ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅದಿತಿ ಪ್ರಭುದೇವ ಜೊತೆ ಬೈಕ್ ಓಡಿಸಿದ ಮೇಘಾ ಶೆಟ್ಟಿ …ಚಿಂದಿ ವಿಡಿಯೋ

631

ತ್ರಿಬಲ್ ರೈಡಿಂಗ್ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದ್ದು ಅಲ್ಲಿ ಗೋಲ್ಡನ್ ಸ್ಟಾರ್ ಇದ್ದಾರೆ ಅಂದ್ಮೇಲೆ ಕೇಳ್ಬೇಕೆ? ನಿರೀಕ್ಷೆಗಳು ದುಪ್ಪಟ್ಟಾಗೋದು ಸಹಜ. ಆದರೆ ಈ ಸಿನಿಮಾ ಮೇಲೆ ವಿಶೇಷವಾದ ಹೋಪ್ಸ್ ಇತ್ತು. ಅದಕ್ಕೆ ಕಾರಣ ನೂರೆಂಟಿದ್ದು ಈ ನಡುವೆ ಚಿತ್ರದ ನಾಯಕಿಯರು ತಮ್ಮ ಅಭಿಮಾನಿಗಳ ಜೊತೆ ಬೈಕ್ ರೈಡಿಂಗ್ ಮಾಡಿದ್ದು ಎಲ್ಲಡೆ ಸಖತ್ ವೈರಲ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮೋಸ್ಟ್ ಅವೈಟೆಡ್ ಸಿನಿಮಾ ತ್ರಿಬಲ್ ರೈಡಿಂಗ್
ಸಿನಿಮಾ ಯಾವ್ದೇ ಆಗಿರಲಿ. ಪ್ರೇಕ್ಷಕ ನೋಡಬೇಕು ಅಂದತೆ ಮೊದಲು ಸಂಗೀತ ಪ್ರೀಯರ ಮನ ಗೆಲ್ಲಬೇಕು. ಚಿತ್ರಮಂದಿರಕ್ಕೆ ಸಿನಿ ಪ್ರೇಕ್ಷಕ ಬರೋದಕ್ಕೆ ಹಾಡುಗಳು ಇನ್ವಿಟೇಷನ್ ಇದ್ದಹಾಗೆ. ಹೌದು ಹಾಡುಗಳು ಹಿಟ್ ಆದ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆದ್ದ ಎಕ್ಸಾಂಪಲ್ಸ್ ತುಂಬಾ ಇವೆ. ಇದೀಗ ಸ್ಯಾಂಡಲ್ವುಡ್ನಲ್ಲಿ ತನ್ನ ಮ್ಯೂಸಿಕ್ನಿಂದಲೇ ಸದ್ದು ಮಾಡುತ್ತಿರೋ ಸಿನಿಮಾ ತ್ರಿಬಲ್ ರೈಡಿಂಗ್.

