ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಂತಾರ ಕೊನೆಯ ದ್ರಶ್ಯವನ್ನು ಹೇಗೆ ಶೂಟ್ ಮಾಡಲಾಗಿತ್ತು ನೋಡಿ…ವಿಡಿಯೋ

679

ಸದ್ಯ ರಿಷಭ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿರುವ ಕಾಂತಾರ ಚಿತ್ರ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ 50 ದಿನ ಪೂರೈಸಿದ್ದು ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಥಿಯೇಟರ್​ಗಳಲ್ಲಿ 50 ದಿನ ಪೂರೈಸಿದ ಚಿತ್ರ ಬಲು ಅಪರೂಪ. ಕೇವಲ ಕರ್ನಾಟಕ ಮಾತ್ರವಲ್ಲದೇ ಹೊರದೇಶದ ಹಲವೆಡೆ ಕನ್ನಡ ಚಿತ್ರವೊಂದು 50 ದಿನಗಳನ್ನು ಪೂರೈಸಿರುವುದು ದಾಖಲೆ ಎನ್ನಲಾಗಿದ್ದು ಸೆ. 30ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾದ ಕಾಂತಾರ ನಂತರದ ದಿನಗಳಲ್ಲಿ ಹಿಂದಿ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲು ಬಿಡುಗಡೆ ಆಗಿತ್ತು.

ಕರ್ನಾಟಕದಲ್ಲೇ ಬರೋಬ್ಬರಿ 160 ಕೋಟಿ ರೂ ಗಳಿಕೆ ಮಾಡಿಕೊಂಡಿರುವ ಕಾಂತಾರ ಹೊರದೇಶಗಳು ಹಾಗೂ ಪರಭಾಷೆಗಳಿಂದ 200 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದು ಆ ಮೂಲಕ ಇದುವರೆಗಿನ ಕಾಂತಾರ ಚಿತ್ರದ ಒಟ್ಟು ಗಳಿಕೆ 370 ಕೋಟಿ ರೂ. ದಾಟಿದೆ. ಈ ತಿಂಗಳಂತ್ಯಕ್ಕೆ ಪರಭಾಷೆಗಳಲ್ಲು 50 ದಿನ ಪೂರೈಸಲಿದೆ ಚಿತ್ರ. ಕೆಜಿಎಫ್ 1’ಲ ಮತ್ತು ಕೆಜಿಎಫ್ 2 ಚಿತ್ರಗಳ ಬಳಿಕ ಹೊಂಬಾಳೆ ಫಿಲಂಸ್ ಸಂಸ್ಥೆ ಕಾಂತಾರ ಮೂಲಕ ಮತ್ತೆ ದೇಶ ವಿದೇಶಗಳಿಂದ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ.

ಇನ್ನು ಸಿನಿಮಾದ ಗುಂಗಿನಿಂದ ಜನ ಇನ್ನು ಹೊರಗೆ ಬಂದಿಯೇ ಇಲ್ಲ. ಹೌದು ಅಷ್ಟರಲ್ಲಿಯೇ ಕಾಂತಾರ ಸಿನಿಮಾ 50 ದಿನ ಪೂರೈಸಿದ್ದು ಕರ್ನಾಟಕದಲ್ಲಿ ಅಷ್ಟೇವಲ್ಲದೇ ವಿದೇಶದಲ್ಲೂ ಕಾಂತಾರ ಸಿನಿಮಾ 50 ದಿನ ಪೂರೈಸೋ ಸನಿಹದಲ್ಲೂ ಇದೆ. ಇದು ಕನ್ನಡದ ಮಟ್ಟಿಗೆ ವಿಶೇಷವೆ ಸರಿ. ಇನ್ನು ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ಡಬ್ ಆಗಿದ್ದು ದಕ್ಷಿಣ ಭಾರತದ ಅಷ್ಟೂ ಭಾಷೆಯಲ್ಲೂ ಕನ್ನಡದ ಕಾಂತಾರ ತೆರೆ ಕಂಡಿದೆ. ಹೌದು ಅದೇ ರೀತಿ ಅಮೆರಿಕಾದಲ್ಲೂ ಕಾಂತಾರ ರಿಲೀಸ್ ಆಗಿದ್ದು ನಾಲ್ಕು ಭಾಷೆಯಲ್ಲೂ ರಿಲೀಸ್ ಆಗಿದೆ. ಅಷ್ಟೇ ಯಶಸ್ವಿ ಪ್ರದರ್ಶನವನ್ನೂ ಕಂಡಿದೆ.

