Majaa Talkies Nivedita Gowda: ಮೊದ ಮೊದಲು ಕನ್ನಡದಲ್ಲಿ ಟಿಕ್ ಟಾಕ್ ವಿಡಿಯೋಗಳ ಮೂಲಕವಾಗಿ ಅತಿ ಹೆಚ್ಚು ಖ್ಯಾತಿ ಹಾಗೂ ಬೆಳಕಿಗೆ ಬಂದ ಪ್ರತಿಭೆ ಎಂದರೆ ನಿವೇದಿತಾ ಗೌಡ ಅವರು. ಹೌದು ಇವರ ಈ ವೀಡಿಯೊಗಳು ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿದ್ದು ಎಂದರೆ ಲಕ್ಷಾಂತರ ಜನ ನಿವೇದಿತಾ ಗೌಡ ಅವರ ಟಿಕ್ ಟಾಕ್ ವಿಡಿಯೋ ಗಳಿಕಗೆ ಅಭಿಮಾನಿಗಳಾಗಿದ್ದರು ಎನ್ನಬಹುದು.
ಇದೇ ಖ್ಯಾತಿಯಿಂದಾಗಿ ಬಿಗ್ ಬಾಸ್ ಮನೆಗೂ ಸಹ ಪ್ರವೇಶಿಸಿದ ನಿವೇದಿತಾ ಗೌಡ ಅವರು ತಮ್ಮ ಮುಗ್ಧ ಮಾತಿನಿಂದ ಜನರಿಗೆ ಬಹಳ ಇಷ್ಟವಾಗಿದ್ದರು.ಹೌದು ಅಲ್ಲದೇ ಅವರನ್ನು ಬೊಂಬೆ ಎಂದೇ ಕರೆಯಲಾಗುತ್ತಿತ್ತು. ಇನ್ನು ಕನ್ನಡದ ರ್ಯಾಪ್ ಮಾಂತ್ರಿಕ ಚಂದನ್ ಶೆಟ್ಟಿ ಅವರನ್ನು ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಆಕ್ಟಿವ್ ಆಗಿರುವ ನಿವೇದಿತಾ ತಮ್ಮ ಪತಿ ಚಂದನ್ ಶೆಟ್ಟಿ ಅವರ ಜೊತೆ ಹಲವಾರು ವಿಡಿಯೋ ಮಾಡಿ ಯುಟ್ಯೂಬ್ ನಲ್ಲಿ ಹಾಕಿದ್ದಾರೆ .
ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿರುವ ವಿಡಿಯೋಗಳು ಬಹಳ ಸ್ಪೆಷಲ್ ಎಫೆಕ್ಟ್ ನೊಂದಿಗೆ ಬಹಳ ಚೆನ್ನಾಗೆ ಮೂಡಿ ಬರುತ್ತಿವೆ ಎನ್ನಬಹುದು.ತಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ಬಾಸ್ ಬೊಂಬೆ ನಿವೇದಿತಾ ಗೌಡ ಮೊದಮೊದಲು ಟಿಕ್ಟಾಕ್ನಲ್ಲಿ ಬಹಳ ಫೇಮಸ್ ಆಗಿದ್ದರು. ಆದರೇ ಸದ್ಯ ಇದೀಗ ಟಿಕ್ಟಾಕ್ ಬ್ಯಾನ್ ಆಗಿದ್ದು ಈಕೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡುತ್ತಿದ್ದಾರೆ.
ಇನ್ನು ಇತ್ತೀಚೆಗೆ ನಿವೇದಿತಾ ಹಾಕಿದ ಕ್ಯೂಟ್ ಡ್ಯಾನ್ಸ್ ವಿಡಿಯೋ ಒಂದು ಬಾರೀ ವೈರಲ್ ಆಗಿದ್ದು ಶ್ಯಾಡೋ ತರ ಇರೋ ತ್ರೀಡಿ ಲೈಟ್ ರೀತಿಯ ಫೀಚರ್ ಬಳಸಿ ವಿಡಿಯೋ ಮಾಡಿದ್ದರು .ಆದರೆ ಈ ವಿಡಿಯೋ ನೋಡಿದ ನೆಟ್ಟಿಗರು ಬಹಳ ವಿಚಿತ್ರವಾಗಿ ಟ್ರೊಲ್ ಮಾಡಿದ್ದಾರೆ. ಸುಮಾರು 2 ವರುಷಗಳಿಂದ ಒಂದಲ್ಲ ಒಂದು ವಿಚಾರಕ್ಕೆ ಚಂದನ್ ಹಾಗೂ ನಿವೇದಿತಾ ಟ್ರೋಲ್ ಆಗುತ್ತಲೇ ಇರುತ್ತಾರೆ.
