ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲು ಕನ್ನಡ ಎಂದು ಅದ್ಬುತ ಕನ್ನಡ ಮಾತಾಡಿದ ದ್ರಾವಿಡ್…ಚಿಂದಿ ವಿಡಿಯೋ

12,616

Rahul Dravid Speaks Kannada: 90ರ ದಶಕದ ಆರಂಬದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್   ಔಟ್ ಆಗುತ್ತಿದ್ದಂತೆ ಟಿ ವಿ ಯನ್ನು ಆರಿಸುತ್ತಿದ್ದ ಬಾರತದ ಕ್ರಿಕೆಟ್ ಅಬಿಮಾನಿಗಳು  ದಶಕದ ಕೊನೆಯಲ್ಲಿ ತೆಂಡೂಲ್ಕರ್ ಔಟ್ ಆದರೆ ಏನಂತೆ ಇನ್ನೂ ಕ್ರೀಸ್ ನಲ್ಲಿ ಗೋಡೆಯಂತೆ ನಿಂತು ತಂಡವನ್ನು ದಡ ಸೇರಿಸುವ ಆಪತ್ಬಾಂದವ ಇದ್ದಾನೆ.

ಅವನಿರುವವರೆಗೂ  ಕೂಡ ತಂಡಕ್ಕೆ ಸೋಲುವ ಯಾವುದೇ ಅಂಜಿಕೆಯಿಲ್ಲ ಎಂದು ನೆಮ್ಮದಿಯಿಂದ ಪಂದ್ಯ ನೋಡುವಂತ ವಾತಾವರಣ ನಿರ್ಮಾಣವಾತ್ತು. ಹೀಗೆ ತೆಂಡೂಲ್ಕರ್ ರವರಿಗೆ ಸರಿಸಮಾನರಾಗಿ ಬೆಳೆದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ವಿಶಿಷ್ಟ  ಛಾಪು ಮೂಡಿಸಿ ಅಜಾತಶತ್ರುವೆನಿಸಿದ ಗೋಡೆ ನಮ್ಮ ಕರ್ನಾಟಕದ ರಾಹುಲ್ ದ್ರಾವಿಡ್.

ಹೌದು ರಾಹುಲ್ ದ್ರಾವಿಡ್ ರವರು ವಿಶ್ವ ಕ್ರಿಕೆಟ್ ನ ಬುದ್ಧ ಹಾಗೂ ನೂಲಿನಲ್ಲಿ ಗೆರೆ ಎಳೆದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ  ಕೂಡ ಟಚ್ ಮಾಡುವ ಕಲಾತ್ಮಕ ಬ್ಯಾಟ್ಸ್ ಮೆನ್ ಎನ್ನಬಹುದು. ಬೌಲರ್ ಗಳು ತಾಳ್ಮೆ ಕಳೆದುಕೊಳ್ಳುವಂತೆ ಕಾಡುವ ಹಾಗೂ ವಿಕೆಟ್ ಪಡೆಯಲು ಎದುರಾಳಿ ತಂಡ ಬೇಡುವಂತೆ ಮಾಡುವ ಜಾಯಮಾನ ನಮ್ಮ ಜ್ಯಾಮಿಯದ್ದು.

 

ಹೌದು ಇಂತಹ ಸ್ಟೈಲೀಸ್ ಪ್ಲೇಯರ್ ನ ಆಟ ಈಗ ನೆನಪು ಮಾತ್ರ. ಜಂಟಲ್ ಮೆನ್ ಗೇಮ್ ನ ಜಂಟಲ್ ಮೆನ್ ಆಟಗಾರನನ್ನು ಒಂದು ಕ್ಷಣ ನೆನಪಿಸಿಕೊಂಡಾಗ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣ ಮುಂದೆ ಅವರ ಬ್ಯಾಟಿಂಗ್ ವೈಯಾರಗಳು ಹಾದು ಹೋಗುತ್ತವೆ. ಅಂತಹ ಜೀನಿಯಸ್ ಕ್ರಿಕೆಟಿಗನ ಕ್ರಿಕೆಟ್ ಬದುಕೇ ಒಂದು ಮಹಾನ್ ಗ್ರಂಥ ಎನ್ನಬಹುದು.

