ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಥೇಟರ್ ನಲ್ಲಿ ಕಾಂತಾರ ನೋಡಿದ ವಿದೇಶಿಗರ ರಿಯಾಕ್ಷನ್…ಚಿಂದಿ ವಿಡಿಯೋ

162,978

ಸದ್ಯ ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಚಿತ್ರ ತಂಡ ಮತ್ತೆ ಪಂಜುರ್ಲಿ ಮೊರೆ ಹೋಗಿದ್ದು ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರರಂಗ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ನೀಡಿದೆ. ಹೌದು ಈ ವೇಳೆ ಕಾಂತಾರಾ ತಂಡ ದೈವ ಅಣ್ಣಪ್ಪ ಪಂಜುರ್ಲಿ ಬಳಿ ಕಾಂತಾರ ಚಿತ್ರ ಭಾಗ ಎರಡಕ್ಕೆ ಅನುಮತಿ ಯನ್ನು ದೈವದ ಬಳಿ ಕೇಳಿದ್ದು ದೈವ ಹಲವು ಸಲಹೆಗಳೊಂದಿಗೆ ಚಿತ್ರ ಚಿತ್ರೀಕರಣಕ್ಕೆ ಅಸ್ತು ಅಂತಾ ಹೇಳಿದೆ.

ಇನ್ನು ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಪ್ರಮುಖ ರ ಮನೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರಾ ಚಿತ್ರತಂಡವೂ ಭಾಗವಹಿಸಿತ್ತು. ಹೌದು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರಾ ಚಿತ್ರತಂಡ ಭಾಗವಹಿಸಿದ್ದು.

 

ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಯವರು ದೈವದ ಬಳಿ ಕಾಂತಾರ ಭಾಗ ಎರಡು ಚಿತ್ರಕ್ಕೆ ಅನುಮತಿ ಕೇಳಲಾಗಿದೆ. ಅಂತೆಯೇ ದೈವವು ಕಾಂತಾರ 2 ಸಿನಿಮಾ ನಿರ್ಮಾಣಕ್ಕೆ ಅನುಮತಿಯನ್ನು ನೀಡಿದೆ. ಅದರೆ ಕೆಲವು ಸಲಹೆಗಳನ್ನು ಎಚ್ಚರಿಕೆಗಳನ್ನು ಕೂಡ ದೈವ ರಿಷಬ್ ಶೆಟ್ಟಿಗೆ ನೀಡಿದೆ ಎನ್ನಲಾಗಿದೆ.

ಹೌದು ಹರಕೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಬಹುತೇಕ ಕಲಾವಿದರು ಭಾಗವಹಿಸಿದ್ದು ಕಾಂತಾರ ಭಾಗ ಎರಡರಲ್ಲೂ ಅದೇ ಕಲಾವಿದರು ಮುಂದುವರಿಯುವ ಸಾಧ್ಯತೆಗಳಿವೆ ಎನ್ನಬಹುದು. ಕಾಂತಾರದಲ್ಲಿ ನಟಿಸಿದ್ದ ಕಲಾವಿದರಿಗೆ ತಲೆಕೂದಲು ಬೆಳೆಸಿಕೊಳ್ಳಲು ರಿಷಬ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದ್ದು ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರ ಭಾಗ ಎರಡು ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಗಳಿವೆ.

 

ಇನ್ನು ಹೊಂಬಾಳೆ ಪ್ರೊಡಕ್ಷನ್‌ನ ವಿಜಯ್ ಕಿರಂಗದೂರು ನಟ ರಿಷಬ್ ಶೆಟ್ಟಿ ನಟಿ ಸಪ್ತಮಿ ಗೌಡ ಪ್ರಮೋದ್ ಶೆಟ್ಟಿ ದೀಪಕ್ ರೈ ಪಾಣಾಜೆ ನವೀಬ್ ಬೋಂದೆಲ್ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ರಿಷಬ್ ಕುಟುಂಬಸ್ಥರು ಕಾಂತಾರ ಚಿತ್ರ ತಂಡದ ಕಲಾವಿದರು ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಭಾಗವಹಿಸಿದ್ದು ಈ ಕೋಲ ಆಚರಣೆ ನಡೆಯುವ ಸಂಧರ್ಭದಲ್ಲಿ ಚಿತ್ರೀಕರಣವನ್ನು ಸಂಪೂರ್ಣ ನಿಷೇಧ ಮಾಡಲಾಗಿತ್ತು. ಹೌದು ಭಕ್ತಾದಿಗಳು ಮೊಬೈಲ್‌ನಲ್ಲಿ ವಿಡಿಯೋ ಫೋಟೋ ತೆಗೆಯಬಾರದೆಂದು ಅಲ್ಲಲ್ಲಿ ಸೂಚನಾ ಫಲಕ ಹಾಕಲಾಗಿತ್ತು.

ಇನ್ನು ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮಾಡುವ ಮುನ್ನವೂ ಅನುಮತಿ ಕೇಳಿದ್ದರು ಎನ್ನಲಾಗಿತ್ತು. ಮಂಜುನಾಥ ಸ್ವಾಮಿ ದೇವಾಲಯದಲ್ಲಿಯೂ ಹರಕೆ ಮಾಡಿಕೊಂಡಿದ್ದರು. ಇನ್ನೂ ಕೆಲವು ದೇವಾಲಯಗಳಿಗೆ ದೈವದ ಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದರು. ಇದರ ಜೊತೆಗೆ ದೈವ ನರ್ತಕರು ಸಮುದಾಯದ ಹಿರಿಕರನ್ನು ಸಂಪರ್ಕಿಸಿ ಅವರಿಂದಲೂ ಅನುಮತಿ ಸಲಹೆಗಳನ್ನು ಪಡೆದು ಸ್ವತಃ ಅವರ ಸಮ್ಮುಖದಲ್ಲಿಯೇ ದೈವದ ದೃಶ್ಯಗಳನ್ನು ಅವರ ಮುಂದಾಳತ್ವದಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು.

 

ಸದ್ಯ ಇದೀಗ ದೈವವು ಎರಡನೇ ಭಾಗದ ಚಿತ್ರೀಕರಣಕ್ಕೆ ಅನುಮತಿ ನೀಡಿ ಆಶೀರ್ವಾದ ಮಾಡಿದ್ದು ಸಿನಿಮಾವನ್ನು ಶೀಘ್ರವೇ ರಿಷಬ್ ಶುರು ಮಾಡಲಿದ್ದಾರೆ. ಈ ನಡುವೆ ಒಂದು ಅದ್ಬುತವಾದ ವಿಡಿಯೋ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾವನ್ನು ಸಿನಿ ಪ್ರೇಕ್ಷಕರು ಹೇಗೆ ಬಾಚಿ ತಬ್ಬಿಕೊಂಡರು ತಮಗೆ ತಿಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಕಾಂತಾರ ಸಿನಿಮಾ ಮೊದಲ ಬಾರಿಗೆ ನೋಡಿದ ಜನ ಚಿತ್ರಮಂದಿರದಲ್ಲಿ ಹೇಗೆ ಕುಣಿದು ಕುಪ್ಪಳಿಸಿದ್ದಾರೆ ನೀವೆ ನೋಡಿ.