ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಗೆ ಕೆನ್ನೆ ಸವರಿದ ಎಸ್ ನಾರಾಯಣ್…ಚಿಂದಿ ವಿಡಿಯೋ

516

Darshan has launched Deadly Soma Aditya new movie title | Dboss, Aditi prabhudeva | S Narayan: ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕಿಡಿಗೇಡಿಯೋರ್ವ ಚಪ್ಪಲಿ ಎಸೆದದ್ದು ಸದ್ಯ ಚಂದನವನವನ್ನು ಅಲ್ಲೋಲ ಕಲ್ಲೋಲವಾಗುವಂತೆ ಮಾಡಿದೆ.

 

ಹೌದು ಹಾಡು ಬಿಡುಗಡೆಗೂ ಮುನ್ನ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ನಡೆದಿದ್ದ ಕಾರಣ ಈ ಕೃತ್ಯವನ್ನೂ ಕೂಡ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳೇ ಎಸಗಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.

 

ಆದರೆ ಈ ಕೆಲಸವನ್ನು ಪುನೀತ್ ರಾಜ್‌ಕುಮಾರ್ ರವರ ಅಭಿಮಾನಿಗಳು ಮಾಡಿದ್ದಲ್ಲ ಯಾರೋ ಮೂರನೇ ವ್ಯಕ್ತಿಗಳು ಮಾಡಿ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಪ್ರತಿವಾದಿಸುತ್ತಿದ್ದಾರೆ. ಹೌದು ಸದ್ಯ ಈ ವಿಚಾರ ಕೂಡ ಇಬ್ಬರ ಅಭಿಮಾನಿಗಳ ನಡುವೆ ವಾರ್‌ಗೆ ಕಾರಣವಾಗಿದೆ.

ವಿಕೃತ ಘಟನೆ ಕುರಿತು ಚಂದನವನದ ಬಹುತೇಕ ಎಲ್ಲಾ ನಟ ಹಾಗೂ ನಟಿಯರೂ ಸಹ ಮಾತನಾಡಿದ್ದು ಕಿಡಿಗೇಡಿಯ ವಿರುದ್ಧ ಕಿಡಿಕಾರಿ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ನಟನೋರ್ವನಿಗೆ ತೊಂದರೆಯಾದಾಗ ಘನತೆಗೆ ಕೆಡುಕಾದಾಗ ವೈಮನಸ್ಸನ್ನೂ ಮೀರಿ ಸ್ನೇಹಿತರು ಬೆನ್ನ ಹಿಂದೆ ನಿಲ್ಲುತ್ತಾರೆ ಎಂಬುದಕ್ಕೆ ನಟ ಕಿಚ್ಚ ಸುದೀಪ್ ದರ್ಶನ್ ಅವರನ್ನು ಬೆಂಬಲಿಸಿ ಮಾಡಿದ್ದ ಟ್ವೀಟ್ ಸಾಕ್ಷಿ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

 

ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಇಡೀ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದ್ದು ಘಟನೆ ನಡೆದು ಎರಡು ದಿನಗಳಾಗಿದ್ದರೂ ದರ್ಶನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಡಿಸೆಂಬರ್ 21 ರ್ದು ತನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ದರ್ಶನ್ ಧನ್ಯವಾದಗಳನ್ನು ಅರ್ಪಿಸಿದ್ದು ಆದರೆ ಎಲ್ಲರಿಗೂ ಅಚ್ಚರಿ ಹಾಗೂ ಖುಷಿಯಾಗಿರೋದು ಕಿಚ್ಚ ಸುದೀಪ್‌ ಬೆಂಬಲಕ್ಕೂ ದರ್ಶನ್ ಥ್ಯಾಂಕ್ಸ್ ಹೇಳಿದ್ದಾರೆ.

ಇನ್ನು ದರ್ಶನ್ ತನ್ನ ಅಭಿಮಾನಿಗಳಿಗೂ ಪತ್ರ ಬರೆದು ಧನ್ಯವಾದಗಳನ್ನು ತಿಳಿಸಿದ್ದು ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ.

ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು. ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ. ಎಂದು ದರ್ಶನ್ ಹೇಳಿದ್ದಾರೆ.

ಭಾನುವಾರ ಸಂಜೆ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ 2ನೇ ಹಾಡು ಬಿಡುಗಡೆ ಆಗಿದ್ದು ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಲ್ಮೀಕಿ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾಪರ್ಣೆ ಮಾಡಿ ದರ್ಶನ್ ವೇದಿಕೆ ಏರಿದ್ದು ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಜೊತೆಗಿತ್ತು. ವೇದಿಕೆಯಲ್ಲಿ ರಚಿತಾ ರಾಮ್ ಮಾತನಾಡುವ ವೇಳೆ ಕಿಡಿಗೇಡಿ ಒಬ್ಬ ದರ್ಶನ್ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿತ್ತು.

ಸಾವಿರಾರು ಜನರ ನಡುವೆ ಇದನ್ನು ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ನಟ ದರ್ಶನ್ ಕೂಡ ಇರ್ಲಿ ಚಿನ್ನ ಪರ್ವಾಗಿಲ್ಲ ಎಂದು ಹೇಳಿ ಸುಮ್ಮನಾಗಿದ್ದರು. ದರ್ಶನ್ ರವರ ಈ ಮಾತು ಹಾಗೂ ಗುಣಕ್ಕೆ ಎಲ್ಲರೂ ಮಾರು ಹೋಗಿದ್ದರು. ಸದ್ಯ ದರ್ಶನ್ ಗುಣ ಸಾರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಟ ಆಧಿತ್ಯ ರವರ ಮೂವಿ ಲಾಂಚ್ ವೇಳೆ ದರ್ಶನ್ ಮಾತು ಹೇಗಿತ್ತು ನೀವೆ ನೋಡಿ.