ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಾಹುಬಲಿ ಸೆಟ್ ನಲ್ಲಿ ರಾಜಮೌಳಿ ಶ್ರಮ ನೋಡಿ…ಚಿಂದಿ ವಿಡಿಯೋ

294

Bahubali Movie Behind the Scene | Prabhas | Anushka Shetty | SS Rajamouli | Making of Baahubali: ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ: ದಿ ಬಿಗಿನಿಂಗ್ ಸಿನಿಮಾ ಬಿಡುಗಡೆಯಾಗಿ 7 ವರ್ಷಗಳನ್ನು ಪೂರೈಸಿದ್ದು ಜುಲೈ 10 2015 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಎಲ್ಲೆಡೆ ಸಂಚಲನವನ್ನು ಸೃಷ್ಟಿಸಿತು.  ಹೌದು 180 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 650 ಕೋಟಿ ರೂ. ಗಳಿಸಿದ್ದು ಈ ಚಿತ್ರ ದಕ್ಷಿಣದ ಜೊತೆಗೆ ಹಿಂದಿ ಚಿತ್ರರಂಗವನ್ನೂ ಅಲ್ಲಾಡಿಸಿತು.

ಹೌದು ಚಿತ್ರದಲ್ಲಿ ಪ್ರಭಾಸ್ ರಾಣಾ ದಗ್ಗುಬಾಟಿ ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಅದ್ದೂರಿ ಸೆಟ್‌ಗಳು ಅತ್ಯಾಕರ್ಷಕ ಛಾಯಾಗ್ರಹಣ ಮತ್ತು ವಿಷ್ಯುಲ್ ಎಫೆಕ್ಟ್‌ಗಳೊಂದಿಗೆ ನಿರ್ಮಸಲಾಗಿದೆ.

ಇನ್ನು ಬಾಹುಬಲಿ ಬಿಡುಗಡೆಯೊಂದಿಗೆ ಹಲವು ದಾಖಲೆಗಳನ್ನು ಮಾಡಿದ್ದು ಈ ಚಿತ್ರ ವಿಶ್ವಾದ್ಯಂತ 650 ಕೋಟಿ ಗಳಿಸಿತ್ತು. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ದಕ್ಷಿಣ ಭಾರತದ ಚಿತ್ರವಿದು. ಅಷ್ಟೇ ಅಲ್ಲದೇ ಡಬ್ಬಿಂಗ್ ನಂತರ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಹಿಂದಿಯೇತರ ಚಿತ್ರವಿದು.

ಹೌದು ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇನ್ನು ಈ ಚಿತ್ರದಲ್ಲಿ VFX ಅನ್ನು ಅದ್ಭುತವಾಗಿ ಬಳಸಲಾಗಿದ್ದು 90 ರಷ್ಟು ಚಿತ್ರದ ಕೆಲಸವನ್ನು ಕಂಪ್ಯೂಟರ್ ಮತ್ತು ಗ್ರಾಫಿಕ್ಸ್ ಮೂಲಕ ಮಾಡಲಾಗಿದೆ. ಚಿತ್ರದಲ್ಲಿ 5000 ಕ್ಕೂ ಹೆಚ್ಚು ದೃಶ್ಯ ಪರಿಣಾಮಗಳು ಮತ್ತು ಶಾಟ್‌ಗಳಿದೆ.

15 ಕ್ಕೂ ಹೆಚ್ಚು ಗ್ರಾಫಿಕ್ಸ್ ಮತ್ತು ಅನಿಮೇಷನ್ ಕಂಪನಿಗಳ ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಈ ಚಿತ್ರವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಅತಿ ದೊಡ್ಡ ಪೋಸ್ಟರ್‌ಗಳಿಗೆ ಪ್ರವೇಶಿಸಿತು. ಈ ಪೋಸ್ಟರ್ 50 ಸಾವಿರ ಚದರ ಅಡಿಗಿಂತ ದೊಡ್ಡದಾಗಿದೆ. ಇನ್ನು ಚಿತ್ರದಲ್ಲಿ ಖಳನಾಯಕ ಕಲ್ಕೇಯ ಮಾತನಾಡುವ ಭಾಷೆಯನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ ಎನ್ನಲಾಗಿದೆ.

ಈ ಚಿತ್ರ ಬಿಡುಗಡೆಯಾದಾಗ ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಪರಿಗಣಿಸಲಾಗಿತ್ತು ಎನ್ನಲಾಗಿದೆ.
ಚಿತ್ರವನ್ನು ನಿರ್ಮಿಸಲು ಅಂದಾಜು ಮಾಡಿದ ಬಜೆಟ್ ಅದಕ್ಕಿಂತ 40 ಪ್ರತಿಶತ ಹೆಚ್ಚು. ಕಲಕೇಯನ ಜೊತೆ ತೋರಿಸಿದ ಯುದ್ಧದ ಚಿತ್ರೀಕರಣಕ್ಕೆ 30 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಕೂಡ ವರದಿಯಾಗಿದೆ.

ಇನ್ನು ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಬದಲಿಗೆ ಶ್ರೀದೇವಿಯನ್ನು ಆಯ್ಕೆ ಮಾಡಲಾಗಿದ್ದು ಆದರೆ ಸಂಭಾವನೆ ವಿಷಯವಾಗಿ ನಿರ್ಮಾಪಕರೊಂದಿಗೆ ಯಾವುದೇ ಮಾತುಕತೆ ಹೊಂದಿಕೆಯಾಗದ ಕಾರಣ ಶ್ರೀದೇವಿ ಬದಲಿಗೆ ರಮ್ಯಾ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಚಿತ್ರದಲ್ಲಿ ಬಾಹುಬಲಿ ಪಾತ್ರವನ್ನು ನಿರ್ವಹಿಸಲು ಪ್ರಭಾಸ್ ತಮ್ಮ ದೇಹವನ್ನು ಒಂದು ರೂಪಕ್ಕೆ ತಂದು ಕೊಳ್ಳಲು ಶ್ರಮಿಸಿದ್ದು ಅವರು ದಿನಕ್ಕೆ 6 ಬಾರಿ ಆಹಾರ ಸೇವಿಸುತ್ತಿದ್ದರು. ದೇಹದಾರ್ಢ್ಯ ಪಟು ಲಕ್ಷ್ಮಣ್ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಅವರು ತಮ್ಮ ಫಿಟ್‌ನೆಸ್‌ಗಾಗಿ ಕೆಲಸ ಮಾಡಿದರು. ಸದ್ಯ ಚಿತ್ರದ ಬ್ಯೂಟಿಫುಲ್ ಮೇಕಿಂಗ್ ಹೊರಬಂದಿದ್ದು ಸಿನಿಮಾ ಚಿತ್ರಿಸಲು ಎಷ್ಟು ಕಷ್ಟ ಬಿದ್ದಿದ್ದಾರೆ ನೀವೆ ನೋಡಿ.