ಮೇಘನಾ ರಾಜ್ ಕನ್ನಡ ಚಿತ್ರರಂಗ ಮತ್ತು ದೇಶದ ಚಿತ್ರರಂಗ ಕಂಡ ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ನಟನೆಯನ್ನ ಮಾಡಿದ ನಟಿ ಮೇಘನಾ ರಾಜ್ ಅವರು ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಟಾಪ್ ನಟ ಚಿರಂಜೀವಿ ಸರ್ಜಾ ಅವರನ್ನ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು.
ಮದುವೆಯನ್ನ ಮಾಡಿಕೊಂಡ ಸುಮಾರು ಒಂದೂವರೆ ವರ್ಷಗಳ ಕಾಲ ಬಹಳ ಸುಖಕರವಾಗಿ ಸಂಸಾರವನ್ನ ಮಾಡಿದ ಇವರಿಬ್ಬರ ಸುಂದರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ನಟಿ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ದಿಡೀರ್ ಎಂದು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಚಿರು ಅಗಲಿ ಎರಡು ವರ್ಷವೇ ಆಗಿದ್ದರು ಕೂಡ ಇಂದಿಗು ಕೂಡ ನೆನಪಲ್ಲೆ ಇದ್ದಾರೆ. ಹೌದು ಪ್ರತಿದಿನ ಚಿರು ಫೋಟೋ ಹಾಗೂ ವಿಡಿಯೋ ನೋಡುತ್ತಾ ಭಾವುಕರಾಗುತ್ತಿದ್ದು ಸದ್ಯ ಇದೀಗ ಚಿರು ಹುಟ್ಟಿದ ಹಬ್ಬದ ವಿಶೇಷ ದಿನದಂದು ಮೇಘನಾ ಅವರು ಚಿರು ಸಮಾಧಿ ಬಳಿ ಬಂದು ಪೂಜೆ ಮಾಡಿದ್ದಾರೆ.
ಇದೀಗ ಮೇಘನಾ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ರಿಯಾಲಿಟಿ ಶೋ ಮುಗಿಸಿ ಮೇಘನಾ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನೌನ್ಸ್ ಮಾಡಿದ್ದ ಸಿನಿಮಾಗೆ ಮತ್ತೆ ಕಿಕ್ ಸ್ಟಾರ್ಟ್ ಕೊಡಲಾಗಿದೆ.ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ ಬಳಿಕ ಮೇಘನಾ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಅಂದಹಾಗೆ ಚಿರು ಪತ್ನಿ ಹೊಸ ಸಿನಿಮಾ ಘೋಷಣೆ ಮಾಡಿ ಅನೇಕ ತಿಂಗಳುಗಳೇ ಆಗಿತ್ತು. ಆದರೆ ನಂತರ ಆ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ.
ಬಳಿಕ ಮೇಘನಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಕಿರುತೆರೆಯ ರಿಯಾಲಿಟಿ ಶೋನಲ್ಲಿ ಮೇಘನಾ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಡಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಮೇಘನಾ ಕಿರುತೆರೆ ಅಭಿಮಾನಿಗಳ ಮುಂದೆ ಬಂದಿದ್ದರು. ಪತಿ ಚಿರಂಜೀವಿ ಅಗಲಿಕೆಯ ನಂತರ ಮೇಘನಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿರಲಿಲ್ಲ. ಡಾನ್ಸಿಂಗ್ ಶೋ ಮೂಲಕ ಸರ್ಜಾ ಕುಟುಂಬದ ಜೊತೆ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ಶೋ ಅದ್ಭುತವಾಗಿ ಮೂಡಿಬಂದಿತ್ತು. ಮೊದಲ ಜಡ್ಜ್ ಆಗಿದ್ದ ಮೇಘನಾ ಕಿರುತೆರೆ ಅಭಿಮಾನಿಗಳ ಮನಗೆದಿದ್ದರು.ಇದೀಗ ಸಿನಿಮಾ ಶೂಟಿಂಗ್ ವಿಚಾರವಾಗಿ ರಾಯನ್ ಸರ್ಜಾ ಮೇಘನಾ ವಿದೇಶಕ್ಕೆ ಹೊರಡಿದ್ದಾರೆ.ಮೇಘನಾ ಸಿನಿಮಾಕ್ಕಾಗಿ ಅಭಿಮಾನಿಗಳು ಮೋಸ್ಟ್ ವೈಟಿಂಗ್ ನಲ್ಲಿದ್ದಾರೆ.