ತ್ರಿಬಲ್ ರೈಡಿಂಗ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಮತ್ತೊಂದು ಕಂಪ್ಲೀಟ್ ಎಂಟರ್ಟೈನ್ಮೆಂಟ್ ಇರೋ ಫುಲ್ಮಿಲ್ಸ್. ಹೌದು ಈ ಸಿನಿಮಾದ ಹಾಡುಗಳೇ ಈಗ ಸ್ಯಾಂಡಲ್ವುಡ್ನಲ್ಲಿ ಟ್ರೆಂಡ್ ನಲ್ಲಿದ್ದು ಅದರಲ್ಲೂ ಗಣೇಶ್ ಸಿನಿಮಾ ಅಂದ್ಮೇಲೆ ಅಲ್ಲೊಂದು ಡಾನ್ಸ್ ನಂಬರ್ ಇದ್ದೇ ಇರುತ್ತದೆ. ತ್ರಿಬಲ್ ರೈಡಿಂಗ್ನಲ್ಲೂ ಅಂತದ್ದೇ ಬ್ಯೂಟಿಫುಲ್ ಸಾಂಗ್ಗಳ ಮೂಲಕ ಗಣಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಗಣೇಶ್ ನಟನೆ ಮಾತ್ರ ಅಲ್ಲ ಬೆಸ್ಟ್ ಡಾನ್ಸರ್ ಕೂಡ ಹೌದು. ಇನ್ನು ಅದರಲ್ಲೂ ತ್ರಿಬಲ್ ರೈಡಿಂಗ್ ಸಿನಿಮಾ ಮೂರು ಜನ ಹುಡುಗಿರು ಒಬ್ಬ ಹುಡುಗನ ಕಥೆ ಇರೋ ಸಿನಿಮಾ. ಇಲ್ಲಿ ಗಣಿಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಧಿತಿ ಪ್ರಭುದೇವ ರಚನಾ ಇಂದನ್ ನಟಿಸಿದ್ದು ಈ ನಾಲ್ಕು ಜನರನ್ನ ಒಂದೇ ಹಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಮುರುಳಿ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ತ್ರಿಬಲ್ ರೈಡಿಂಗ್ ಸ್ಟಾರ್ಸ್ ಮಸ್ತ್ ಡಾನ್ಸ್ ಮಾಡಿದ್ದು ಇವರ ಡಾನ್ಸ್ ಧಮಾಕವನ್ನ ಜೈ ಆನಂದ್ ಕ್ಯಾಮೆರಾದಲ್ಲಿ ಚಿತ್ರಿಸಿದ್ದಾರೆ

ಸದ್ಯ ಗಣೇಶ್ ಮೂರು ಜನ ಬ್ಯೂಟಿಫುಲ್ ಹೀರೋಯಿನ್ಸ್ ಜೊತೆ ತ್ರಿಬಲ್ ರೈಡಿಂಗ್ ಹೊರಟಿದ್ದು
ಸಿನಿಮಾ ಇದೇ ನವೆಂಬರ್ ೨೫ಕ್ಕೆ ಬೆಳ್ಳಿತೆರೆ ಮೇಲೆ ಮೂಡಲಿದೆ. ಆದರೆ ಈ ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡಿರೋ ಗೋಲ್ಡನ್ ಸ್ಟಾರ್ ತಮ್ಮ ಚೆಲುವಿನ ಚಿತ್ತಾರ ಸಿನಿಮಾದ ಸ್ಟೈಲ್ನಲ್ಲೇ ಅಭಿಮಾನಿಗಳ ಜೊತೆ ಸೇರಿ ಬೈಕ್ ಓಡಿಸಿದ್ದಾರೆ.
ಸದ್ಯ ಈಗಾಗಲೇ ಟ್ರೇಲರ್ ಟೀಸರ್ ಹಾಗೂ ಸಾಂಗ್ಗಳ ಮೂಲಕ ಮೋಡಿ ಮಾಡಿರುವ ತ್ರಿಬಲ್ ರೈಡಿಂಗ್ ಸಿನಿಮಾ ಇನ್ನೇನ್ನು ಕೆಲವೇ ಕೆಲವು ದಿನಗಳಲ್ಲಿ ರಿಲೀಸ್ ಆಗಲಿದ್ದು ಇದರ ಬೆನ್ನಲೇ ಚಿತ್ರತಂಡ ಭರ್ಜರಿಯಾಗಿ ತ್ರಿಬಲ್ ರೈಡಿಂಗ್ ಪ್ರಮೋಷನ್ ಶುರು ಮಾಡಿದೆ. ಅದು ತ್ರಿಬಲ್ ರೈಡ್ ಮಾಡುವ ಮೂಲಕವೇ ಪ್ರಮೋಷನ್ಗೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಹೌದ ನಟಿ ಅಧಿತಿ ಮೇಘಾ ಶೆಟ್ಟಿ ಹಾಗೂ ರಚನಾ ಬೈಕ್ ನಲ್ಲಿ ಯಾವ ರೀತಿ ರೈಡ್ ಮಾಡುತ್ತಿದ್ದಾರೆ ನೀವೆ ನೋಡಿ.