ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಂದೆಯಾದ ಖುಷಿಯಲ್ಲಿದ್ದು ಅಕ್ಟೋಬರ್ 2 ಗಾಂಧಿ ಜಯಂತಿ. ಈ ವಿಶೇಷ ದಿನದಂದು ಧ್ರುವ ಸರ್ಜಾ ರವರು ಹೆಣ್ಣು ಮಗುವಿನ ತಂದೆಯಾಗಿದ್ದರು. ಈ ಸಂತೋಷದ ವಿಚಾರವನ್ನು ಧ್ರುವ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು
ಒಂದೆಡೆ ಧ್ರುವ ಸರ್ಜಾ ತಂದೆಯಾದ ಖುಷಿಯಲ್ಲಿದ್ದರೆ ಮತ್ತೊಂದೆಡೆ ಅಜ್ಜಿ ಮತ್ತು ಅಣ್ಣ ಜೊತೆಯಲ್ಲಿಲ್ಲ ಎಂಬ ಬೇಸರದಲ್ಲಿದ್ದರು.
ಹೌದು ಧ್ರುವ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗು ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ಇದೀಗ ಹೆಣ್ಣು ಮಗು ಜನಿಸಿರುವುದು ಸಂಭ್ರಮ ಹೆಚ್ಚಾಗಿದೆ. ಆದರೆ ಈ ಸಂತೋಷದ ಸಮಯದಲ್ಲಿ ಅಣ್ಣ ಮತ್ತು ಅಜ್ಜಿ ಇದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಅವರಿಬ್ಬರನ್ನೂ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಇಂದು ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರು ಎಂದು ಧ್ರುವ ಸರ್ಜಾ ಸರ್ಜಾ ಭಾವುಕರಾಗಿದ್ದಾರೆ.
ಇನ್ನು ತಮಗೆ ಹೆಣ್ಣು ಮಗು ಜನಿಸಿದ್ದರ ಬಗ್ಗೆ ಕೂಡಾ ಸಂತೋಷ ವ್ಯಕ್ತಪಡಿಸಿರುವ ಧ್ರುವ ಸರ್ಜಾ ರವರು ನನಗೆ ಮೊದಲಿನಿಂದಲೂ ಹೆಣ್ಣುಮಕ್ಕಳು ಎಂದರೆ ಬಹಳ ಗೌರವ. ಆದರೆ ಇದೀಗ ಅದು ದುಪ್ಪಟ್ಟಾಗಿದ್ದು ಎಲ್ಲರ ಜೀವನದಲ್ಲೂ ಏನಾದರೂ ಸಮಸ್ಯೆಗಳಿರುತ್ತವೆ. ನಮ್ಮ ಜೀವನದಲ್ಲಿ ಕೂಡಾ ಅಂತಹ ಕಷ್ಟ ಎದುರಾಗಿದ್ದು ವೈದ್ಯರ ಸಲಹೆಯಿಂದ ಮುದ್ದಾದ ಮಗುವಿಗೆ ನಾವು ತಂದೆ-ತಾಯಿಯಾಗಿದ್ದೇವೆ. ಇಷ್ಟು ದಿನ ನಮ್ಮ ಕುಟುಂಬಕ್ಕೆ ಹೇಗೆ ಪ್ರೀತಿ ಆಶಿರ್ವಾದ ನೀಡಿದಿರೋ ಇನ್ಮುಂದೆ ನನ್ನ ಮಗುವಿಗೆ ಕೂಡಾ ಆ ಪ್ರೀತಿ ಆಶಿರ್ವಾದ ಇರಲಿ ಎಂದು ಧ್ರುವ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಇನ್ನು ಧ್ರುವ ಹಾಗೂ ಪ್ರೇರಣಾಗೆ ಮಗು ಜನಿಸಿದ ಸುದ್ದಿ ಅಭಿಮಾನಿಗಳಿಗೂ ಖುಷಿ ನೀಡಿದ್ದು ಇಬ್ಬರಿಗೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಹೌದು 24 ನವೆಂಬರ್ 2019 ರಲ್ಲಿ ಈ ಜೋಡಿ ಮದುವೆಯಾಗಿದ್ದು ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಕಾರ್ಯವನ್ನೂ ಮಾಡಲಾಗಿತ್ತು.
ಹೌದು ಪ್ರೇರಣಾ ಹೆರಿಗೆಗೆ ದಿನಾಂಕ ನಿಗದಿಯಾಗಿದ್ದಾಗಿನಿಂದ ಶೂಟಿಂಗ್ ಬದಿಗಿರಿಸಿದ್ದ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆಯಲ್ಲಿದ್ದು ಶನಿವಾರ ಪ್ರೇರಣಾಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಾರ್ಮಲ್ ಹೆರಿಗೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ನಡುವೆ ಧ್ರುವ ರವರಿಗೆ ಮೇಘನಾ ಪ್ರೀತಿಯಿಂದ ಮುತ್ತು ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಇದು ಯಾವ ಸಮಯದ ವಿಡಿಯೋ ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.