ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪಾರು ಸೀರಿಯಲ್ ಪ್ರೀತು ನಿಶ್ಚಿತಾರ್ಥದ ಡಾನ್ಸ್ ವಿಡಿಯೋ ನೋಡಿ …ಚಿಂದಿ

119,725
zee kannada preethu actor siddu moolimani  got engaged: ಸದ್ಯ ಇತ್ತೀಚೆಗೆ ಬಣ್ಣದ ಲೋಕದಲ್ಲಿ ಸ್ಟಾರ್ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕಳೆದ ಒಂದು ವರ್ಷದಿಂದ ಕಿರುತೆರೆಯಲ್ಲಿ ನಟ-ನಟಿಯರು ಪ್ರೀತಿಸಿ ಮದುವೆಯಾಗುವವರ ಸಂಖ್ಯೆ  ಕೂಡ ಹೆಚ್ಚಾಗಿದೆ ಎನ್ನಬಹುದು. ಸದ್ಯ ಇದೀಗ ಈ ಲಿಸ್ಟ್‌ಗೆ ಮತ್ತೆರಡು ಜೋಡಿಗಳು ಸೇರ್ಪಡೆಯಾಗಿದ್ದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದನ್-ಕವಿತಾ ಪ್ರೀತಿಸಿ ಮದುವೆಯಾದರು.
ಇನ್ನು ಇವರಂತೆಯೇ ಅಮೃತಾ ಮತ್ತು ಚಂದು ಗೌಡ ಗ್ಯಾಬ್ರಿಯಾಲಾ ಸ್ಮಿತ್ ಹಾಗೂ ಸೇರಿದಂತೆ ಹಲವು ಕಿರುತೆರೆ ನಟರು ಪ್ರೀತಿ ಮದುವೆಯಾಗಿದ್ದು ಒಂದೇ ವಾರದಲ್ಲಿ ಎರಡು ಜೋಡಿಗಳು ಉಂಗುರ ಬದಲಾಯಿಸಿಕೊಂಡಿವೆ.  ಹೌದು ಅದೂ ಸಹ ಒಂದೇ ವಾಹಿನಿಯಲ್ಲಿದ್ದ ಈ ನಟ-ನಟಿಯರು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಹೌದು ಕಳೆದ ವಾರವಷ್ಟೇ ಸತ್ಯ ಧಾರಾವಾಹಿಯ ನಾಯಕ ನಟ ಸಾಗರ್ ಬಿಳಿ ಗೌಡ ರವರು ತಮ್ಮ ಪ್ರೀತಿಯ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಾಗರ್ ಬಿಳಿ ಗೌಡ ರವರು ಫೋಟೋ ಹಂಚಿಕೊಂಡಿದ್ದರು. ಇನ್ನು ಸಾಗರ್ ಬಿಳಿ ಗೌಡ ಅವರು ಕೂಡ ಕಿರುತೆರೆ ನಟಿ ಸಿರಿ ರಾಜು ಅವರನ್ನು ಪ್ರೀತಿಸುತ್ತಿದ್ದು ವಿವಾಹವಾಗುವುದಾಗಿ ಹೇಳಿದ್ದರು. ಪ್ರೀತಿಯ ವಿಚಾರವನ್ನು ಗುಟ್ಟಾಗಿಟ್ಟು ನಿಶ್ಚಿತಾರ್ಥ ಸಂದರ್ಭದಲ್ಲಿ ಬಹಿರಂಗ ಪಡಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಸದ್ಯ ಇದೇ ರೀತಿ ಕೆಲವೇ ದಿನದ ಅಂತರದಲ್ಲಿ ಈಗ ಮತ್ತೊಂದು ಜೋಡಿ ಉಂಗುರ ಬದಲಾಯಿಸಿಕೊಂಡು ಸಂತಸವನ್ನು ಹಂಚಿಕೊಂಡಿದೆ.
