ವಾರ್ತಾ ಮಂಜರಿ
Trending Stories, Viral News, Gossips & Everything in Kannada

18 ವರ್ಷ ಇದ್ದಾಗ ರಚಿತಾರಾಮ್ ಹೇಗೆ ಮಾತಾಡಿದ್ರು ನೋಡಿ…ಚಿಂದಿ ವಿಡಿಯೋ

2,709

Kannada Actress Rachita Ram Emotional Speech: ಸದ್ಯ ಸ್ಯಾಂಡಲ್​ವುಡ್​ನಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡವರು ರಚಿತಾ ರಾಮ್​. ಹೌದು ದರ್ಶನ್​ ಪುನೀತ್​ ರಾಜ್​ಕುಮಾರ್​ ಸೇರಿ ಸಾಕಷ್ಟು ಹೀರೋಗಳ ಜೊತೆ ರಚಿತಾ ರಾಮ್ ರವರು ತೆರೆ ಹಂಚಿಕೊಂಡಿದ್ದು
2013ರಲ್ಲಿ ಕಿರುತೆರೆಯಲ್ಲಿ ಮಿಂಚಿದ್ದ ಈ ಗುಳಿಕೆನ್ನೆ ಸುಂದರಿ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ ಬುಲ್​ಬುಲ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ.

ಇನ್ನು ಮೊದಲ ಚಿತ್ರದಲ್ಲಿಯೇ ಎಲ್ಲರ ಮನಗೆದ್ದ ರಚಿತಾ ರಾಮ್ ಸ್ಟಾರ್ ನಟಿಯ ಪಟ್ಟ ಗಿಟ್ಟಿಸಿಕೊಂಡವರಾಗಿದ್ದು ತದ ನಂತರ ಸುದಿಪ್ ಜೊತೆ ರನ್ನ ಗಣೇಶ್ ಜೊತೆ ದಿಲ್​ ರಂಗೀಲಾ ಹಾಗೂ ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಚಿತ್ರಗಳಲ್ಲಿ ನಟಿಸುವ ಮೂಲಕವಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಇನ್ನು ಕಿರುತೆರೆಯಲ್ಲಿ ರಚಿತಾರ ಹೆಸರು ಬಿಂದಿಯಾ ರಾಮ್‌ ಎಂದೇ ಬಳಕೆಯಲ್ಲಿತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ ಹಳೆಯ ನಟಿ ಬಿಂದಿಯಾ ಹೆಸರು ಮೊದಲೇ ಪ್ರಸಿದ್ದವಾಗಿದ್ದ ಕಾರಣ ಹಾಗಾಗೀ ಮೊದಲ ಚಿತ್ರದಲ್ಲಿಯೇ ತಮ್ಮ ಹೆಸರನ್ನು ರಚಿತಾ ರಾಮ್ ಎಂದು ಬದಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ರಚಿತಾ ಅವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು.

ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದರಾಗಿದ್ದು ರಚಿತಾ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್‌ಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಸಧ್ಯ ರಚಿತಾ ರಾಮ್ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದು ಒಂದರ ನಂತರ ಒಂದು ಚಿತ್ರದ ಶೂಟಿಂಗ್​ನಲ್ಲಿ ಬ್ಯೂಸಿಯಾಗಿರುವುದು ಬಹಳ ವಿಶೇಷವಾಗಿದೆ.

ಲವ್ ಮಿ ಆರ್ ಹೇಟ್​ ಮಿ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು ವಿತರಕರಾಗಿಯೂ ಕೂಡ ಹೆಸರುವಾಸಿಯಾಗಿರುವ ದೀಪಕ್ ಗಂಗಾಧರ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.
ಕಳೆದ ವರುಷ ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತ್ತು. ಸಾಹಸ ದೃಶ್ಯದ ಶೂಟಿಂಗ್​ ಮಾಡುವಾಗ ಕ್ರೇನ್​ನಲ್ಲಿ ಮೇಲೆ ಲಿಫ್ಟ್ ಮಾಡುವಾಗ ವಿದ್ಯುತ್ ತಂತಿ ತಗುಲಿ ವಿವೇಕ್ ಎನ್ನುವವರು ಅಗಲಿದ್ದರು.

ಸಿನಿಮಾದಲ್ಲಿ ಬ್ಯುಸಿಯಾಗಿರಯವ ರಚಿತಾ ಕಿರುತೆರೆ ಶೋ ಒಂದರ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.ತಮ್ಮ ಅದ್ಭುತ ಚಿತ್ರಗಳ ಮೂಲಕ ಜನರ ಮನದಲ್ಲಿ ಸ್ಥಾನಗಿಟ್ಟಿಸಿಗೊಂಡಿರುವ ಗುಳಿ ಕೆನ್ನೆ ಸುಂದರಿ ಮಾನ್ಸೂನ್ ರಾಗ ಸಿನಿಮಾ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡರು.
ಇನ್ನು ಸೈಮಾ ಅವಾರ್ಡ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ರಚಿತಾ ರನ್ನ ಚಿತ್ರಕ್ಕಾಗಿ ಪ್ರಶ್ನಸ್ತಿ ಪಡೆದುಕೊಂಡಿದ್ದು ಈ ವೇಳೆ ಎಷ್ಟು ಭಾವುಕರಾಗಿದ್ದರು ನೀವೆ ನೋಡಿ.