ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲ ಬಾರಿ ಡ್ಯಾನ್ಸ್ ಮಾಡಿದ ಸುಧಾ ಮೂರ್ತಿ ಅಮ್ಮ…ಚಿಂದಿ ವಿಡಿಯೋ

1,998

Barso Re Megha Megha” | Sudha Murty Dancing Her Heart Out With Shreya Ghoshal Is Winning Internet: ಸದ್ಯ ಇತ್ತೀಚೆಗೆ ಇನ್ಫೋಸಿಸ್‌ನ ಸಂಸ್ಥೆಯ 40ನೇ ವರ್ಷದ ಸಂಭ್ರಮಾಚರಣೆ ನಡೆದಿದ್ದು ಈ ಸಂದರ್ಭದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಶ್ರೇಯಾ ಘೋಷಾಲ್ ರವರ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಹೌದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಂಗಳೂರಿನಲ್ಲಿ ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ 40 ನೇ ವರ್ಷದ ಸಂಭ್ರಮಾಚರಣೆ ನಡೆದಿತ್ತು.

 

ಇನ್ನು ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉದ್ಯೋಗಿಗಳು ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದು ಇದೇ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ರವರ ಹಾಡಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಬಹಳ ಉತ್ಸಾಹದಿಂದ ಹೆಜ್ಜೆ ಹಾಕಿದರು.

 

ಹೌದು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಇನ್ಫೋಸಿಸ್‌ನ ಮುಖ್ಯ ಕಚೇರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸುಧಾಮೂರ್ತಿ ಪತಿ ನಾರಾಯಣ ಮೂರ್ತಿ ಹಾಗೂ ಇತರ ಆರು ಜನ ಸೇರಿ ಸ್ಥಾಪಿಸಿದ ಐಟಿ ದೈತ್ಯ ಇನ್ಫೋಸಿಸ್‌ಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಇನ್ನು ಗಾಯಕಿ ಶ್ರೇಯಾ ಘೋಷಲ್ ರವರ ಫ್ಯಾನ್ ಪೇಜ್‌ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಬ್ಬರು ಸಾಧಕರು ಒಂದೇ ಕಡೆ ಬರ್ಸೊರೆ ಮೆಗಾ ಹಾಡಿಗೆ ಸುಧಾಮೂರ್ತಿ ಶ್ರೇಯಾ ಘೋಷಾಲ್ ಮತ್ತು ಇತರರೊಂದಿಗೆ ಸೇರಿಕೊಂಡು ಮನದುಂಬಿ ಹಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

ಇನ್ನು ವಿಡಿಯೋದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಗೂ ಇನ್ನು ಕೆಲವರು ಜೊತೆಯಾಗಿ ಮಣಿರತ್ನಂ ನಿರ್ದೇಶನದ ಗುರು ಸಿನಿಮಾದ ಜನಪ್ರಿಯ ಗೀತೆ ಬರಸೊರೆ ಮೇಘ ಬರಸೊ ಹಾಡನ್ನು ಹಾಡುತ್ತಿದ್ದರೆ ಸುಧಾಮೂರ್ತಿ ಅಮ್ಮನವರು ಬಹಳ ಉತ್ಸಾಹದಿಂದ ಈ ಹಾಡಿಗೆ ಕಾಲು ಕುಣಿಸುತ್ತಾರೆ. 51 ಸೆಕೆಂಡ್‌ಗಳ ಈ ವಿಡಿಯೋ ಸದ್ಯ ಟ್ವಿಟ್ಟರ್‌ನಲ್ಲಿ ಪೋಸ್ಟ್ ಆದ ಸ್ವಲ್ಪ ಹೊತ್ತಿನಲ್ಲೇ ಸಾವಿರಾರು ಜನ ವೀಕ್ಷಿಸಿದ್ದಾರೆ.

