ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪ್ರಾಣಿಗಳಲ್ಲಿ ಹುಲಿ ಕೂಡಾ ಒಂದಾಗಿದ್ದು, ಐತಿಹಾಸಿಕವಾಗಿ ಹುಲಿಗಳು ನಮ್ಮ ಸಂಸ್ಕೃತಿ, ಪುರಾಣ ಕಥೆಗಳು, ಮತ್ತು ದಂತಕಥೆಗಳಲ್ಲಿ ಹಾಸುಹೊಕ್ಕಾಗಿವೆ. ದೊಡ್ಡ ಮಾರ್ಜಾಲಗಳಲ್ಲಿ ಬಹಳ ದೊಡ್ಡದಾದ ಹಾಗೂ ಹೆಚ್ಚುಕಮ್ಮಿ ಮನುಷ್ಯನ ಗಾತ್ರಕ್ಕಿಂತ ಸುಮಾರು ಐದು ಪಟ್ಟು ದೊಡ್ಡ ಗಾತ್ರವುಳ್ಳ ಈ ಬೇಟೆಪ್ರಾಣಿಯನ್ನು ಮನುಷ್ಯರು ಮೆಚ್ಚುವುದರಲ್ಲಿ.
ಒಮ್ಮೊಮ್ಮೆ ಭಯಮಿಶ್ರಿತ ಗೌರವ ತೋರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಆದರೆ ಕಳೆದ ಎರಡು ಶತಮಾನದಿಂದ ಈ ಮನುಷ್ಯರ ಕಳ್ಳ ಬೇಟೆ ಹಾಗೂ ಆವಾಸಸ್ಥಳಗಳ ಅತಿಕ್ರಮಣದಿಂದ ಹುಲಿಗಳ ಸಂಖ್ಯೆಯಲ್ಲಿ ತೀವ್ರವಾಗಿ ಇಳಿಕೆಯಾಗಿ ಬಿಟ್ಟಿದೆ. ಹಿಂದೆ ಉತ್ತರದಲ್ಲಿ ರಷ್ಯಾದಿಂದ ಹಿಡಿದು ದಕ್ಷಿಣದಲ್ಲಿ ಜಾವಾ ದ್ವೀಪಗಳವರೆಗೂ ಹರಡಿದ್ದ ಹುಲಿಗಳ ವಿಸ್ತಾರವಾದ ಆವಾಸಸ್ಥಳಗಳಲ್ಲಿ ಈಗ ಶೇ. ೭%ಗಿಂತಲೂ ಕಡಿಮೆ ಉಳಿದರುವುದು ಬೇಸರ ಸಂಗತಿ.
ವಿಶ್ವಾದ್ಯಂತ ಶೇ. ೭೦%ರಷ್ಟು ಕಾಡುಹುಲಿಗಳು, ಮನುಷ್ಯರ ನೆಲೆಗಳೇ ಸುತ್ತುವರೆದಿರುವ ಭಾರತದ ವಿಭಜಿತ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಹುಲಿಗಳ ಭವಿಷ್ಯ ಕೇವಲ ಅವುಗಳ ಸಂಖ್ಯೆ ಹೆಚ್ಚುವುದರ ಮೇಲೆ ಮಾತ್ರವಲ್ಲ, ವಿಭಜಿತ ಅರಣ್ಯ ಪ್ರದೇಶಗಳ ನಡುವೆ ಅವುಗಳು ಆನುವಂಶಿಕವಾಗಿ ಸಂಬಂಧ ಹೊಂದುವುದರ ಮೇಲೆ ಅವಲಂಬಿಸಿದೆ. ಇದೀಗ ಹುಲಿ ಅಟ್ಯಾಕ್ ಮಡಿದ ವಿಡಿಯೋ ನೋಡಿ.