ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಮದುವೆ ಬಗ್ಗೆ ಕಾಮಿಡಿ ಮಾಡಿದ ಬಿ ಸರೋಜಾ ದೇವಿ…ಕ್ಯೂಟ್ ವಿಡಿಯೋ ನೋಡಿ

33

ಬಿ.ಸರೋಜದೇವಿ ಯವರು ಭಾರತೀಯ ಚಿತ್ರರಂಗ ಕಂಡ ಧೀಮಂತ ನಾಯಕಿ ಯಾಗಿದ್ದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪಾತ್ರಗಳನ್ನು ನಿರ್ವಹಿಸಿ ಆರು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿ ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದಾರೆ.

ಹೌದು ಕನ್ನಡ  ಸೇರಿದಂತೆ ತಮಿಳು ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಪಾತ್ರಗಳು ಜನರ ಮನಸ್ಸಿನಲ್ಲಿ  ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ಸರೋಜಾದೇವಿ ಅವರ ಹುಟ್ಟು ಹೆಸರು ರಾಧಾ ದೇವಿ  ಭೈರಪ್ಪ ಮತ್ತು ರುದ್ರಮ್ಮ ದಂಪತಿಯ ಕುಟುಂಬದಲ್ಲಿ ನಾಲ್ಕನೇ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದ ಅವರನ್ನು ಅಜ್ಜ ಮಾಯಣ್ಣ ಗೌಡ ದತ್ತು ತೆಗೆದುಕೊಳ್ಳಬೇಕೆಂದು ಬಯಸಿದ್ದರಂತೆ. ಆದರೆ ಇದಕ್ಕೆ ಅವರ ತಂದೆ ನಿರಾಕರಿಸಿದ್ದರು.

ನೃತ್ಯವನ್ನು ಕಲಿಯಬೇಕು ಎಂಬ ಮಹದಾಸೆ ಹೊಂದಿದ್ದ ಸರೋಜಾದೇವಿ ಅಮ್ಮನವರು ತನ್ನ ತಂದೆಯ ಬಳಿ ಕೇಳಿಕೊಂಡಿದ್ದರು. ಅಂತೆಯೆ ತಂದೆ ಭೈರಪ್ಪ ಮಗಳ ಆಸೆಯಂತೆ ನೃತ್ಯ ಮತ್ತು    ನಟನೆಯನ್ನು ವೃತ್ತಿ ಜೀವನ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು. ಆರ್.ಕೃಷ್ಣಮೂರ್ತಿ ಅವರು ತಮ್ಮ 13 ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ ಅವರನ್ನು ಮೊದಲು ಗುರುತಿಸಲಾಯಿತು. ಆದರೆ ಅವರು ಚಲನಚಿತ್ರ ಪ್ರಸ್ತಾಪವನ್ನು ನಿರಾಕರಿಸಿದರು.

 

ತನ್ನ 17 ನೇ ವಯಸ್ಸಿನಲ್ಲಿ ಸರೋಜಾ ದೇವಿ ಅಮ್ಮನವರುಹೊನ್ನಪ್ಪ ಭಗವತಾರ್ ಅವರ ಕನ್ನಡ ಚಿತ್ರ ಮಹಾಕವಿ ಕಾಳಿದಾಸ (1955) ಚಿತ್ರದ ಮೂಲಕ ಪೋಷಕ ಪಾತ್ರದಲ್ಲಿ ಅಭಿನಯಿಸಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವು ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮುಂದೆ ಅವರು ಬಿ.ಆರ್.ಪಂಥುಲು ಅವರ ತಮಿಳು ಚಿತ್ರ ತಂಗಮಲೈ ರಾಗಸಿಯಂ (1957) ನಲ್ಲಿ ನಟಿಸಿದರು. ಇದರಲ್ಲಿ ಅವರು ನೃತ್ಯ ಸರಣಿಯನ್ನು ಪ್ರದರ್ಶಿಸಿದರು.

ತಾನೂ ಚೆನ್ನಾಗಿ ಓದಿ ಶಿಕ್ಷಕಿ ಆಗಬೇಕು ಅಂತ ಕನಸು ಕಂಡಿದ್ದ ಬಿ.ಸರೋಜಾದೇವಿ ಅಮ್ಮನವರು ಅಭಿನಯ ಸರಸ್ವತಿ ಆಗ್ತೀನಿ ಅಂತ ಎಂದೂ ಅಂದುಕೊಂಡಿರಲಿಲ್ಲವಂತೆ. ಇದೊಂದೇ ಸಿನಿಮಾ ಆಮೇಲೆ ನಟಿಸುವುದು ಬೇಡ. ಓದೋಣ ಅಂತ ಒಂದೊಂದೇ ಸಿನಿಮಾ ಮಾಡುತ್ತಾ ಬಂದ ಬಿ.ಸರೋಜಾದೇವಿ ನೋಡ ನೋಡುತ್ತಲೇ ದಕ್ಷಿಣ ಭಾರತದ ಯಶಸ್ವಿ ನಟಿಯಾಗಿ ಸೂಪರ್ ಸ್ಟಾರ್ ಆಗಿಬಿಡುತ್ತಾರೆ.