ಹೌದು ಪ್ರಿಯಾ ಆಚಾರ್ ಹಾಗೂ ಸಿದ್ದು ಮೂಲಿಮನಿ ಸದ್ದಿಲ್ಲದೇ ಒಂದಾಗಿದ್ದು ಇಬ್ಬರು ನಿನ್ನೆಯಷ್ಟೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಹೌದು ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು  ಇದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರು ಮೊದಲು ಫೊಟೋವೊಂದನ್ನು ಶೇರ್ ಮಾಡಿ ಅದಕ್ಕೆ ತುಂಬಾ ಯಂಗ್ ಏಜ್ ನಲ್ಲಿ ಎಂಗೇಜ್ ಆದ್ವಿ ಎಂದು ಬರೆದುಕೊಂಡಿದ್ದು ಈ ಪೋಸ್ಟ್ ಅನ್ನು ನೋಡಿದವರೆಲ್ಲಾ ಶಾಕ್ ಆದರು. ತದನಂತರ ನಿಶ್ಚಿತಾರ್ಥದ ವೀಡಿಯೋ ನೋಡಿ ಖುಷಿ ಪಟ್ಟಿದ್ದು ದಾವಣಗೆರೆಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದ ತಮ್ಮ ಪ್ರೊಫೈಲ್ ನಲ್ಲೇ ಕನ್ನಡತಿ ಎಂದು ಹಾಕಿಕೊಂಡಿರುವ ಅಧಿತಿ ಅಲಿಯಾಸ್ ಪ್ರಿಯಾ ಆಚಾರ್ ಕನ್ನಡದ ಅಪ್ಪಟ ಅಭಿಮಾನಿಯಾಗಿದ್ದು ಡಬ್ ಸ್ಮ್ಯಾಶ್ ಟಿಕ್ ಟಾಕ್ ರೀಲ್ಸ್ ಮಾಡಿಕೊಂಡಿದ್ದ ಪ್ರಿಯಾ ಆಚಾರ್ ರವರಿಗೆ ನಟನೆ ಬಗ್ಗೆ ಗಂಧಗಾಳಿ ತಿಳಿದಿರದ ಇವರು ಗಟ್ಟಿಮೇಳ ಧಾರಾವಾಹಿಗೆ ಬಂದ ಮೇಲೆ ನಟಿಸುವುದನ್ನು ಕಲಿತರು.
ಇನ್ನು ಪಾರು ಧಾರಾವಾಹಿಯಲ್ಲಿ ಪ್ರೀತು ಎಂದೇ ಚಿರಪರಿಚಿತರಾಗಿರುವ ನಟ ಸಿದ್ದು ಮೂಲಿಮನಿಯವರು ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸಿದ್ದು ಮೂಲಿಮನಿ ಕನ್ನಡ ಚಿತ್ರರಂಗದ ಯುವನಟರಾಗಿದ್ದಾರೆ.
ಇನ್ನು ಪ್ರಿಯಾ ಜೆ ಆಚಾರ್ ಮತ್ತು ಸಿದ್ದುಮೂಲಿಮನಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದು  ಪ್ರಿಯಾ ಅಧಿತಿ ಪಾತ್ರದಲ್ಲಿ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ ಇತ್ತ ಪಾರು ಧಾರಾವಾಹಿಯಲ್ಲಿ ಸಿದ್ದು ಮೂಲಿಮನಿ ಯವರು ಪ್ರೀತಂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನು ಇವರಿಬ್ಬರು ಡ್ಯಾನ್ಸ್ ಶೋ ಒಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ಇಲ್ಲಿಂದ ಇಬ್ಬರಿಗೂ ಪರಿಚಯವಾಗಿತ್ತು. ಹೌದು ಪರಿಚಯದ ಬಳಿಕ ಪ್ರೀತಿಸಲು ಶುರು ಮಾಡಿದ ಈ ಜೋಡಿ ಧಮಾಕ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ಧಮಾಕ ಚಿತ್ರದ ಬಳಿಕ ಇವರಿಬ್ಬರು ಆಗಾಗ ಒಟ್ಟೊಟ್ಟಿಗೆ ರೀಲ್ಸ್ ಗಳನ್ನು ಮಾಡುತ್ತಿದ್ದರು. ಹೌದು ಆದರೆ ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಡಲಾಗಿತ್ತು.