ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ಖಳನಾಯಕ ಎಂದರೇ ನಟ ಭಯಂಕರ ವಜ್ರಮುನಿ ಅವರು. ಕಂಠ, ಭಿಭತ್ಸ ನಗು, ಕೆಕ್ಕರಿಸಿ ನೋಡುವ ಕಣ್ಣುಗಳು ಹಾಗೂ ಅವರ ಸಂಭಾಷಣೆಗೆ ವೀಕ್ಷಕರು ಕೂಡ ಬೆಚ್ಚಿ ಬೀಳುತ್ತಿದ್ದರು. ಅಂತಹ ಹೇಳತೀರದ ಪ್ರತಿಭೆ ನಟ ವಜ್ರಮುನಿಯವರು. ತೆರೆಯಮೇಲೆ ಕ್ರೂರಪಾತ್ರಗಳ ಗಾಡ್ ಫಾದರ್ ಎಂದೇ ಖ್ಯಾತರಾಗಿದ್ದ ಅವರು, ತಮ್ಮ ನಿಜ ಜೀವನದಲ್ಲಿ ಸ್ನೇಹ ಜೀವಿಯಾಗಿದ್ದರು ಎಂಬುದು ವಿಶೇಷ.
ಯಾವ ಕಲಾವಿದರ ಜೊತೆಯಲ್ಲಿಯೂ ದ್ವೇಶ ಬೆಳಸಿ ಕೊಳ್ಳದ ಅವರು ತೆರೆಯ ಮೇಲೆ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿ, ಕೆಡುಕು ಪಾತ್ರದಲ್ಲಿಯೇ ಹೆಚ್ಚಾಗಿ ಕಾಣುಸುತ್ತಿದ್ದ ಅವರು, ಚಿತ್ರೀಕರಣದಲ್ಲಿ ಹೆಣ್ಣನ್ನು ಪೂಜಿಸುತ್ತಿದ್ದ ಸದ್ಗುಣ ಸಂಪನ್ನರಾಗಿದ್ದರು.
ಮೂರು ದಶಕಗಳ ಕಾಲ ವಜ್ರಮುನಿಯಾಗಿ ಕನ್ನಡ ಸಿನಿರಂಗದ ಬಹು ಬೇಡಿಕೆಯ ನಟನಾಗಿ ಆಳಿದ ಅವರು ನಟ ಬೈರವ, ನಟ ಭಯಂಕರ, ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ತಮ್ಮ ವೃತ್ತಿ ಜೀವನದ ಬಹುಪಾಲು ಕಾಲದಲ್ಲಿ ನಕಾರಾತ್ಮಕ ಪಾತ್ರದಲ್ಲಿ ಅಭಿನಯಿಸಿದ ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.ಇದೀಗ ವಜ್ರಮುನಿ ಅವರ ಮೊಮ್ಮಗ ಮಾಡಿರುವ ಡೈಯಲ್ಗ್ ವಿಡಿಯೋ ನೋಡಿ.