ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪತ್ರಕರ್ತ ಸೋಮಣ್ಣ ಮಾಚಿಮಾಡ ಜೊತೆ ಸಪ್ತಮಿ ಗೌಡ ಚಿಂದಿ ಡ್ಯಾನ್ಸ್…ವಿಡಿಯೋ

114

Somanna machimada with Sapthami Gowda: ಸದ್ಯ ಭಾರತೀಯ ಚಿತ್ರರಂಗದಲ್ಲೀಗ Kantara ಚಿತ್ರದ್ದೇ ಚರ್ಚೆ ಜೋರಾಗಿದೆ ಎನ್ನಬಹುದು. ಹೌದು ಪರಭಾಷಿಕರು ಕೂಡ Rishab Shettyಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದು  ೫೦ ದಿನಗಳ ಹಿಂದೆ ಬಿಡುಗಡೆಯಾದ Kantara ಬೇರೆಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಭರ್ಜರಿ ಆಗಿ ಓಡುತ್ತಿದೆ.

ಇನ್ನು ಎಲ್ಲಾ ವಿಭಾಗದಲ್ಲೂ ಸಿನಿಮಾ ಸೂಪರ್ ಎನಿಸಿಕೊಂಡಿದ್ದು ನಟನೆಯಲ್ಲಿ Rishab Shetty ಅಬ್ಬರಿಸಿದ್ದಾರೆ. ಇನ್ನು  ನಾಯಕಿ ಸಪ್ತಮಿಗೌಡ ನೋಡಿಗರ ಗಮನ ಸೆಳೆದಿದ್ದು ನಿರ್ದೇಶಕ ನಟ Rishab Shetty ತಮ್ಮ ಕಥೆಗೆ ಒಪ್ಪುವಂತಹ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ. ಇನ್ನು ಕಿಶೋರ್ ಅಚ್ಯುತ್‌ಕುಮಾರ್ ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದು ಚಿತ್ರದ ಹಿರೋಯಿನ್ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅಭಿನಯವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ ಎನ್ನಬಹುದು.

 

ಇನ್ನು ಆಡಿಷನ್ ಮಾಡಿ Rishab Shetty ಈ ಪಾತ್ರಕ್ಕೆ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡಿದ್ದು ಸಿಕ್ಕ ಅವಕಾಶವನ್ನು ಆಕೆ ಉತ್ತಮವಾಗಿ ಬಳಸಿಕೊಂಡಿದ್ದು ಶಿವನಿಗೆ ತಕ್ಕ ಲೀಲಾ ಆಗಿ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ. ಹೌದು  ಫಾರೆಸ್ಟ್ ಗಾರ್ಡ್ ಪಾತ್ರ ಕಾಣಿಸಿಕೊಳ್ಳುವ ಲೀಲಾ ಪಾತ್ರ ಅತ್ಯುತ್ತಮವಾಗಿದ್ದು  ಲಾಕ್‌ಡೌನ್ ಆಗದೇ ಹೋಗಿದ್ದರೆ ಸಪ್ತಮಿ ಗೌಡ ರವರು ಈಗ ಅಮೆರಿಕಾದಲ್ಲಿ ಇರುತ್ತಿದ್ದರು. ಹೌದು Kantara ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ.  ಈ ವಿಚಾರವನ್ನು ಖುದ್ದು ಸಪ್ತಮಿ ಗೌಡ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಹೇಳಿದ್ದಾರೆ.

ಹೌದು Kantara ಚಿತ್ರಕ್ಕೆ ಮಗಳು ಸಪ್ತಮಿ ಗೌಡ ಆಯ್ಕೆ ಆಗಿದ್ದು ಹೇಗೆ ಎನ್ನುವುದನ್ನು ಎಸ್.ಕೆ ಉಮೇಶ್ ಹೇಳಿದ್ದು ಈ ವಿಷಯದ ಬಗ್ಗೆ ನನಗೇನು ಗೊತ್ತಿರಲಿಲ್ಲ. ಚಿತ್ರತಂಡದವರೇ ಕರೆಸಿ ಮಾತನಾಡಿಸಿದ್ದಾರೆ. ನಂತರ ನನ್ನ ಪತ್ನಿ ಹೇಳಿದ್ಲು ಈ ರೀತಿ ಕರಿತ್ತಿದ್ದಾರೆ ರಾಜರಾಜೇಶ್ವರಿ ನಗರದಲ್ಲಿ ಆಫೀಸ್‌ ಎಂದರು. ಹೋಗಿ ಬರೋಕೆ ಹೇಳಿದೆ. ಲುಕ್ ಟೆಸ್ಟ್ ಎಲ್ಲಾ ಆಗಿದ್ದು ನಂತರ ಒಂದು ದಿನ ಕುಂದಾಪುರದಲ್ಲಿ ಮುಹೂರ್ತ ಮಾಡಿದ್ದರು. ಅಂದು ಚಿತ್ರದ ನಾಯಕಿ ಸಪ್ತಮಿ ಗೌಡ ಎಂದು ಘೋಷಿಸಿದರು.

