ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹೆಮ್ಮೆಯಿಂದ ಕನ್ನಡ ಮಾತಾಡಿದ ಶಿಲ್ಪಾ ಶೆಟ್ಟಿ…ಚಿಂದಿ ವಿಡಿಯೋ

82,733

ಕಳೆದ ವರುಷ ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ನಟಿ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದರು. ಸೂಪರ್ ಡಾನ್ಸರ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ಅದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶಿಲ್ಪಾ ಅವರ ಸಂಕಷ್ಟದ ಸಮಯದಲ್ಲಿ ತಂಡವು ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿತ್ತು.

 

ಮಗು ಕುಟುಂಬಕ್ಕೋಸ್ಕರವಲ್ಲದೇ ತಮ್ಮನ್ನು ದೃಷ್ಟಿಯಲ್ಲಿಟ್ಟುಕೊಂಡು ರಿಯಾಲಿಟಿ ಶೋದಲ್ಲಿ ಭಾಗಿಯಾಗುವುದು ಅವಶ್ಯಕ ಎಂದೆನಿಸಿದ್ದರಿಂದ ಮರಳಲು ಒಪ್ಪಿಕೊಂಡಿದ್ದು ಅವರನ್ನು ಶೋಗೆ ಅದ್ದೂರಿಯಾಗಿ ಆಮಂತ್ರಿಸಿದ್ದನ್ನು ನೋಡಿ ಶಿಲ್ಪಾ ಭಾವುಕರಾದರು. ಹೌದು ಶಿಲ್ಪಾ ಅವರು ಶೋಗೆ ಪ್ರವೇಶ ಮಾಡುತ್ತಾ ತಮಗೆ ಸಿಕ್ಕ ಸ್ವಾಗತ ನೋಡಿ ಭಾವುಕರಾಗಿದ್ದು ಆಗ ಸಹ ನಿರ್ಣಾಯಕರಾದ ನಿರ್ದೇಶಕ ಅನುರಾಗ್ ಬಸು ಹಾಗೂ ಗೀತಾ ಕಪೂರ್ ಶಿಲ್ಪಾ ಅವರನ್ನು ಸಮಾಧಾನಪಡಿಸಿದರು.

 

ಈ ಮೊದಲು ಅನುರಾಗ್ ಬಸು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಶೋನಲ್ಲಿ ಶಿಲ್ಪಾ ಅವರ ಗೈರು ಬಹಳ ಬೇಸರ ತಂದಿದೆ. ನಮ್ಮದು ಮೂರು ಜನರ ಸಣ್ಣ ಕುಟುಂಬ(ನಿರ್ಣಾಯಕರದ್ದು). ಅದರಲ್ಲಿ ಒಬ್ಬರು ಗೈರಾದಾಗ ಅವರ ಅನುಪಸ್ಥಿತಿ ಬಹಳ ಕಾಡುತ್ತದೆ ಎಂದಿದ್ದರು. ಇನ್ನು ಈ ಮೊದಲು ಕೂಡಾ ಶಿಲ್ಪಾ ಒಮ್ಮೆ ಸೂಪರ್ ಡಾನ್ಸರ್ 4ರ ಶೋಗೆ ಗೈರಾಗಿದ್ದರು.

 

ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಶೋದಿಂದ ದೂರ ಉಳಿದಿದ್ದರು. ಆ ಸಂದರ್ಭದಲ್ಲಿ ಬಾಲಿವುಡ್​ನ ಖ್ಯಾತ ಡಾನ್ಸರ್ ಮಲೈಕಾ ಅರೋರಾ ಶಿಲ್ಪಾ ಸ್ಥಾನ ತುಂಬಿದ್ದರು. ಆದರೆ ಈ ಬಾರಿ ರಿಯಾಲಿಟಿ ಶೋ ತಂಡ ಶಿಲ್ಪಾ ಅವರನ್ನೇ ನಿರ್ಣಾಯಕಿ ಸ್ಥಾನದಲ್ಲಿ ಮುಂದುವರೆಸಿದ್ದು ಶಿಲ್ಪಾ ಕೂಡಾ ಅದರಲ್ಲಿ ಸಂತಸದಿಂದ ಭಾಗಿಯಾಗಿದ್ದರು. ಸದ್ಯ ಇದೀಗ ಶಿಲ್ಪಾ ಶೆಟ್ಟಿ ಬಗ್ಗೆ ಮಾತನಾಡಲು ಕಾರಣವಿದ್ದು ಅವರು ಒಮ್ಮೆ ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು ಎಂಬುದು ನಿಮಗೆ ಗೊತ್ತೆ?

 

2016 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಡ್ಯಾನ್ಸ್ ಡ್ಯಾನ್ಸ್ ಎಂಬ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮಗದಲಿ ವಿಶೇಷ ಅತಿಥಿಯಾಗಿ ಕುಡ್ಲದ ಕುವರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಭಾಗವಹಿಸಿ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೊಸ ಮೆರಗು ನೀಡಿದ್ದರು.

 

ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕಳೆದ ಸಂಭ್ರಮದ ಕ್ಷಣಗಳು ಇದೀಗ ವೈರಲ್ ಆಗಿದ್ದು ನಟಿ ಶಿಲ್ಪಾ ಶೆಟ್ಟಿ ರಾಣಿಯ ಹಾಗೆ ಪಲ್ಲಕ್ಕಿ ಮುಖಾಂತರ ವೇದಿಕೆಗೆ ಎಂಟ್ರಿಕೊಟ್ಟರು. ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳು ಶಿಲ್ಪಾ ಶೆಟ್ಟಿಗೆ ಪುಷ್ಟ ವೃಷ್ಟಿ ಮಾಡಿದರು.

 

ಇನ್ನು ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಜೊತೆ ಶಿಲ್ಪಾ ಶೆಟ್ಟಿ ಸೂಪರ್ ಸ್ಟೆಪ್ ಹಾಕಿದ್ದು ಸ್ಪರ್ಧಿ ಅಭಿಶೇಕ್ ಬಾಗಿನದ ರೂಪದಲ್ಲಿ ಸೀರೆ ಹಣ್ಣು ತಾಂಬೂಲವನ್ನು ಶಿಲ್ಪಾ ಶೆಟ್ಟಿ ಅವರಿಗೆ ನೀಡಿದರು. ಶ್ರವಂತ್ ಮತ್ತು ಶ್ರಾವ್ಯ ಸಂಪಾದಿಸಿದ ಹಣ ಶಿಲ್ಪಾ ಶೆಟ್ಟಿ ಮುಖಾಂತರ ಎನ್.ಜಿ.ಓಗೆ ನೀಡಲಾಯ್ತು.

 

ಮಂಗಳೂರು ಮಲ್ಲಿಗೆ ಹಾಗೂ ಶಿಲ್ಪಾ ಅವರ ಮಗನ ಭಾವಚಿತ್ರವನ್ನೂ ಉಡುಗೊರೆಯಾಗಿ ಪಡೆದ ಶಿಲ್ಪಾ ಶೆಟ್ಟಿ ಫುಲ್ ಖುಷ್ ಆದರು. ಇನ್ನು ಶಿಲ್ಪಾ ಶೆಟ್ಟಿ ಮತ್ತು ಲಾಸ್ಯ ಡ್ಯಾನ್ಸ್ ಡ್ಯಾನ್ಸ್ ಶೋನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ ಎಲ್ಲರನ್ನ ರಂಜಿಸಿದ್ದರು. ಈ ಎಲ್ಲಾ ಕ್ಷಣಗಳನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.