ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಷ್ಣುವರ್ಧನ್ ಹೆಸರನ್ನು ಹೇಳಿ ಮಾತಾಡಿದ ಅಕ್ಷಯ್ ಕುಮಾರ್..ಚಿಂದಿ ವಿಡಿಯೋ

13,756

Akshay kumar’s Kannada film sweet memory: ನಟ ಅಕ್ಷಯ್​ ಕುಮಾರ್​ ರವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದು ಅವರು ಸಿನಿಮಾಗಳಿಗೆ ಹಣ ಹೂಡಿದರೆ ಖಂಡಿತಾ ನಷ್ಟ ಆಗುವುದಿಲ್ಲ ಎಂಬ ನಂಬಿಕೆ ಎಲ್ಲ ನಿರ್ಮಾಪಕರಿಗೂ ಬಂದಿದೆ. ಹೌದು ಎಂಥ ಕಷ್ಟದ ಸಂದರ್ಭದಲ್ಲಿಯೂ ಅವರ ಸಿನಿಮಾಗಳು ಮಿನಿಮಮ್​​ ಬಿಸ್​ನೆಸ್​ ಖಂಡಿತಾ ಮಾಡುತ್ತವೆ.

 

ಹಾಗಾಗಿ ನಿರ್ಮಾಪಕರ ಪಾಲಿಗೆ ಅಕ್ಷಯ್​ ಕುಮಾರ್​ ನೆಚ್ಚಿನ ಹೀರೋ ಆಗಿದ್ದು ಈಗ ಅವರ ಹೊಸ ಸಿನಿಮಾ ಬಗ್ಗೆ ಅಚ್ಚರಿಯ ಸುದ್ದಿಯೊಂದು ಹರಿದಾಡಿದ್ದು ಬಡೆ ಮಿಯಾ ಚೋಟೆ ಮಿಯಾ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಬರೋಬ್ಬರಿ 170 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ.

 

ಅಕ್ಷಯ್​ ಕುಮಾರ್​ ರವರ ನಟನೆಯ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತವೆ ಎಂಬುದರಲ್ಲಿ ಅನುಮಾನವೇ ಬೇಡ. ಹೌದು ಹಾಗಾಗಿ ಅವರು ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಮುಂದಿರುತ್ತಾರೆ. ಆದರೆ ಈ ಬಾರಿ ಅಕ್ಷಯ್​ ಕುಮಾರ್​ ಡಿಮ್ಯಾಂಡ್​​ ಮಾಡುತ್ತಿರುವುದು ತುಂಬ ದೊಡ್ಡ ಮೊತ್ತ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಟೈಗರ್​ ಶ್ರಾಫ್​​ ಕೂಡ ಅಭಿನಯಿಸಲಿದ್ದು ಅವರು ಸಹ ಕೋಟ್ಯಂತರ ರೂ. ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ.

ಕಲಾವಿದರ ಸಂಭಾವನೆ ಮತ್ತು ಮೇಕಿಂಗ್​ ಖರ್ಚು ಸೇರಿದರೆ ‘ಬಡೆ ಮಿಯಾ ಚೋಟೆ ಮಿಯಾ ಸಿನಿಮಾದ ಬಜೆಟ್​ 250 ಕೋಟಿ ರೂ. ಮೀರಲಿದೆ. ಇಷ್ಟೆಲ್ಲ ಖರ್ಚು ಮಾಡಲು ನಿರ್ಮಾಪಕರು ಸಿದ್ಧರಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಾಜೆಕ್ಟ್​ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

 

ಅಕ್ಷಯ್​ ಕುಮಾರ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಾರೆ. ಸಮಯ ಪಾಲನೆಯಲ್ಲಿ ಅವರು ತುಂಬ ಕಟ್ಟುನಿಟ್ಟು. ಅನಗತ್ಯವಾಗಿ ಚಿತ್ರೀಕರಣ ವಿಳಂಬ ಆಗುವುದನ್ನು ಅವರು ಸಹಿಸುವುದಿಲ್ಲ. ಹಾಗಾಗಿ ಅವರ ಸಿನಿಮಾಗೆ ಬಂಡವಾಳ ಹೂಡಲು ಎಲ್ಲ ನಿರ್ಮಾಪಕರು ಮುಂದೆ ಬರುತ್ತಾರೆ.

 

ಕಳೆದ ವರ್ಷ ಲಾಕ್​ಡೌನ್​ನಂತರ ಕಠಿಣ ಪರಿಸ್ಥಿತಿಯಲ್ಲೂ ಅವರ ಬೆಲ್​ಬಾಟಂ ಚಿತ್ರ ನಿರ್ಮಾಣವಾಗಿ ಬಿಡುಗಡೆಯಾಯಿತು. ಈಗ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ರಾಮ್​ ಸೇತು ರಕ್ಷಾ ಬಂಧನ್​ ಸಿನಿಮಾಗಳು ಬಿಡುಗಡೆಯಾಗಿದ್ದು ಒಳ್ಳೆಯ ಬಿಸಿನೆಸ್ ಮಾಡಿವೆ.

 

ಸದ್ಯ ಇದೀಗ ಅಕ್ಷಯ್ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಟ ಅಕ್ಷಯ್ ಕುಮಾರ್ ಅಪರಿಚಿತರೇನಲ್ಲ. ಬಹಳ ಹಿಂದೆಯೇ ವಿಷ್ಣು- ವಿಜಯ್ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಜತೆ ಅಭಿನಯ ಮಾಡಿದ್ದರು ಅಕ್ಷಯ್.

 

ಸಾಕಷ್ಟು ವರುಷಗಳ ಹಿಂದೆ ಶ್ರುತಿ ಹಾಸನ್ ರವರು ಸಂದರ್ಶನವೊಂದರಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾದಲ್ಲಿ ನಟಿಸಿ ಎಂದಿದ್ದು ಇದಕ್ಕೆ ಉತ್ತರಿಸದ ಅಕ್ಷಯ್ ವಿಷ್ಣು ವಿಜಯ ಸಿನಿಮಾ ಹಾಗೂ ವಿಷ್ಣುವರ್ಧನ್ ರವರನ್ನು ಹೇಗೆ ಸ್ಮರಿಸಿಕೊಂಡರು ನೀವೆ ನೋಡಿ.