ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಜ ಟಾಕೀಸ್ ರೆಮೋ ಜೊತೆ ಕಾಮಿಡಿ ಕಿಲಾಡಿ ನಯನಾ ಚಿಂದಿ ಡ್ಯಾನ್ಸ್…ವಿಡಿಯೋ

409

Nayana & Remo Tiktok videos Kannada comedy kiladigalu: ಕಾಮಿಡಿ ಕಿಲಾಡಿಗಳು ಸೀಸನ್ ಒಂದರ ಕಾರ್ಯಕ್ರಮದ ಭಾಗವಹಿಸಿ ತಮ್ಮ ಅಮೋಘ ನಟನೆಯಿಂದ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದವರು ನಟಿ ನಯನಾ. ಹೌದು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ನಯನಾ ಅವರು ಬೇರೆ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಕೂಡ ಮಾಡಿದ್ದು ಇದಕ್ಕಿಂತ ಹೆಚ್ಚಾಗಿ ಚಲನಚಿತ್ರಗಳಲ್ಲೂ ಕೂಡ ಅವಕಾಶವನ್ನು ಗಿಟ್ಟಿಸಿಕೊಂಡು ತೆರೆಯ ಮೇಲೂ ಕೂಡ ಕಾಮಿಡಿ ಕಮಾಲ್ ಮಾಡಿದ್ದಾರೆ.

ಇನ್ನು ಕಾಮಿಡಿ ಕಿಲಾಡಿಗಳು ಎಂಬ ಕಿರುತೆರೆ ಕಾರ್ಯಕ್ರಮದ ಮೂಲಕ ಅಪಾರ ಜನಪ್ರಿಯತೆನ್ನು ಪಡೆದುಕೊಂಡ ನಟಿ ನಯನ ರವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುತ್ತಾರೆ ಹಾಗೂ ತಮ್ಮ ಕಾಮಿಡಿ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಚಿಕ್ಕಂದಿನಿಂದಲೂ ಕೂಡ ಬಡತನದಿಂದಲೇ ಬೆಳೆದು ಬಂದಂತಹ ನಯನಾ ರವರು ಅಭಿನಯದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದು ಚಿಕ್ಕನಿಂದಲೂ ಸಹ ನಟನೆಯ ಕುರಿತಂತೆ ವಿಶೇಷವಾದ ಹಾಗೂ ವಿಪರೀತವಾದ ಆಸಕ್ತಿಯನ್ನು ನಯನಾ ಅವರು ಬೆಳೆಸಿಕೊಂಡು ಬಂದಿದ್ದಾರೆ.

ಹೌದು ಹೀಗಾಗಿಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾರೆ. ಇನ್ನು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಮನರಂಜನಾತ್ಮಕವಾಗಿ ನಟನೆ ಮಾಡುವುದರ ಮೂಲಕ ಪ್ರೇಕ್ಷಕರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದು ಇದಾದ ನಂತರ ನಯನಾ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ಜೀವನದಲ್ಲಿ ಎಂದೂ ಕಾಣದಂತಹ ಯಶಸ್ಸನ್ನು ಅದಾದ ಮೇಲೆ ಕಾಣುತ್ತಾರೆ. ನಯನಾ ಅವರು ಈ ಕಾರ್ಯಕ್ರಮದ ನಂತರ ಹಲವಾರು ಕನ್ನಡ ಚಿತ್ರಗಳ ಅವಕಾಶಗಳು ಅರಸಿಕೊಂಡು ಬಂದಿದ್ದು ಕನ್ನಡ ಚಿತ್ರರಂಗದಲ್ಲಿ ನಯನ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸುತ್ತಾರೆ.

ಅದರಲ್ಲಿಯೂ ಪ್ರಮುಖವಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ಯಜಮಾನ ಹಾಗೂ ಯುವರಾಜ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುವ ನಯನಾ ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು ಇದೀಗ ಮಜಾಭಾರತದ ರೇಮೋ ಜೊತೆ ಮಾಡಿರುವ ರೀಲ್ಸ್ ಬಾರಿ ವೈರಲ್ ಆಗುತ್ತಿದೆ. ಈ ಹಾಸ್ಯ ಕಲಾವಿದರ ರೀಲ್ಸ್ ನೋಡುವ ಕುತೂಹಲ ನಿಮಗಿದ್ದರೆ ಲೇಖನಿ ಕೆಳಗಿನ ವಿಡಿಯೋ ನೋಡಿ.

ಇನ್ನು ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ನಯನಾ ವಿರುದ್ಧ ಕಾಮಿಡಿ ಗ್ಯಾಂಗ್ಸ್ ರನ್ನರ್ ಅಪ್ ಸೋಮಶೇಖರ್ ಅವರು ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನಿನ್ನೆ ಸಂಜೆ 5 ಗಂಟೆಗೆ ಠಾಣೆಗೆ ಬನ್ನಿ ಎಂದು ನಯನಾ ಅವರಿಗೆ ಆರ್ ಆರ್ ಆರ್ ನಗರ ಪೊಲೀಸರು ಸೂಚನೆ ನೀಡಿದ್ದರು.

ಸ್ಟಾರ್ ಸುವರ್ಣ ವಾಹಿನಿಯ ಕಾಮಿಡಿ ಗ್ಯಾಂಗ್ಸ್ ಶೋನಲ್ಲಿ ನಯನಾ ಸೋಮಶೇಖರ್ ಚಿದಂಬರ್ ಅನೀಶ್ ಅವರು ಭಾಗವಹಿಸಿದ್ದು ಸೋಮಶೇಖರ್ ಅವರು ಈ ಶೋನ ರನ್ನರ್ ಅಪ್ ಆಗಿದ್ದರು. ಸೋಮಶೇಖರ್ ಅವರು ಗೆದ್ದ ಹಣವನ್ನು ಚಿದಂಬರ್ ಅನೀಶ್‌ಗೆ ನೀಡಬೇಕು ಎಂದು ನಯನಾ ಹೇಳಿದ್ದಾರಂತೆ. ಹೌದು ದುಡ್ಡು ಕೊಡು ಎಂದು ನನಗೆ ಪುನಃ ಪುನಃ ವಾಯ್ಸ್ ನೋಟ್ ಕಳಿಸಿರುವ ನಯನಾ ಅವರು ಅವಾಚ್ಯ ಪದ ಪ್ರಯೋಗ ಮಾಡಿದ್ದಾರೆ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್ ಅವರು ದೂರಿನಲ್ಲಿ ತಿಳಿಸಿದ್ದಾರೆ

ಇನ್ನು ಶೋನಲ್ಲಿ ಜ್ಯೂನಿಯರ್ ಸೀನಿಯರ್‌ಗಳಿದ್ದರು. ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಹಣವನ್ನು ಸೀನಿಯರ್‌ಗಳಿಗೆ ಕೊಡಬೇಕು ಅಂತೇನಿಲ್ಲ ಎಂದು ಚಾನೆಲ್‌ನವರು ಹೇಳಿದ್ದು ಹಾಗಾಗಿ ಕೊಟ್ಟಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ಆದರೆ ಈ ಹಣ ನೀಡಿ ಎಂದು ನಯನಾ ಒತ್ತಾಯ ಮಾಡುತ್ತಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ಈ ಶೋ ನಿರೂಪಣೆ ಮಾಡಿದ್ದು ಮುಖ್ಯಮಂತ್ರಿ ಚಂದ್ರು ಶ್ರುತಿ ಹರಿಹರನ್ ಕುರಿ ಪ್ರತಾಪ್ ಈ ಶೋನ ಜಡ್ಜ್ ಆಗಿದ್ದರು.