 

ಸದ್ಯ ಈಗಾಗಲೇ ಎಂಎಸ್ ಧೋನಿ ಸಚಿನ್ ತೆಂಡೂಲ್ಕರ್  ಅಜರುದ್ದೀನ್ ಅಂತವರ ಬಯೋಪಿಕ್ ಚಿತ್ರಗಳು ಬಾಲಿವುಡ್‌ನಲ್ಲಿ ರಾರಾಜಿಸಿದ್ದು ಇದೀಗ ಬಂಗಾಳದ ಹುಲಿ  ದಾದಾ ಎಂದು ಕರೆಯಲ್ಪಡುವ  ಸೌರವ್ ಗಂಗೂಲಿ ಅವರ ಬಯೋಪಿಕ್ ಸಿನಿಮಾಗಳು ಘೋಷಣೆಯಾಗಿದೆ.

 

ಹೌದು ಈ ಕಡೆ ದಕ್ಷಿಣದಲ್ಲಿ ಕರ್ನಾಟಕದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಹಾಗೂ ಜಂಬೂ ಅನಿಲ್ ಕುಂಬ್ಳೆ ಅವರ ಬಯೋಪಿಕ್ ಮಾಡಬೇಕು ಎಂಬ ಚರ್ಚೆ ಆಗಾಗ ಕೇಳಿ ಬರುತ್ತಲೇ ಇದ್ದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಸಹ ದ್ರಾವಿಡ್ ರವರ ಬಯೋಪಿಕ್ ಬಗ್ಗೆ ಆಸಕ್ತಿ ವ್ಯಕ್ತವಾಗುತ್ತಿದೆ.

 

ಇನ್ನು ಇದೆಲ್ಲದರ  ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಬಯೋಪಿಕ್ ಚಿತ್ರಕ್ಕೆ ಚಾಲನೆ ಕೊಡಬಹುದು ಎಂಬ ನಿರೀಕ್ಷೆಯೂ ಕೂಡ ಇದ್ದು ಕ್ರಿಕೆಟ್ ಆಟದ ಜೊತೆ ಹೆಚ್ಚು ನಂಟು ಹೊಂದಿರುವ ಸುದೀಪ್ ಡ್ರಾವಿಡ್ ರವರ ಜೀವನ ಆಧರಿತ ಚಿತ್ರದಲ್ಲಿ ನಟಿಸುಬಹುದು ಹಾಗೂ ನಟಿಸಲು ತಯಾರಿ ಮಾಡುತ್ತಿದ್ದಾರೆ ಎನ್ನುವ ಕುತೂಹಲ  ಇದೀಗ  ಹುಟ್ಟಿಕೊಂಡಿದೆ.

 

ಕಳೆದ ವರುಷ ದುಬೈನಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಣೆಗೆ  ತೆರಳಿದ್ದ ಕಿಚ್ಚ ಸುದೀಪ್  ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದರು ಎನ್ನಬಹುದು. ಇನ್ನು ಕಿಚ್ಚ  ಟಿ ಟ್ವೆಂಟಿ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತ ಪಾಕಿಸ್ತಾನ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡಿದ್ದು ಹೀಗೆ  ಕ್ರಿಕೆಟ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಸುದೀಪ್  ದ್ರಾವಿಡ್ ಬಯೋಪಿಕ್‌ಗೆ ಸೂಕ್ತ ಆಯ್ಕೆ ಎನ್ನುವ ಅಭಿಪ್ರಾಯ ಹರಿದಾಡುತ್ತಿದೆ.

