ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದುಬೈನಲ್ಲಿ ರಿಷಬ್ ಶೆಟ್ಟಿ ಎಂಟ್ರಿ ನೋಡಿ….ಚಿಂದಿ ವಿಡಿಯೋ

7,234

ಸ್ಯಾಂಡಲ್ ವುಡ್ ನ (Sandalwood) ಭರ್ಜರಿ ಸಿನಿಮಾ ಕಾಂತಾರ (Kantara) ಚಿತ್ರ ಕನ್ನಡದ (Kannada) ಹೆಮ್ಮೆಯ ಸಿನಿಮಾ ಎನ್ನಬಹುದು. ಈ ಸಿನಿಮಾದ ಗುಂಗು ಜನರಲ್ಲಿ ಇನ್ನೂ ಇದ್ದು ಸಿನಿಮಾ ತಂಡವೂ(Cinema Team)ಇದೇ ಮೂಡ್​ ನಲ್ಲಿಯೆ ಚಿತ್ರದ ಪ್ರಚಾರವನ್ನ ಭರ್ಜರಿಯಾಗಿಯೇ ಮಾಡಿತ್ತು. ಇದರಿಂದ ಚಿತ್ರ ಜನರಿಗೆ ರೀಚ್ ಆಗಲು ಅನುಕೂಲ ಕೂಡ ಆಗಿದ್ದು ಹೆಚ್ಚು ಕಡಿಮೆ ಒಂದೂವರೆ ಎರಡು ತಿಂಗಳು ಪ್ರಚಾರದ ಕೆಲಸದಲ್ಲಿಯೆ ಚಿತ್ರದ ಕಲಾವಿದರು ಬ್ಯುಸಿ ಆಗಿದ್ದರು.

ಸದ್ಯ ಈಗ ಈ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ (Rishab Shetty) ರಿಷಬ್ ಶೆಟ್ಟಿ ಜಾಲಿ ಮೂಡ್​ (Jolly Mood) ನಲ್ಲಿಯೇ ಇದ್ದಾರೆ ಎನ್ನುಬಹು. ಕನ್ನಡ ಡಿಜಿಟಲ್​ಗೆ ಹಿಂದೇನೆ ಪ್ರಚಾರದ ಕೆಲಸ ಮುಗಿಸಿಕೊಂಡು ರಿಲ್ಯಾಕ್ಸ್ (Relax) ಆಗುತ್ತೇನೆ ಎಂದಿದ್ದರು. ಅದರಂತೆ ರಿಷಬ್ ಶೆಟ್ಟಿ(Rishab Shetty) ಫ್ಯಾಮಿಲಿ (Family) ಜೊತೆಗೆ ದುಬೈ​ ಪ್ರವಾಸಕ್ಕೆ (Dubai Trip) ತೆರಳಿದ್ದಾರೆ.

ಕಾಂತಾರ(Kantara) ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ(Rishab Shetty) ಲಕ್ಕಿ ಇದ್ದಾರೆ. ಸಿನಿಮಾ ಜರ್ನಿಯಲ್ಲಿ ಅಸಿಸ್ಟಂಟ್​ ಡೈರೆಕ್ಟರ್(Assistant Director) ಆಗಿ, ಸಣ್ಣ-ಪುಟ್ಟ ಪಾತ್ರಗಳನ್ನ ಮಾಡುತ್ತಲೇ ಒಂದು ಹಂತಕ್ಕೆ ಬಂದು ಹೀರೋ (Hero)ಆದೋರು. ಆದರೆ ಕಾಂತಾರ ಸಿನಿಮಾ ಈ ಪ್ರತಿಭಾವಂತ ನಟ-ನಿರ್ದೇಶಕನನ್ನ ಸೂಪರ್ ಸ್ಟಾರ್(Supet Star) ಮಾಡಿ ಬಿಟ್ಟಿದೆ. ಕನ್ನಡದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಸಿಂಪಲ್ ಆಗಿಯೇ ಇದ್ದು ದಕ್ಷಿಣದ ಉಡುಗೆ ತೊಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ. ಹೌದು ಕಾಂತಾರ ಚಿತ್ರ ಅತಿ ದೊಡ್ಡ ಯಶಸ್ಸು (Success) ಕಂಡ್ರೂ ಆ ಯಶಸ್ಸನ್ನ ತಲೆಗೆ ಏರಿಸಿಕೊಂಡೇ ಇಲ್ಲ. ಹೌದು ಈ ಹಿಂದೆ ಹೇಗಿದ್ದರೋ ಅದೇ ರೀತಿನೇ ರಿಷಬ್ ಈಗಲು ಇದ್ದಾರೆ.

ರಿಷಬ್ ಶೆಟ್ಟಿ ಸದ್ಯ ದುಬೈ ಪ್ರವಾಸಲ್ಲಿಯೇ ಇದ್ದು ಇಲ್ಲಿಯ ಪ್ರತಿ ಕ್ಷಣವನ್ನೂ ಕೂಡ ಅಷ್ಟೇ ಚಂದಗೆ ಎಂಜಾಯ್ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿರೋ ಲೇ ಲೇ ಹಾಡು ಸಹ ರಿಷಬ್ ಕುಳಿತ ಬೋಟ್​ ನಲ್ಲಿ ಕೇಳಿ ಬರುತ್ತದೆ. ಇಲ್ಲಿಯ ಸುಂದರ ತಾಣಗಳನ್ನೂ ನೋಡಿ ಖುಷಿ ಪಡ್ತಿದ್ದು ಈ ಒಂದು ಕ್ಷಣದ ಒಂದು ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.
ದುಬೈ ಪ್ರವಾಸದಲ್ಲಿ ರಿಷಬ್ ಜೊತೆಗೆ ಫ್ಯಾಮಿಲಿ ಕೂಡ ಇದ್ದು ಫ್ಯಾಮಿಲಿ ಜೊತೆಗೆ ದುಬೈ ಪ್ರವಾಸ ಮಾಡ್ತಾ ಇದ್ದೇನೆ. ಶೀಘ್ರದಲ್ಲಿಯೇ ವಾಪಾಸ್ ಬರುತ್ತೇನೆ ಎಂದಿದ್ದಾರೆ. ರಿಷಬ್ ದುಬೈ ನಲ್ಲಿ ಹೇಗೆ ಕುಟುಂಬದ ಎಂಜಾಯ್ ಮಾಡುತ್ತಿದ್ದಾರೆ ಎಂದು ಕೆಳಗಿನ ವಿಡಿಯೋದಲ್ಲಿ ನೋಡಬಹುದು.