ಕಾಂತಾರ ಸಿನಿಮಾ ಅಮೆರಿಕಾದಲ್ಲಿ ಅಷ್ಟೂ ಭಾಷೆಯಲ್ಲಿ ರಿಲೀಸ್ ಆಗಿದ್ದು,ಈಗ 50 ದಿನ ಪೂರೈಸಲು ಸನಿಹಕ್ಕೆ ಬಂದಿದ್ದು ಇದರ ಸುತ್ತ ಹೇಳೋದಾದರೆ ಇಲ್ಲಿ ಎಲ್ಲ ಭಾಷೆಯ ಜನರೂ ಇದ್ದಾರೆ. ಹಾಗಾಗಿಯೇ ಕನ್ನಡದ ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ಕಾಂತಾರ ಅಮೆರಿಕಾ ಹಾಗೂ ಆಸ್ಟ್ರೇಲಿಯಾ ನ್ಯೂಜಿಲೆಂಡ್ ನಲ್ಲೂ ರಿಲೀಸ್ ಆಗಿದ್ದು ಆಸ್ಟ್ರೇಲಿಯಾದಲ್ಲಿ 50 ದಿನ ಪೂರೈಸಿದ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕನ್ನಡದ ಕಾಂತಾರ ಸೆಪ್ಟಂಬರ್-30 ರಂದು ಎಲ್ಲೆಡೆ ರಿಲೀಸ್ ಆಗಿತ್ತು. ಮೊದಲ ದಿನದಿಂದಲೇ ಚಿತ್ರದ ಕ್ರೇಜ್ ಶುರು ಆಗಿದ್ದು ಬೆಂಗಳೂರಿನಲ್ಲಿ ನಡೆದ ಪ್ರಿಮಿಯರ್ ಶೋದಲ್ಲಿ ಕನ್ನಡದ ಕಾಂತಾರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಬಂದಿತ್ತು. ಮರುದಿನ ಥಿಯೇಟರ್​ ನಿಂದಲೇ ಅದೇ ಪ್ರತ್ರಿಕೆಯೆ ಬಂದಿದ್ದು ಮುಂದೇನ್ ಆಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ.

ರಿಲೀಸ್ ಆದ 300 ಪ್ಲಸ್ ಥಿಯೇಟರ್ ನಲ್ಲಿ ಕಾಂತಾರ 50 ದಿನ ಪೂರೈಸಿದ್ದು ರಿಲೀಸ್​ ದಿನದಿಂದ ಹಿಡಿದು ಇಲ್ಲಿವರೆಗೂ 50 ದಿನದಲ್ಲಿ ಹತ್ತು ಹಲವು ದಾಖಲೆಗಳನ್ನ ಸಿನಿಮಾ ಮಾಡುತ್ತಲೇ ಬಂದಿದೆ.
ರಿಲೀಸ್ ಆಗಿ 50 ದಿನ ಆದರುಯ ಜನ ಇನ್ನೂ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಕಾಂತಾರ ಚಿತ್ರದ ವಿಶೇಷತೆಗಳೇನೂ ಅನ್ನೋದು ಹೇಳೋದೇ ಬೇಡ.

ಹೌದು ಅಷ್ಟು ಆಳವಾಗಿಯೇ ಕಾಂತಾರ ತನ್ನ ಛಾಪನ್ನ ಮೂಡಿಸಿದೆ. ಮಕ್ಕಳಾದಿಯಾಗಿಯ ಎಲ್ಲರೂ ಕಾಂತಾರ ಸಿನಿಮಾದ ಕುರಿತು ಮಾತನಾಡುತ್ತಾರೆ. ಸದ್ಯ ಕನ್ನಡದ ಹೆಸರನ್ನ ಅಲ್ಲೂ ಮುಟ್ಟಿಸಿದ್ದು ಒಟ್ಟಾರೆ ಕಾಂತಾರ 50 ದಿನ ಪೂರೈಸಿ ಪ್ರೇಕ್ಷಕ ದಿಲ್​ ನಲ್ಲಿ ಖಾಯಂ ಆಗಿ ಜಾಗ ಮಾಡಿಕೊಂಡು ಬಿಟ್ಟಿದೆ. ಈ ನಡುವೆ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು ಎಷ್ಟು ಅದ್ಬುತವಾಗಿಗೆ ಎಂದು ನೀವೆ ನೋಡಿ.