 

ಇನ್ನು ಕಿಚ್ಚ ಸುದೀಪ್ ರವರು ಸಿಸಿಎಲ್ ಐಪಿಎಲ್ ವಿಶ್ವಕಪ್ ಮತ್ತು ಚಂದನವನ ಕಪ್ ಸೇರಿದಂತೆ ಬಹಳಷ್ಟು ಕಡೆ  ಕ್ರಿಕೆಟ್ ಮೇಲಿನ ಆಸಕ್ತಿಯನ್ನು  ವ್ಯಕ್ತಪಡಿಸಿದ್ದು  ತಾನೊಬ್ಬ ಉತ್ತಮ ಕ್ರಿಕೆಟ್ ಅಟಗಾರನು ಕೂಡ ಹೌದು. ರಾಷ್ಟ್ರೀಯ ತಂಡಕ್ಕೆ ಆಡಬೇಕು ಎಂಬ ಅಸೆಯನ್ನು ಕೂಡ ಹೊಂದಿದ್ದೇನೆ  ಎಂದು ಖುದ್ದು ಕಿಚ್ಚ ಸುದೀಪ್  ರವರೇ ಅನೇಕ ಬಾರಿ ಹೇಳಿಕೊಂಡಿದ್ದು ಇನ್ನು ದ್ರಾವಿಡ್ ಅವರ ಬಯೋಪಿಕ್ ವಿಚಾರ ಬಂದಾಗಲೆಲ್ಲಾ ಸುದೀಪ್ ಮಾಡಲಿ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದ್ದು ಆದರೆ ಸುದೀಪ್ ಈ ಕುರಿತು ತಯಾರಾಗುತ್ತಿದ್ದಾರಾ? ನಿಜಕ್ಕೂ ಅವರಿಗೆ ದ್ರಾವಿಡ್ ಬಯೋಪಿಕ್ ಮಾಡುವ ಆಸೆ ಇದಿಯಾ ಎನ್ನುವ ಬಗ್ಗೆ ಮಾತ್ರ ಸ್ಪಷ್ಟನೆಯಿಲ್ಲ.

ಇನ್ನು ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗಬೇಕು ಎಂದು ಬಹಳಷ್ಟು ಚಿತ್ರಪ್ರೇಮಿಗಳು ಆಸೆ ಪಡುತ್ತಿದ್ದು ದ್ರಾವಿಡ್ ಅವರ ಶ್ರಮ ತಾಳ್ಮೆ ದೇಶಪ್ರೇಮ ಕ್ರಿಕೆಟ್ ಪ್ರೇಮ ತಂತ್ರ ಹಲವು ಇನ್ನಿಂಗ್ಸ್‌ಗಳು ಆಟಕ್ಕೆ ತಯಾರಾಗುತ್ತಿದ್ದ ರೀತಿ ಇವುಗಳೆಲ್ಲವೂ ಯುವಕರಿಗೆ ಸ್ಪೂರ್ತಿಯಾಗುತ್ತದೆ.

 

ಇನ್ನು ದ್ರಾವಿಡ್ ವಿಚಾರದಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಹಲವು ಸೀಕ್ರೆಟ್ ವಿಚಾರಗಳು ಸಹ ಸಾಮಾನ್ಯ ಜನರಿಗೆ ತಿಳಿಯುತ್ತದೆ.  ಹೌದು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಆಟಗಾರನ ಬಯೋಪಿಕ್ ಬಂದರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ ಎನ್ನುವ ಪ್ರೇಕ್ಷಕ ವರ್ಗವೂ ಇದೆ ಎನ್ನಬಹುದು. ಇನ್ನು ಕನ್ನಡಿಗನಾಗಿರುವ ದ್ರಾವಿಡ್ ಬಾಯಲ್ಲಿ ಎಂದಾದರೂ ಕನ್ನಡ ಕೇಳಿದ್ದೀರ? ಒಮ್ಮೆ ಕೆಳಗಿನ ವಿಡಿಯೋ ನೋಡಿ ದ್ರಾವಿಡ್ ಎಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ನಿಮಗೆ ತಿಳಿಯುತ್ತದೆ.