ನಮಗೆಲ್ಲರಿಗೂ ತಿಳಿದಿರುವ ಹಾಗೆ ಅಕ್ಟೋಬರ್ 29 ಕರುನಾಡಿಗೆ ಮತ್ತು ನಮ್ಮ ಕನ್ನಡಿಗರಿಗೆ ಅಕ್ಷರಶಃ ಕರಾಳ ದಿನ. ಈ ರೀತಿಯಾಗಿಯೂ ಕೂಡ ನಡೆಯುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಹೌದಿ ಚಿತ್ರರಂಗದವರಿಗೆ ಇವರು ಅರಸು ಆದರೆ ಚಿಕ್ಕ ಮಕ್ಕಳಿಗೆ ಪ್ರೀತಿಯ ಅಪ್ಪು. ಇನ್ನು ಯುವ ಪೀಳಿಗೆಗಳಿಗೆ ಯುವರತ್ನನಾದರೆ ಕರುನಾಡ ಮನೆ ಮನೆಗೂ ರಾಜಕುಮಾರ. ಹೌದು ಇಂತಹ ನಂದದೀಪ ಆರಿ ಹೋಗಿದ್ದು ಚಿತ್ರರಂಗವನ್ನು ಕಗ್ಗತ್ತಲು ಮಾಡಿದೆ ಎನ್ನಬಹುದು. ಹೌದು ನಿಜಕ್ಕೂ ಅಪ್ಪು ಇಹಲೋಕ ತ್ಯಜಿಸಿದ್ದಾರೆ ಎಂದರೆ ಆ ವಾಕ್ಯವನ್ನು ಸಜ ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.
ಎಂತಹ ವ್ಯಕ್ತಿತ್ವ ಹೇಳಿ? ಅಭಿಮಾನಿಗಳಲ್ಲಿ ಅಭಿಮಾನದಿಂದ ಬೆರೆಯುತ್ತಾ ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಅತ್ಯಂತ ಸರಳವಾಗಿದ್ದ ಪುನೀತ್ ರವರ ಗುಣಕ್ಕೆ ಅವರೇ ಸಾಟಿ ಎನ್ನಬಹುದು. ಇವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಿದ್ದರು. ಹೌದು ನಿಜಕ್ಕೂ ಅಪ್ಪನ ಸ್ವರೂಪ ಮತ್ತು ವ್ಯಕ್ತಿತ್ವವನ್ನು ಹೊತ್ತು ಕೊಂಡು ಬಂದಿದ್ದ ಅಪ್ಪು ಇದೀಗ ತಮ್ಮ ಅಪ್ಪನ ಬಳಿಯೇ ಹೋಗಿ ಬಿಟ್ಟಿದ್ದು ನಿಜಕ್ಕೂ ಇದು ಆಳಿಸಲಾರದ ದಿನ ಎನ್ನಬಹುದಾಗಿದೆ.
ಅಶ್ವಿನಿ ಅವರು ಕೂಡ ಹಿಂದೆಯೇ ಅಪ್ಪುವನ್ನು ನಂಬಿಕೊಂಡಿದ್ದ ಪಿಆರ್ ಕೆ ಪ್ರೊಡಕ್ಷನ್ಸ್ ಕಂಪನಿಯ ಸಿಬ್ಬಂಧಿಯ ಜೀವನ ಹಾಳಾಗಬಾರದೆಂದು ಸಿನಿಮಾಗಳ ಕೆಲಸವನ್ನು ಶುರು ಮಾಡಿದ್ದರು. ಅಶ್ವಿನಿ ಅವರ ನಡೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು ಅವರಿಗೆ ಬೆಂಬಲ ಸೂಚಿಸಿದ್ದರು. ಇದೀಗ ಗಂಧದ ಗುಡಿ ಇವೆಂಟ್ ನಲ್ಲಿ ಅವರು ಕಣ್ಣೀರಿಟ್ಟ ವಿಡಿಯೋ ನೋಡಿ.