ಹೌದು ಕನ್ನಡದಲ್ಲಿ  ಉದಯ್ ಕುಮಾರ್ ಕಲ್ಯಾಣ್ ಕುಮಾರ್ ವರನಟ ಡಾ. ರಾಜ್ಕುಮಾರ್ ಅವರಿಗೆ ನಾಯಕಿಯಾದರೆ ತೆಲುಗಿನಲ್ಲಿ ಎನ್.ಟಿ.ಆರ್ ತಮಿಳುನಾಡಿನಲ್ಲಿ ಎಂ.ಜಿ.ಆರ್ ಎಲ್ಲರಿಗೂ ನಾಯಕಿ ಆಗಿ ಚಿತ್ರರಂಗದಲ್ಲಿ ಮೆರೆದು ಸಾಲು ಸಾಲು ಪ್ರಶಸ್ತಿಗಳನ್ನ ಪಡೆದು ಡಾಕ್ಟರ್ ಸರೋಜಾ ದೇವಿ ಆಗುತ್ತಾರೆ.

 

ಇನ್ನು ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ನಿರ್ದೇಶಕ ದೊರೆ ಭಗವಾನ್​ ಅವರಿಗೆ ಮೊದಲಿನಿಂದಲೂ ಹೆಚ್ಚು ಒಡನಾಟ ಇದೆ. ಪುನೀತ್​ ರಾಜ್​ಕುಮಾರ್ ಅವರನ್ನು ಮಗು ಆಗಿದ್ದಾಗಿನಿಂದಲೂ ಕಂಡವರು ಭಗವಾನ್​. ಪುನೀತ್​ ನಟಿಸಿದ ಯಾರಿವನು ಸಿನಿಮಾಗೆ ಭಗವಾನ್​  ನಿರ್ದೇಶನ ಮಾಡಿದ್ದು ಆ ಕುರಿತು ಅವರೀಗ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಆ ಚಿತ್ರದಲ್ಲಿ ಪುನೀತ್​ ತುಂಬ ಚೆನ್ನಾಗಿ ನಟಿಸಿದ್ದ. ಶ್ರೀನಾಥ್​ ಜೊತೆ ಇರುವಾಗ ಶ್ರೀನಾಥ್​ ಮಗನಂತೆ ರಾಜ್​ಕುಮಾರ್​ ಜೊತೆ ಇರುವಾಗ ರಾಜ್​ಕುಮಾರ್​ ಮಗನಂತೆ ಅಭಿನಯಿಸಿದ್ದ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಈ ರೀತಿ ಯಾವುದೇ ಕಲಾವಿದ ನಟಿಸಿದಾಗ ಎಷ್ಟು ಖುಷಿ ಆಗುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಆ ಸಿನಿಮಾದ ಒಂದು ದೃಶ್ಯದಲ್ಲಿ ಪುನೀತ್​ ನಟಿಸಿದ್ದನ್ನು ನೋಡಿ ಖುಷಿಯಾದ ಬಿ. ಸರೋಜಾದೇವಿ  ಅವರು ಈ ಮಗು ನನ್ನ ಮಗವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಂತ ಹೇಳಿದ್ದರು.

ಆಕೆ ಏಳು ಭಾಷೆಯ ತಾರೆ. ಅಂಥವರ ಜೊತೆ ಅಪ್ಪು ನಟಿಸಿದ್ದ ಎಂದು ಆ ದಿನಗಳನ್ನು ಭಗವಾನ್​ ಮೆಲುಕು ಹಾಕಿದ್ದರು. ಹೌದು ಅಪ್ಪು ಅವರನ್ನು ಸರೋಜಾದೇವಿ ಅಮ್ಮನವರು ಮಗನಂತೆ ನೋಡುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಕಾರ್ಯಕ್ರಮವೊಂದರಲ್ಲಿ ಅಪ್ಪು ಅವರ ಕೆನ್ನೆಗಿಂಟಿ ಹೇಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ ಸರೋಜಾದೇವಿಯವರು ಎಂದು ನೀವೆ ಕೆಳಗೊನ ವಿಡಿಯೋದಲ್ಲಿ ನೋಡಿ.