 

ಫಾರೆಸ್ಟ್ ಗಾರ್ಡ್ ಪಾತ್ರ ಮಾಡುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ತಯಾರಿ ಬೇಕು. ನಾವು ಹಳ್ಳಿಯಿಂದ ಬಂದವರು ನಮಗೆ ಗೊತ್ತಾಗುತ್ತದೆ. ಇನ್ನು ಆಕೆ ಇಲ್ಲೇ ಹುಟ್ಟಿ ಬೆಳೆದವಳು. ಅಲ್ಲಿನ ಶೈಲಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಅಲ್ಲಿನ ಭಾಷೆಯನ್ನು ಕಲಿಯಬೇಕು. ಆ ಬಾಡಿ ಲಾಂಗ್ವೇಜ್ ಬೇಕು, ಇದೆಲ್ಲ ಕಷ್ಟದ ಕೆಲಸವಾಗಿದ್ದು ಅದನ್ನೆಲ್ಲಾ ತಿಳಿದುಕೊಂಡಳು. ನಟಿಸುತ್ತಾ ನಟಿಸುತ್ತಾ ಕಲಿತುಕೊಂಡಿದ್ದಾಳೆ. ನಾನು ಆಗಾಗ್ಗೆ Rishab Shettyಅವರನ್ನು ಕೇಳುತ್ತಿದ್ದೆ. ಚೆನ್ನಾಗಿ ಮಾಡುತ್ತಿದ್ದಾರೆ. ಆಕೆಗೆ ಹೇಳಬೇಡಿ ಎಂದು Rishab Shettyಹೇಳಿದ್ದರು.

ಪಾಪ್‌ಕಾರ್ನ್‌ ಮಂಕಿಟೈಗರ್ ಸಿನಿಮಾ ಶೂಟಿಂಗ್ ನಂತರ ಕೆಲಸಕ್ಕೆ ಹೋಗುತ್ತಿದ್ದಳು. 6 ತಿಂಗಳ ಬಳಿಕ ಪಪ್ಪಾ ಒಂದೇ ಕಡೆ ಕೂತು ಕೆಲಸ ಮಾಡುವುದು ಕಷ್ಟ ಎಂಎಸ್‌ ಮಾಡ್ತೀನಿ ಎಂದಳು. ಅಮೆರಿಕಾಗೆ ಹೋಗಿ ಎಂಎಸ್ ಮಾಡೋಕೆ ಪರೀಕ್ಷೆ ಬರೆದು ಒಳ್ಳೆ ಅಂಕ ಕೂಡ ಬಂದಿದ್ದು ವೀಸಾ ಎಲ್ಲಾ ಸಿಕ್ಕಿತ್ತು. ಅದೇ ಸಮಯದಲ್ಲಿ ಕೊರೊನಾ ಹಾವಳಿ ಶುರುವಾಗಿ ಲಾಕ್‌ಡೌನ್ ಘೋಷಣೆ ಆಯಿತು.

ಇಲ್ಲದೇ ಹೋಗಿದ್ದರೆ ಆಕೆ ಅಮೆರಿಕಾಗೆ ಹೋಗಿಬಿಡುತ್ತಿದ್ದಳು. ಇಂತಹ ಸಮಯದಲ್ಲಿ ಸಾಕಷ್ಟು ಕಥೆಗಳು ಬರ್ತಿತ್ತು. ಯಾವುದು ಇಷ್ಟವಾಗಲಿಲ್ಲ. ಮೊದಲ ಚಿತ್ರಕ್ಕೆ ಸೈಮಾ ಬೆಸ್ಟ್ ಡೆಬ್ಯು ಅವಾರ್ಡ್ ಕೂಡ ಬಂದಿತ್ತು. ನಂತರ Kantara ಚಿತ್ರದ ಆಡಿಷನ್‌ ನಡೆದು ಲೀಲಾ ಪಾತ್ರದ ಅವಕಾಶ ಸಿಕ್ತು ಎಂದು ಎಸ್.ಕೆ ಉಮೇಶ್ ಹೇಳಿದ್ದಾರೆ. ಸದ್ಯ ಸಪ್ತಮಿ ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಸ್ಟಾರ್ ಆಗಿದ್ದು ಇದೀಗ ಸುದ್ದಿವಾಹಿನಿಯ ವರದಿಗಾರ ಸೋಮಣ್ಣ ರವರ ಜೊತೆ ರೀಲ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನ ಲೇಖನಿಯ ಕೆಳಗೆ ನೋಡಬಹುದು.