ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿಂಹ ಹೀಗೆ ಮಾಡುತ್ತೆ ಅಂತ ಅಂದುಕೊಂಡಿರಲಿಲ್ಲ…ಚಿಂದಿ ವಿಡಿಯೋ

9,372

ಸಾಮಾನ್ಯವಾಗಿ ಚಿಕ್ಕಮಕ್ಕಳಿಗೆ (Children’s) ಪ್ರಾಣಿಗಳೆಂದರೆ(Animals) ಒಂದು ರೀತಿಯ ಒಲವು ಹಾಗೂ ಪ್ರೀತಿ ಎನ್ನಬಹುದು. ದೂರದರ್ಶನದಲ್ಲಿ(Television) ಅಥವಾ ಮೊಬೈಲ್ ಗಳಲ್ಲಿ(Moblies) ಪ್ರಾಣಿಗಳು ಬಂದರೆ ಸಾಕು ಬಹಳ ಆಕರ್ಷಣೀಯವಾಗಿ ನೋಡ್ತಾರೆ.

ಇ ನಮ್ಮ ರಾಜ್ಯದಲ್ಲಿ ಮೃಗಾಲಯ(Zoo) ಅಭಿವೃದ್ಧಿ ಪ್ರಾಧಿಕಾರವು ಕಿರಿಯ ವಯಸ್ಸಿನಿಂದಲೇ ಮಕ್ಕಳಿಗೆ ಪರಿಸರ ಸಂರಕ್ಷಣೆ(Environmental protection) ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಮೃಗಾಲಯಕ್ಕೆ ವಾರಾಂತ್ಯ ದಿನಗಳಲ್ಲಿಭೇಟಿ ನೀಡುವ ಶಾಲಾ ಮಕ್ಕಳಿಗೆ(School children’s) ಪ್ರಾಣಿಗಳು ಹಾಗೂ ಪರಿಸರ ಸಂರಕ್ಷಣೆ ಶಿಕ್ಷಣ ನೀಡಲು ತೀರ್ಮಾನಿಸಿದೆ.

ಕಳೆದ ಎರಡು ವರುಷಗಳ ಹಿಂದೆಯಷ್ಟೆ ಮೊದಲ ಪ್ರಯತ್ನವಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ
(Chamarajendra Zoo, Mysore) ಈ ಯೋಜನೆಯನ್ನು ಜಾರಿಗೊಳಿಸಲಾದ್ದು ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದ್ದರು. ಮೈಸೂರಿನ ಮೃಗಾಲಯಕ್ಕೆ ವಾರಾಂತ್ಯ ಬಂದರೆ ಸಾಕು ರಾಜ್ಯದ ನಾನಾ ಭಾಗಗಳಿಂದ 15 ರಿಂದ 20,000 ಶಾಲಾ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದರು.

ಹೀಗೆ ಆಗಮಿಸುವವರ ಪೈಕಿ ಶೇ. 40 ರಷ್ಟು ವಿದ್ಯಾರ್ಥಿಗಳೇ ಆಗಿರುವುದು ವಿಶೇಷ. 2019ರ ಡಿಸೆಂಬರ್‌ ತಿಂಗಳಿನಲ್ಲಂತೂ ಶೈಕ್ಷಣಿಕ ಪ್ರವಾಸವಿರುವ ಕಾರಣ ಮಕ್ಕಳ ಸಂಖ್ಯೆ ಹೆಚ್ಚಿರುತ್ತಲೆ ಇತ್ತು. ಹೌದು ಮಕ್ಕಳೊಂದಿಗೆ ಆಗಮಿಸುವ ಈ ಶಿಕ್ಷಕರಿಗೆ ಪ್ರಾಣಿ ಪಕ್ಷಿಗಳ ಪ್ರಬೇಧಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಮೇಲಾಗಿ ಇವರು ತಾವು ಕರೆದುಕೊಂಡು ಬರುವ ಶಾಲಾ ಮಕ್ಕಳನ್ನು ಜೋಪಾನ ಮಾಡುವ ಜವಾಬ್ದಾರಿ ನಿರ್ವಹಣೆಯಲ್ಲಿಯೆ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.

ಹೌದು ಹಾಗಾಗಿ ಮಕ್ಕಳಿಗೆ ಪ್ರಾಣಿಗಳು ಪರಿಸರದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯವುದಿಲ್ಲ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದ ಮೃಗಾಲಯ ಪ್ರಾಧಿಕಾರವು ಪ್ರಾಣಿಗಳು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಿಗೆ ವಿವರಣೆ ನೀಡಲು ಸ್ವಯಂಸೇವಕರನ್ನು ನೇಮಕ ಮಾಡಿಕೊಂಡು ಅವರಿಂದಲೇ ಮಾಹಿತಿ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು.

ಇನ್ನು ಮಕ್ಕಳಿಗೆ ಸಿಂಹದ ಕಥೆಗಳು ಎಂದರೆ ಬಹಳಾನೇ ಇಷ್ಟ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಬಾಲ್ಯದಲ್ಲಿ ಪಂಚತಂತ್ರದ ಕಥೆಗಳನ್ನು ಕೇಳಿರುತ್ತೇವೆ. ಇದೇ ಕಾರಣದಿಂದಾಗಿ ಸಿಂಹ ಎಂಬುದು ಕಾಡಿನ ರಾಜ ಮತ್ತು ಉಗ್ರ ಎದುರಾಳಿ ಎಂಬುದು ತಿಳಿಯದೆ ಸಿಂಹವನ್ನು ಕೇವಲ ಆಕರ್ಷಣೀಯ ಪ್ರಾಣಿಯೆಂಬಂತೆ ನೋಡುತ್ತಾರೆ.

ಸದ್ಯ ಇದೀಗ ಮಕ್ಕಳು ಹೆದರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದು ಮೃಗಾಲಯದಲ್ಲಿ ಸೇರಿದಂತೆ ನಾನ ಕಡೆ ಸಿಂಹ ಹೇಗೆ ಕಣ್ಣಿಗೆ ಬಿದ್ದೆದೆ ಹಾಗೂ ಯಾವ ರೀತಿ ಅವಂತಾರ ಮಾಡಿದೆ ಎಂದು ನೋಡಿದರೆ ನಿಜಕ್ಕೂ ಎದೆ ಝಲ್ ಎನ್ನುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 6 Lion Encounters That Will Give You Chills ಎಂಬ ಹೆಸರಿನಲ್ಲಿ ಹರಿದಾಡುತ್ತಿದ್ದು ಒಮ್ಮೆ ಈ ವಿಡಿಯೋ ನೋಡಿ ಖಂಡಿತ ಬೆಚ್ಚಿ ಬೀಳುತ್ತೀರ.