ಸಾಂ ನಡೆಯುತ್ತಿತ್ತು ನಾನು ಮಲಗಿಕೊಂಡು ಓದುವುದು. ಓದುತ್ತಾ ಓದುತ್ತಾ ನಾನು ಮಲಗಿಕೊಂಡು ಬಿಟ್ಟಿದ್ದೀನಿ.
ಡಿಸೆಂಬರ್ ಸಮಯದಲ್ಲಿ ಆಗಿದ್ದು ಆಗ ಸಖತ್ ಚಳಿ ಇತ್ತು. ಟ್ರ್ಯಾಕ್ ಪ್ಯಾಂಡ್ ಸ್ಕರ್ಟ್ ಸಾಕ್ಸ್ ಜಾಕೆಟ್ ತುಂಬಾ ಬಟ್ಟೆ ಹಾಕಿಕೊಂಡಿದ್ದೆ. ಏನೋ ಒಂದು ರೀತಿ ಹಿಂಸೆ ಆಗುತ್ತಿತ್ತು ಲೂಗೆ ಹೋದೆ ಆಗ ರಕ್ತ ನೋಡಿ ಗಾಬರಿ ಆದೆ. ಈ ವಿಚಾರ ತಾಯಿಗೆ ಹೇಳಬಾರದಂತೆ ನನಗೆ ಹೇಳಬೇಡ ಬೇರೆ ಅವರಿಗೆ ಹೇಳು ಎಂದು ನಮ್ಮ ಮನೆ ಕೆಲಸದವರಿಗೆ ನಾನು ಮೊದಲು ಈ ವಿಚಾರ ತಿಳಿಸಿದೆ ಎಂದು ವೈಷ್ಣವಿಗೌಡ ಮುಕ್ತವಾಗಿ ಹೇಳಿದ್ದಾರೆ.