ವಾರ್ತಾ ಮಂಜರಿ
Trending Stories, Viral News, Gossips & Everything in Kannada

Mint: ಸುವಾಸನೆ ಭರಿತ ಪುದಿನಾ ಸೊಪ್ಪಿನಲ್ಲಿದೆ ಔಷಧೀಯ ಗುಣ, ಯಾವೆಲ್ಲಾ ರೋಗಗಳಿಗೆ ರಾಮಬಾಣ ಗೊತ್ತಾ?

161

ಪುದಿನಾ ಸೊಪ್ಪು ಗೃಹಿಣಿಯರಿಗೆ ಈ ಸೊಪ್ಪು ಚಿರಪರಿಚಿತವಾಗಿದೆ. ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಸೊಪ್ಪುಗಳಲ್ಲಿ ಪುದಿನಾ ಕೂಡ ಒಂದು. ಈ ಸೊಪ್ಪು ಆಹಾರವನ್ನು ರುಚಿಕರವಾಗಿಸುವುದಲ್ಲದೇ, ಪುದಿನಾ ಔಷಧೀಯ ಗುಣಗಳ ಆಗರವಾಗಿದೆ. ಹಸಿರು ಬಣ್ಣದಿಂದ ಕೂಡಿರುವ ಈ ಎಲೆಯು ನೋಡಲು ಚಿಕ್ಕ ಗಾತ್ರವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೇ ಸುವಾಸನೆ ಭರಿತವಾಗಿರುತ್ತದೆ. ಆದರೆ ಈ ಪುದಿನಾದಲ್ಲಿ ಆರೋಗ್ಯಕರ ಅಂಶವು ಅತ್ಯದ್ಭುತವಾಗಿವೆ. ವಿಶೇಷ ಬಗೆಯ ಅಡುಗೆ, ಜ್ಯೂಸ್ ಹಾಗೂ ಸಲಾಡ್ ಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಆರೋಗ್ಯ ಸಂಬಂಧಿ ಕಾಯಿಲೆಯನ್ನು ಹೋಗಲಾಡಿಸಲು ಈ ಪುದಿನಾ ಸೊಪ್ಪನ್ನು ಬಳಸುತ್ತಾರೆ. ಕೆಲವರು ಈ ಸೊಪ್ಪನ್ನು ತುಂಬಾನೇ ಇಷ್ಟ ಪಡುತ್ತಾರೆ ಇನ್ನು ಕೆಲವರಿಗೆ ಈ ಸೊಪ್ಪಿನ ಘಮ ಅಷ್ಟಾಗಿ ಇಷ್ಟವಾಗುವುದಿಲ್ಲ. ಪುದೀನದಲ್ಲಿ ವಿಟಮಿನ್ ಸಿ, ಡಿ, ಇ ಮತ್ತು ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕವು ಹೆಚ್ಚಾಗಿರುತ್ತದೆ. ಹೀಗಾಗಿ ಅನೇಕ ರೀತಿಯ ರೋಗಗಳಿಗೆ ರಾಮಬಾಣವಾಗಿ ಕೆಲಸಗಳು ಮಾಡುತ್ತದೆ. ಯಾವೆಲ್ಲಾ ಆರೋಗ್ಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿದೆ ಎಂಬುದನ್ನು ತಿಳಿದು ಕೊಳ್ಳುವುದು ಒಳ್ಳೆಯದು.

  • ಪುದಿನಾ ಸೊಪ್ಪಿನ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿ ಸೇವಿಸಿದರೆ ಗ್ಯಾಸ್ ಟ್ರಬಲ್ ತೊಂದರೆ ದೂರವಾಗುತ್ತದೆ.
  • ಪುದಿನಾ ಸೊಪ್ಪಿನ ರಸಕ್ಕೆ ಜೇನುತುಪ್ಪ ಸೇರಿಸಿ ತಿಂದರೆ ವಾಂತಿಯಾಗುವುದು ನಿಲ್ಲುತ್ತದೆ.
  • ಪುದಿನಾ ಎಲೆಗಳನ್ನು ಊಟಕ್ಕೆ ಮುಂಚೆ ಮತ್ತು ಊಟದ ನಂತರ ಅಗಿದು ತಿನ್ನುತ್ತಿದ್ದರೆ ಬಾಯಿಯ ದುರ್ಗಂಧವು ದೂರವಾಗುವುದು.
  • ಪುದಿನಾ ಶರಬತ್ತನ್ನು ಕುಡಿಯುತ್ತಿದ್ದರೆ ಬಾಯಿಯ ವಾಸನೆ ಹೊರಟು ಹೋಗುತ್ತದೆ.
  • ಪುದಿನಾ ಸೊಪ್ಪಿನ ಚಟ್ಟಿಯನ್ನು ಮಾಡಿಕೊಂಡು ಅನ್ನ, ತಿಂಡಿಯ ಜೊತೆಗೆ ತಿನ್ನುತ್ತಿದ್ದರೆ ಜೀರ್ಣಶಕ್ತಿ ಹೆಚ್ಚಾಗುವುದು.
  • ಪುದಿನಾ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಗಂಟಲು ಕಟ್ಟಿರುವ ತೊಂದರೆ ನಿವಾರಣೆಯಾಗುತ್ತದೆ.
  • ಪುದಿನಾ ಸೊಪ್ಪಿನ ಟೀ ತಯಾರಿಸಿಕೊಂಡು ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಅಜೀರ್ಣ, ನೆಗಡಿ, ಹೊಟ್ಟೆ ಉಬ್ಬರ ಮತ್ತು ಬಿಕ್ಕಳಿಕೆ ಉಪಶಮನವಾಗುವುದು.