ಸದ್ಯ ಇದೀಗ ಕೆಲವು ನೆಟ್ಟಿಗರು ಅವರಿಬ್ಬರ ಪರ ನಿಂತಿದ್ದು ಟ್ರೋಲ್ ಮಾಡುವವರಿಗೆ ಇದು ಸರಿಯಲ್ಲ . ನಾವು ಅವರ ಪ್ರತಿಭೆಯನ್ನು ಪ್ರೋತ್ಸಾಹ ಮಾಡ ಬೇಕು . ನಿವೇದಿತಾ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ ಎಂದು ಹೇಳುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲ ತಾಣದಲ್ಲಿ ಫೇಮಸ್ ಆಗಲು ನಿವೇದಿತಾ ಗೌಡ ಅವರು ಬಹಳ ಆಕ್ಟಿವ್ ಆಗಿ ಇರುತ್ತಾರೆ. ಆಗಾಗ ತಮ್ಮ ಪ್ರತಿಭೆ ತೋರಿಸಿಕೊಳ್ಳಲು ಅನೇಕ ಡಾನ್ಸ್ ವಿಡಿಯೋ ಗಳನ್ನೂ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.
ಇತ್ತೀಚೆಗಷ್ಟೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ಚಂದನ್ ಶೆಟ್ಟಿ ಯವರನ್ನು ಮದುವೆಯಾಗುವ ಮುಂಚೆಯದ್ದಾಗಿತ್ತು. ಅಷ್ಟೆ ಅಲ್ಲದೆ ಬಿಗ್ ಬಾಸ್ ಪಾದಾರ್ಪಣೆ ಮಾಡುವ ಮುನ್ನ ಮತ್ತು ಜನಪ್ರಿಯತೆಯನ್ನು ಪಡೆದಿರದ ಸಮಯದ ವಿಡಿಯೋ ಇದಾಗಿದ್ದು ಈ ಅಪರೋಪದ ವಿಡಿಯೋದಲ್ಲಿ ನಿವೇದಿತಾ ಕಾಣಿದು ಕುಪ್ಪಳಿಸಿದ್ದರು.
ಈ ನಡುವೆ ಇದೀಗ ಮತ್ತೆ ಮದುವೆಯ ಮುಂಚೆಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಮಜಾ ಟಾಕೀಸ್ ಗೆ ಹೋಗಿದ್ದ ನಿವೇದಿತಾ ಸೃಜನ್ ಲೋಕೇಶ್ ರ ತಲೆ ಹೇಗೆ ತಿಂದದ್ದರು ಎಂದು ನೋಡಿದರೆ ನಿಮಗೂ ಕೂಡ ನಗು ತಡೆಯಲು ಸಾಧ್ಯವಿಲ್ಲ. ಒಮ್ಮೆ ಲೇಖನಿ ಕೆಳಗಿರುವ ವಿಡಿಯೋ ನೋಡಿ.
ಇನ್ನು ಕನ್ನಡದ ಗೊಂಬೆ ಎಂದು ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ 2022ರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ಈ ಸ್ಪರ್ಧೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನ ಅಭಿಮಾನಿಗಳ ಆಗಾಗ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಅವರು ಸಂತಸದ ಸುದ್ದಿಯೊಂದು ಹಂಚಿಕೊಂಡಿದ್ದಾರೆ. ಅದೇನು ಅಂದ್ರೆ ಈ ಸ್ಪರ್ಧೆಯಲ್ಲಿ ಒಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಿಸೆಸ್ ಇಂಡಿಯಾ ಆಗುವುದು ಸುಲಭದ ಮಾತಲ್ಲ.
ಅದಕ್ಕೆ ಹಲವು ತಯಾರಿಯ ಅಗತ್ಯವಿದೆ. ನಿವೇದಿತಾ ಗೌಡ ಸಹ ಈ ಸ್ಪರ್ಧೆಗೆ ಅಗತ್ಯವಾದ ತಯಾರಿ ಮಾಡಿಕೊಂಡಿದ್ದಾರೆ. ಈಗ ಅದಕ್ಕೆ ಪ್ರತಿಫಲ ಸಿಕ್ಕಿದೆ. ಮಿಸೆಸ್ ಇಂಡಿಯಾ ಇಂಕ್ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಸಂಸ್ಥೆ ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ ಅದನ್ನು ನಿವೇದಿತಾ ಮಾಡಿದ್ದಾರೆ. ಮಿಸೆಸ್ ಇಂಡಿಯಾ ಇಂಕ್ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದುಕೊಂಡಿದೆ.