ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಎಷ್ಟು ಬಲಿಷ್ಠವಾಗಿ ಬಿಟ್ಟಿದೆ ಎಂದರೆ ಹಲವಾರು ಅನೇಕ ಯುವಕ ಯುವತಿಯರು ರಾತ್ರೋರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಹೌದು ಅದರಲ್ಲೂ ಕೆಲವರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ತಾವು ಕೂಡ ಒಳ್ಳೆಯ ಕಲಾವಿದರು ಎಂದು ಸಾಬೀತು ಪಡಿಸಿದರೆ ಕೆಲವು ಯುವತಿಯರು ಮಾತ್ರ ನೇಮ್ ಹಾಗೂ ಫೇಮ್ ಗಾಗಿ ಅರೆಬರೆ ಬಟ್ಟೆಗಳನ್ನು ಧರಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ತುತ್ತಾಗಿದ್ದಾರೆ.
ಇನ್ನು ಈ ಸಾಮಾಜಿಕ ಜಾಲತಾಣಗಳಿಂದ ಅದೆಷ್ಟೋ ಯುವ ಪ್ರತಿಭೆಗಳಿಗೆ ಸಿಕ್ಕಾಪಟ್ಟೆ ಉಪಯೋಗವಾಗಿದೆ ಎಂದೇ ಹೇಳಬಹುದು. ಹೌದು ಹಿಂದೆಲ್ಲಾ ವರುಷಾನುವರುಷ ತಾವು ನಟರಾಗಬೇಕು ಎಂದು ಗಾಂಧಿನಗರದಲ್ಲಿ ಅಲೆದು ಸುಸ್ತಾಗಿ ಕಡೆಗೆ ತಾವು ಇಷ್ಟಪಟ್ಟ ವೃತ್ತಿಯು ಸಿಗದೆ ಬದುಕಲು ದಾರಿಯೂ ಇಲ್ಲದೆ ಹಿಂದಿರುಗುತ್ತಿದ್ದರು. ಆದರೆ ಅದೆಷ್ಟೋ ಜನ ಇಷ್ಟು ವರುಷಗಳ ಕಾಲ ಸಮಯ ವ್ಯರ್ಥ ಮಾಡಿ ಕೊಂಡು ಹಿಂತಿರುಗಿ ಊರಿಗೆ ಹೋಗಲಾಗದೆ ತಮ್ಮ ಜೀವನವನ್ನೇ ಸಹ ಕಳೆದುಕೊಂಡಿದ್ದರೆ.
ಆದರೆ ಇದೀಗ ಕಾಲ ಬದಲಾಗಿದ್ದು ಜನರಿಗೆ ಎಲ್ಲವೂ ಕೂಡ ಬೆರಳ ತುದಿಯಲ್ಲಿಯೇ ಸಿಗುತ್ತದೆ. ಕೆಲವು ಯುವಕರಂತೂ ಈ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಜೀವನವನ್ನೇ ರೂಪಿಸಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡುವ ಲಿಪ್ ಸಿಂಕ್ ವೀಡಿಯೊಗಳು ನೃತ್ಯಗಳು ಹಾಗೂ ಕಾಮಿಡಿ ವಿಡಿಯೋಗಳು ಎಲ್ಲವೂ ಸಹ ಪ್ರೇಕ್ಷಕರ ಮನ ಸೆಳೆಯುತ್ತಿದ್ದು ಇವರನ್ನು ಕೂಡ ಸ್ಟಾರ್ ನಟರಂತೆ ನೋಡುತ್ತಿದ್ದಾರೆ. ಇದೀಗ ಸಹಲ ಟೀಚರ್ ಮಾಡಿರುವ ಡಾನ್ಸ್ ನೋಡಿ .