School Teacher Viral Dance Karkala : ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವುದು ಸಹ ಒಂದು ಕಲೆ ಎನ್ನಬಹುದು. ಕೆಲವು ಶಿಕ್ಷಕರು ಮಾಡುವ ಪಾಠ ಮಕ್ಕಳಿಗೆ ಬೋರು ಹೊಡೆಸಿದರೆ ಇನ್ನು ಕೆಲವು ಶಿಕ್ಷಕರು ಹೇಳಿಕೊಡುವ ಪಾಠವಂತೂ ಮಕ್ಕಳ ತಲೆಗೆ ಹೋಗುವುದೇ ಇಲ್ಲ. ಆದರೆ ಕೆಲವು ಶಿಕ್ಷಕರು ತಮ್ಮ ಹೊಸ ಹೊಸ ಕ್ರಿಯೇಟಿವಿಟಿಯಿಂದಲೇ ಮಕ್ಕಳನ್ನು ತಮ್ಮ ಪಾಠದತ್ತ ಸೆಳೆದುಕೊಳ್ಳುವ ಶಕ್ತಿ ಹೊಂದಿರುತ್ತಾರೆ ಎನ್ನಬಹುದು.
ಅದರಲ್ಲಿ ಕೆಲವು ಶಿಕ್ಷಕರಂತೂ ಅದೆಷ್ಟು ಕ್ರಿಯೇಟಿವಿಟಿಯಿಂದ ಪಾಠ ಮಾಡುತ್ತಾರೆ ಎಂದರೆ ಮಕ್ಕಳಿಗೆ ಆಟದೊಂದಿಗೆ ಪಾಠ ಸಂಗೀತದಲ್ಲಿಯೇ ಪಾಠ ಅಷ್ಟೇ ಏಕೆ ಇನ್ನು ಕೆಲವು ಶಿಕ್ಷಕರು ಅಥವಾ ಶಿಕ್ಷಕಿಯರು ನೃತ್ಯ ಮಾಡುವ ಮೂಲಕ ಕೂಡ ಪಾಠ ಹೇಳಿ ಕೊಡುವುದು ವಿಶೇಷ.
ಸದ್ಯ ಇದೀಗ ಅಂತಹುದೇ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಸರ್ಕಾರಿ ಶಾಲೆ ಬಜಗೋಳಿಯಲ್ಲಿ ಕನ್ನಡ ಶಿಕ್ಷಕಿ ಒಂದು ದಿನ ಪೆದ್ದನ ಹೆಂಡತಿ ಎಂದಯ ರಾಗವಾಗಿ ಹಾಡು ಹೇಳುತ್ತ ನೃತ್ಯ ಮಾಡುತ್ತಾ ಮಕ್ಕಳಿಗೆ ಕಲಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಶಿಕ್ಷಕಿಯ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ದೆಹಲಿಯ ಒಂದು ವಿಡಿಯೋ ವೈರಲ್ ಆಗಿತ್ತು. ಹೌದು ಇಲ್ಲಿನ ಒಂದು ಸರಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕಿ ಮನು ಗುಲಾಟಿಯವರು ತಮ್ಮ ವಿದ್ಯಾರ್ಥಿಗಳನ್ನು ಅದೆಷ್ಟರ ಮಟ್ಟಿಗೆ ಸೆಳೆದುಕೊಂಡಿದ್ದಾರೆಂದರೆ ಇವರು ತಮ್ಮ ಒಬ್ಬ ವಿದ್ಯಾರ್ಥಿನಿಯೊಂದಿಗೆ ನೃತ್ಯ ಮಾಡುತ್ತಿದ್ದು ಇನ್ನುಳಿದ ವಿದ್ಯಾರ್ಥಿನಿಯರು ತುಂಬಾ ಉತ್ಸಾಹದಿಂದ ಇವರತ್ತ ನೋಡುತ್ತಾ ತಾವು ಕೂಡ ಕುಳಿತಲ್ಲಿಯೇ ಚಪ್ಪಾಳೆ ಹಾಕುತ್ತಿದ್ದಾರೆ.
ಈ ವಿಡಿಯೋವನ್ನು ಮನು ಗುಲಾಟಿಯವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು ಆ ವಿಡಿಯೋದಲ್ಲಿ ಮೊದಲು ಒಬ್ಬ ವಿದ್ಯಾರ್ಥಿನಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತಿದೆ ಹಾಗೇನೇ ಹಿನ್ನೆಲೆಯಲ್ಲಿ ಸಂಗೀತ ಕೂಡ ಕೇಳಿಬರುತ್ತಿದೆ. ಆಗ ಆ ವಿದ್ಯಾರ್ಥಿನೀ ಮೇಡಂ ನೀವು ಕೂಡ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಂತೆಯೇ ತಾವು ಕೂಡ ನೃತ್ಯ ಮಾಡುತ್ತಾರೆ ಶಿಕ್ಷಕಿ ಮನು ಅವರು.
ಇನ್ನು ಈ ವಿಡಿಯೋವನ್ನು ಸ್ವತಃ ಮನು ಗುಲಾಟಿಯವರು ತಮ್ಮ ಟ್ವಿಟ್ಟರ್ ಖಾತೆಯಾದ ManuGulati11 ಎಂಬ ಖಾತೆಯಲ್ಲಿ ಇದೆ ಏಪ್ರಿಲ್ 25 ನೇ ತಾರೀಕಿನಂದು ಶಿಕ್ಷಕರು ಪ್ರೀತಿ ತೋರಿಸಿದರೆ ಮಕ್ಕಳು ಅದನ್ನು ವಾಪಾಸ್ ತೋರಿಸುತ್ತವೆ ಎಂಬ ಹೆಡ್ ಲೈನ್ ನೊಂದಿಗೆ ಹಂಚಿಕೊಂಡಿರುವ ಈ 50 ಸೆಕೆಂಡುಗಳ ವಿಡಿಯೋವನ್ನು ಇದುವರೆಗೂ 60 ಸಾವಿರ ಜನರು ವೀಕ್ಷಿಸಿದ್ದು ಸುಮಾರು 3 ಸಾವಿರದಷ್ಟು ಲೈಕ್ಸ್ ಬಂದಿವೆ.
ಇನ್ನು ಈ ವಿಡಿಯೋಗೆ ನೋಡಿ ಸಾವಿರಾರು ಕಾಮೆಂಟ್ಸ್ ಬಂದಿದ್ದು ಅವುಗಳಲ್ಲಿ ಶಿಕ್ಷಕಿಯ ಈ ನೃತ್ಯದೊಂದಿಗೆ ಮಕ್ಕಳನ್ನು ಸೆಳೆಯುವ ರೀತಿ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು ಹಾಗೇನೇ ಅವರು ಪಾಠ ಹೇಳಿಕೊಡುವ ರೀತಿ ನೋಡಿ ಹಾಗೂ ಮಕ್ಕಳೊಂದಿಗೆ ಮಕ್ಕಳಂತೆಯೇ ಆಗಿರುವ ಅವರ ಹೃದಯ ಶ್ರೀಮಂತಿಕೆಯನ್ನು ಕಂಡು ಸಾಕಷ್ಟು ಕಾಮೆಂಟ್ಸ್ ಕೂಡ ಮಾಡಿದ್ದಾರೆ. ಸದ್ಯ ಇದೀಗ ಕನ್ನಡ ಶಾಲೆಯ ವಿಡಿಯೋ ಅಂತರ್ಜಾಲದಲ್ಲಿ ಹಲ್ ಚಲ್ ಎಬ್ಬಿಸಿದೆ.