ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪ್ರೇಕ್ಷಕನಿಗೆ ಅವಾಜ್ ಹಾಕಿದ ಕಾಮಿಡಿ ಕಿಲಾಡಿಗಳು ನಯನಾ..ಚಿಂದಿ ವಿಡಿಯೋ

10,275

[11:00 AM, 1/23/2023] Writer: ಕಾಮಿಡಿ ಕಿಲಾಡಿಗಳು(Comedy Khiladigalu) ಖ್ಯಾತಿಯ ಹಾಸ್ಯ ನಟಿ ನಯನಾ(Nayana) ಕಳೆದ ವರುಷದ ಅಂತ್ಯದಲ್ಲಿ ವಿವಾದವೊಂದಕ್ಕೆ ಸಿಲುಕಿದ್ದು ಅವರ ವಿರುದ್ಧ ಪೊಲೀಸ್(Police) ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೌದು ಜೀವ ಬೆದರಿಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಿರುತೆರೆಯ ಹಾಸ್ಯ ಕಲಾವಿದ (Comedy Artist) ಸೋಮಶೇಖರ್(Somashekar) ರವರು ದೂರಿದ್ದರು.

ಸ್ಟಾರ್ ಸುವರ್ಣ (Star Suvarna) ವಾಹಿನಿಯ ಕಾಮಿಡಿ ಗ್ಯಾಂಗ್ಸ್ (Comedy Gangs) ಶೋನಲ್ಲಿ ಬಹುಮಾನವಾಗಿ ಬಂದ ಹಣದ ಹಂಚಿಕೆ ವಿಚಾರದಲ್ಲಿ ಮತ್ತೊಬ್ಬ ಸ್ಪರ್ಧಿ ಸೋಮಶೇಖರ್ ಎಂಬುವವರಿಗೆ ನಟಿ ನಯನಾ ರವರು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿತ್ತು.

ಇನ್ನು ಕಾಮಿಡಿ ಗ್ಯಾಂಗ್ಸ್ ಕಾರ್ಯಕ್ರಮದಲ್ಲಿ ಬಹುಮಾನವಾಗಿ ನನಗೆ ಹಣ ಬಂದಿದ್ದು ಆ ಹಣದಲ್ಲಿ ಸೀನಿಯರ್‌ಗಳಾದ (Seniors) ಪಿಯುಸಿ ಟೀಂನ ಅನಿಲ್ ಹಾಗೂ ಚಿದಾನಂದ್ ಅವರಿಗೆ ಪಾಲು ಕೊಡುವಂತೆ ನಯನಾ ಕೇಳುತ್ತಿದ್ದಾರೆ. ಹೌದು ನಾನು ಒಪ್ಪದೇ ಇದ್ದಾಗ​ ಆಡಿಯೋ(Audio) ಮತ್ತು ಮೆಸೇಜ್ ಮೂಲಕ ಬೆದರಿಕೆ ಹಾಕಿದ್ದು ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಸೋಮಶೇಖರ್ ರವರು ಆರೋಪಿಸಿದ್ದರು.

ಇನ್ನು ಶೋನಲ್ಲಿ ದ್ವಿತೀಯ ಬಹುಮಾನವಾಗಿ ಪಿಯುಸಿ ತಂಡಕ್ಕೆ 3 ಲಕ್ಷ ಹಣ ಬಂದಿದ್ದು ಅದರಲ್ಲಿ ಶೇ. 30ರಷ್ಟು ಕಟ್​ಆಗಿ ಪ್ರತಿಯೊಬ್ಬರಿಗೆ 70 ಸಾವಿರ ಸಿಕ್ಕಿತ್ತು. ಪಿಯುಸಿ ತಂಡದಲ್ಲಿ ಸೋಮಶೇಖರ್‌ ಸೇರಿ ಇನ್ನೂ ಮೂವರು ನಟಿಸಿದ್ದು ಜ್ಯೂನಿಯರ್​ ಆರ್ಟಿಸ್ಟ್‌ಗಳು ಎಂದು ಮೂವರಿಗೆ ಹಣ ಮತ್ತು ತಂಡ ಮತ್ತಿಬ್ಬರು ಸೀನಿಯರ್ಸ್​ಅನೀಶ್​ ಚಿದಾನಂದ್ ಅವರಿಗೆ ತಿಂಗಳ ಸಂಭಾವನೆ ನೀಡಲಾಗಿದೆ. ಹೌದು ಆದರೂ ಸಹ ಇವರಿಬ್ಬರಿಗೂ ಹಣ ನೀಡುವಂತೆ ನಯನಾ ಧಮ್ಕಿ ಹಾಕಿದ್ದಾರೆ ಎಂದು ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಸೀನಿಯರ್ಸ್‌ಗೆ ಪ್ರತಿ ತಿಂಗಳು ಸಂಭಾವನೆ ಬರುತ್ತದೆ. ಈ ಕಾರಣದಿಂದಾಗಿ ಅವರಿಗೆ ಬಹುಮಾನದ ಹಣದಲ್ಲಿ ಯಾಕೆ ಪಾಲು ಕೊಡಬೇಕು ಎನ್ನುವುದು ಸೋಮಶೇಖರ್ ರವರ ವಾದವಾಗಿದ್ದು ಆದರೆ ಅನೀಶ್ ಹಾಗೂ ಚಿದಾನಂದ ಪರವಾಗಿ ನಟಿ ನಯನಾ ಹಣ ಕೇಳುತ್ತಿದ್ದಾರೆ. ಅವರಿಬ್ಬರಿಗೂ ಹಣದ ಅವಶ್ಯಕತೆ ಇದೆ. ಆದರೆ ಅವರ ಹಣ ಇಟ್ಟುಕೊಂಡು ನೀನು ಕೊಡದೇ ಇದ್ದರೆ ಹೇಗೆ? ಮಗನೇ ನಿನಗೆ ಇದು ಕೊನೆ ಕಾಲ್ ಅದು ಹೇಗೆ ಬೆಂಗಳೂರಿನಲ್ಲಿ ಓಡಾಡುತ್ತೀಯ ನೋಡ್ತೀನಿ ಎಂದು ನಟಿ ನಯನಾ ರವರು ಬೆದಿರಿಕೆ ಹಾಕಿರುವ ಆಡಿಯೋ ಮೆಸೇಜ್ ವೈರಲ್ ಆಗಿದೆ.

ಸದ್ಯ ಈ ಪ್ರಕರಣ ತಣ್ಣಾಗಾದಿರುವ ಬೆನ್ನಲ್ಲೆ ನಯನಾರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದೆ. ಹೌದು ನಾಟಕ ಮಾಡುತ್ತಿದ್ದ ನಯನಾ ಮಧ್ಯದಲ್ಲಿಯೇ ಪ್ರೇಕ್ಷಕನ ಮೇಲೆ ಗರಂ ಆಗಿದ್ದು ಬಂದ್ರೆ ಸಿಗಿದು ಹಾಕ್ಬಿಡ್ರೀನಿ ಮಗನೆ ಎಂದು ಗರಂ ಆಗಿದ್ದಾರೆ. ಅಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.