ಇನ್ನು ಇನ್‌ಫೋಸಿಸ್ ತಳಮಟ್ಟದಿಂದ ಬೆಳೆದು ಬಂದು ಇಂದು ಬೃಹದಾಕಾರವಾಗಿ ಬೆಳೆದು ನಿಂತ ಐಟಿ ಸಂಸ್ಥೆಯಾಗಿದ್ದು 1981ರಲ್ಲಿ ನಾರಾಯಣ ಮೂರ್ತಿಯವರು ತಮ್ಮ ಪತ್ನಿ ಶ್ರೀಮತಿ ಸುಧಾಮೂರ್ತಿಯವರಿಂದ ಸುಮಾರು 10 ಸಾವಿರ ರೂಪಾಯಿ ಬಂಡವಾಳ ಸಾಲ ಪಡೆದು ಒಂದು ಬೆಡ್ ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು.

 

ಸದ್ಯ ಈಗ ಈ ಸಂಸ್ಥೆ 17 ಶತಕೋಟಿ ಡಾಲರ್ ಮೊತ್ತದ ಆದಾಯದೊಂದಿಗೆ 78 ಶತಕೋಟಿ ಡಾಲರ್ ವ್ಯವಹಾರವನ್ನು ನಡೆಸುತ್ತಿರುವುದು ವಿಶೇಷ. ಕಳೆದ ವರ್ಷವಷ್ಟೇ ಇನ್ಫೋಸಿಸ್ ಮಾರುಕಟ್ಟೆ ಬಂಡವಾಳದಲ್ಲಿ 100 ಬಿಲಿಯನ್ ಡಾಲರ್ ವ್ಯವಹಾರ ತಲುಪಿದ ನಾಲ್ಕನೇ ಭಾರತೀಯ ಕಂಪನಿಯಾಗಿರುವುದು ಮತ್ತೊಂದು ವಿಶೇಷ.

ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ಯವರು ತಮ್ಮ ದೀರ್ಘ ಕಾಲದ ಚಿಂತನೆಯಾಗಿದ್ದ ಸಂಸ್ಥೆಯ ಸ್ಥಾಪಕರುಗಳ ಮಕ್ಕಳು ಮುಂದಿನ ತಲೆಮಾರು ಯಾವುದೇ
ಕಾರಣಕ್ಕೂ ಸಂಸ್ಥೆಯ ವ್ಯವಹಾರದಲ್ಲಿ ಭಾಗಿಯಾಗುವಂತಿಲ್ಲ ಎಂಬ ತಮ್ಮ ದೀರ್ಘಕಾಲದ ಚಿಂತನೆಯ ಬಗ್ಗೆ ಬೇಸರವಿದೆ ಎಂದು ತಿಳಿಸಿದ್ದರು.

 

ಇನ್ಫೋಸಿಸ್ ವೃತ್ತಪರತೆಯ ಮೇಲೆ ನಡೆಯುವ ಸಂಸ್ಥೆಯಾಗಿದ್ದು ಸಂಸ್ಥೆಯ ಪ್ರವರ್ತಕರ ಸಂಸ್ಥಾಪಕರ ಮಕ್ಕಳನ್ನು ಸಂಸ್ಥೆಯ ಯಾವುದೇ ನಿರ್ವಹಣಾ ಹುದ್ದೆಗಳಿಂದ ದೂರ ಇಡಬೇಕು ಎಂದು ಮೂರ್ತಿ ನಂಬಿದ್ದು ನನ್ನ ಈ ನಿರ್ಧಾರ ಸಂಪೂರ್ಣ ತಪ್ಪಾಗಿತ್ತು.

 

ಈ ನಂಬಿಕೆಯಿಂದಾಗಿ ಈ ಸಂಸ್ಥೆಯನ್ನು ನಾನು ಕಾನೂನುಬದ್ಧ ಪ್ರತಿಭೆಗಳಿಗೆ ಅವಕಾಶ ನೀಡದೇ ವಂಚಿಸುತ್ತಿದೆ. ಹೌದು ಹೀಗಾಗಿ ನಾನು ಈ ನನ್ನ ಈ ನಂಬಿಕೆ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದು ಅವನು ಅಥವಾ ಅವಳು ಯಾರೇ ಆಗಿರಬಹುದು ಹುದ್ದೆಯೊಂದಕ್ಕೆ ಸಮರ್ಥರು ಎನಿಸಿದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು ಎಂದು ನಾರಾಯಣ ಮೂರ್ತಿ ಹೆಳಿದ್ದರು.