ವಾರ್ತಾ ಮಂಜರಿ
Trending Stories, Viral News, Gossips & Everything in Kannada

Anushree: ಪುನೀತ್ ಪರ್ವ ಕಾರ್ಯಕ್ರಮದ ನಿರೂಪಣೆಗೆ ಮುಲಾಜಿಲ್ಲದೆ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ..ಅಬ್ಬಬ್ಬಾ

94,714

 

ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು.ಈ ಟಿವಿ ಕನ್ನಡ ವಾಹಿನಿಯ ಡಿಮಾಂಡೆಪ್ಪೋ ಡಿಮಾಂಡು  ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು.ನಂತರ ಬೆಂಕಿಪಟ್ಣ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.

ಇವರು 2011 ರಲ್ಲಿ ತೆರೆಕಂಡ ಮುರಳಿ ಮೀಟ್ಸ್ ಮೀರಾ ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ 2015 ರಲ್ಲಿ ಜೀ ಕನ್ನಡದ ಪಾಪುಲರ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಜೀ ಕನ್ನಡದ ಸರಿಗಮಪ’ ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್ ಗಳನ್ನು ಯಶಸ್ವಿ ನಿರೂಪಣೆ ಮಾಡಿದ್ದಾರೆ.

ಅನೇಕ  ಕಾರ್ಯಕ್ರಮಗಳ ನಿರೂಪಣೆಯನ್ನು ಅನುಶ್ರೀ ಮಾಡಿದ್ದರು. ಆಂಕರ್ ಆಗಿ ಖ್ಯಾತಿ ಪಡೆದ ಅನುಶ್ರೀ ಚಿತ್ರರಂಗಕ್ಕೂ ಕಾಲಿಟ್ಟರು. 2011ರಲ್ಲಿ ತೆರೆಕಂಡ ಭೂಮಿ ತಾಯಿ’2012ರ ‘ಬೆಳ್ಳಿ ಕಿರಣ,2015ರಲ್ಲಿ ಬಿಡುಗಡೆಯಾದ ಬೆಂಕಿಪಟ್ಣ,ರಿಂಗ್ ಮಾಸ್ಟರ್, ‘ಉತ್ತಮ ವಿಲನ್ ಮಾದ ಮತ್ತು ಮಾನಸಿ,ಉಪ್ಪು ಹುಳಿ ಖಾರ’ ಸಿನಿಮಾಗಳಲ್ಲಿ ಅನುಶ್ರೀ ಅಭಿನಯಿಸಿದ್ದಾರೆ.ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಮತ್ತು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮೂಲತಃ ಮಂಗಳೂರಿನವರು.ಅನುಶ್ರೀ ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು.  ಸದ್ಯ ಇವರು ಕನ್ನಡದ ಬೇಡಿಕೆಯ ನಿರೂಪಕಿಯಾಗಿದ್ದಾರೆ.

Anchor Anushree's name crops up in drug case

ಸದ್ಯ ಮಾಹಿತಿಯ ಪ್ರಕಾರ ಅನುಶ್ರೀ ಅವರು ಒಂದು ಎಪಿಸೋಡ್​ಗೆ ಒಂದು ಲಕ್ಷದ 20ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.ಸದ್ಯ ಅನುಶ್ರೀ ಅವರು ‘ಅನುಶ್ರೀ ಆ್ಯಂಕರ್‘ ಎಂಬ ಯ್ಯೂಟೂಬ್ ಚಾನೆಲ್ ಶುರು ಮಾಡಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಿದ್ದಾರೆ.ಅನುಶ್ರೀ ಅವರಿಗೆ ಪುನೀತ್ ರಾಜ್‌ಕುಮಾರ್ ಅಂದ್ರೆ ತುಂಬಾ ಇಷ್ಟ. ಮೊದಲಿನಿಂದಲೂ ಅಪ್ಪು ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಅನುಶ್ರೀಗೆ. ಪುನೀತ್ ಅವರನ್ನು ಕಳೆದುಕೊಂಡಾಗಲೂ ತಾನೂ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮದ ಸ್ಟೇಜ್‌ನಲ್ಲೆ ಗಳಗಳನೆ ಅತ್ತಿರುವುದು ಎಲ್ಲರಿಗೂ ನೆನಪಿದೆ.

ಈ ಸಂದರ್ಭದಲ್ಲಿ ನಟಿ ಅನುಶ್ರೀ ” ಕಳೆದ ವರ್ಷ ಹುಟ್ಟುಹಬ್ಬದ ದಿನ ಅಪ್ಪು ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದೆ. ಆಗ ಅನುಶ್ರೀ ಬಂದಿದ್ದಾರೆ ಎಂದು ಅವರು ಕೊಡುವ ಅಪ್ಪುಗೆ ಇದ್ಯಲ್ಲ ಮರೆಯಲು ಸಾಧ್ಯವಾಗಲ್ಲ. ಮನೆಗೆ ಎಲ್ಲರೂ ಸ್ವಾಗತಿಸಿತ್ತಾರೆ. ಆದರೆ ಮನೆಯಿಂದ ಹೊರಡುವಾಗ ಬೀಳ್ಕೊಡುವವರು ಕೆಲವರು ಮಾತ್ರ ಆಗಿದ್ದಾರೆ.

ಆ ಕೆಲವರಲ್ಲಿ ಅಪ್ಪು ಪ್ರಮುಖರಾಗಿದ್ದಾರೆ. ಅವರ ಮನೆಗೆ ಹೇಗೆ ಸ್ವಾಗತ ಇರುತ್ತೋ ಹಾಗೆಯೇ ಕಳುಹಿಸಿಕೊಡುತ್ತಾರೆ. ಆದರೆ ನಾನು ಅವರ ಮನೆಗೆ ಹೋದರೆ ಸ್ವಾಗತವೂ ಇಲ್ಲ, ಅಪ್ಪು ಸರ್ ಮಲಗಿದ್ದರು ಎಂದು ಹೇಳುತ್ತಾ ಕಣ್ಣೀರಾಗಿದ್ದರು.ಇನ್ನು ಪುನೀತ ಪರ್ವ ಕ್ಕೆ ಅನುಶ್ರಿ ಯವರೇ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.ಇವರ ಸಂಭಾವಣೆ  ಒಂದುವರೆ ಲಕ್ಷ ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