ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದರ್ಶನ್ ಮನೆಗೆ ಸದ್ಯದಲ್ಲೇ ಮಹಾಲಕ್ಷ್ಮಿ ಆಗಮನ…ದೊಡ್ಡ ಸಿಹಿಸುದ್ದಿ ನೋಡಿ ಒಮ್ಮೆ

523

ಸದ್ಯ ಒಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದು ಮತ್ತೊಂದು ಕಡೆ D56 ಶೂಟಿಂಗ್ ನಡೀತಿದೆ. ಹೌದು ಇದರ ನಡುವೆಯೇ ದರ್ಶನ್ ನಟನೆಯ ಮುಂದಿನ ಚಿತ್ರಕ್ಕೆ ನಿರ್ದೇಶಕರು ಯಾರು ಎನ್ನುವುದು ಗೊತ್ತಾಗಿದ್ದು ಸ್ವತಃ ನಿರ್ಮಾಪಕರೇ ಈ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಸಿನಿಮಾ ಅಂದರೆ ನಿರೀಕ್ಷೆ ಹೆಚ್ಚಾಗಿರುತ್ತದೆ.

ಮಾಸ್‌ನಲ್ಲಿ ಒಳ್ಳೆ ಫಾಲೋಯಿಂಗ್ ಇರುವ ದರ್ಶನ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದು ಐತಿಹಾಸಿಕ ಪೌರಾಣಿಕ ಸಿನಿಮಾಗಳಲ್ಲೂ ನಟಿಸಿ ಗೆಲ್ಲುತ್ತಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾ ನಿಧಾನವಾಗಿ ಹೈಪ್ ಕ್ರಿಯೇಟ್ ಮಾಡುತ್ತಿದ್ದು ತರುಣ್ ಸುಧೀರ್ ಸಾರಥ್ಯದಲ್ಲಿ D56 ಸದ್ದು ಮಾಡ್ತಿದೆ. ಹಾಗಾಗಿ ಸಹಜವಾಗಿಯೇ 57ನೇ ಸಿನಿಮಾ ನಿರ್ದೇಶಕರು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಹೌದು ಒಂದು ಸಿನಿಮಾ ಕಂಪ್ಲೀಟ್ ಆಗುವುದಕ್ಕೂ ಮುನ್ನವೇ ದರ್ಶನ್ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಿದ್ದು ದರ್ಶನ್‌ ಅವರಿಗೆ ಪರಮಾಪ್ತರಾಗಿರುವ ಸಚ್ಚಿದಾನಂದ D57 ಸಿನಿಮಾ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಬಹಳ ಹಿಂದೆಯೇ ಘೋಷಣೆ ಆಗಿತ್ತು.

D57 ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದ್ದು ಬಹಳ ಹಿಂದೆಯೇ ಇಂತಾದೊಂದು ಮಾತು ಕೇಳಿಬಂದಿತ್ತು. ಹೌದು ಆದರೆ D56 ಚಿತ್ರವನ್ನು ತರುಣ್ ನಿರ್ದೇಶನ ಮಾಡುತ್ತಿದ್ದರಿಂದ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರಾ ಎನ್ನುವ ಅನುಮಾನ ಇತ್ತು. ಸದ್ಯ ಇದೀಗ ನಿರ್ಮಾಪಕ ಸಚ್ಚಿದಾನಂದ ಈ ವಿಚಾರವನ್ನು ಕನ್ಫರ್ಮ್ ಮಾಡಿದ್ದು ಶ್ರೀರಂಗಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಅಂಬಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಹೌದು ಚಿತ್ರದ ಕಥೆ ಏನು? ತಾರಾಗಣ ಎಲ್ಲರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ತರುಣ್ ಸುಧೀರ್ ನಿರ್ದೇಶಣದ ಚೌಕ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ತದನಂತರ ರಾಬರ್ಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಈ ನಡುವೆ ದರ್ಶನ್ ಅವರು ಸಂತಸದ ವಿಚಾರ ಒಂದನ್ನು ರಿವಿಲ್ ಮಾಡಿದ್ದು ವೇದಿಕೆಯ ಮೇಲೆ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ದರ್ಶನ್ ಅವರು ಇನ್ನು ನಾಲ್ಕು ತಿಂಗಳಲ್ಲಿ ಮನೆಗೆ ಹೆಣ್ಣು ಮಗು ಬರಲಿದ್ದಾರೆ ಈ ವಿಚಾರವನ್ನು ನಿಮ್ಮ ಮುಂದೆ ವ್ಯಕ್ತಪಡಿಸುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಹೌದು ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ ದರ್ಶನ್ ಅವರು ತಂದೆಯಾಗುತ್ತಿದ್ದಾರೆ ವಿನೀಶ್ ಗೆ ಒಬ್ಬ ತಂಗಿ ಬರುತ್ತಿದ್ದಾಳೆ ಅಂತ ಊಹೆ ಮಾಡಿದ್ದು ಆದರೆ ಇಲ್ಲೇ ಇರುವುದು ನೋಡಿ ಟ್ವಿಸ್ಟ್ ದರ್ಶನ್ ಅವರು ತಂದೆಯಾಗುತ್ತಿಲ್ಲ ಬದಲಿಗೆ ದರ್ಶನ ಅವರ ಆತ್ಮೀಯ ಸ್ನೇಹಿತರು ಆದಂತಹ ಸಚ್ಚಿದಾನಂದ ಅವರು ತಂದೆಯಾಗುತ್ತಿದ್ದಾರೆ.

ಇನ್ನು ನಾಲ್ಕು ತಿಂಗಳಲ್ಲಿ ಅವರ ಮನೆಗೆ ಮಹಾಲಕ್ಷ್ಮಿ ಬರಲಿದ್ದಾಳಂತೆ ಇನ್ನು ದರ್ಶನ್ ಅವರಿಗೆ ಸ್ನೇಹಿತರು ಅಂದರೆ ಬಹಳನೇ ಪ್ರೀತಿ ಅವರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ದರ್ಶನ್ ಅವರು ವೇದಿಕೆಯ ಮೇಲೆ ನಮ್ಮ ಮನೆಗೆ ನಾಲ್ಕು ತಿಂಗಳಲ್ಲಿ ಮಹಾಲಕ್ಷ್ಮಿ ಬರಳಿದ್ದಾಳೆ.

ನಾನಂತೂ ಮಾವ ಆಗುತ್ತಿದ್ದೇನೆ ಎಂಬ ಖುಷಿಯಲ್ಲಿ ತೇಲಾಡುತ್ತಿದ್ದೇನೆ ಎಂದು ವೇದಿಕೆಯ ಮೇಲೆ ಭಾವುಕರಾಗಿದ್ದು ಸದ್ಯಕ್ಕೆ ದರ್ಶನ್ ಅವರು ಮಾತನಾಡಿದಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಇದರ ಜೊತೆಗೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ದರ್ಶನ್ ಗಿಂತ ಹೆಚ್ಚಾಗಿ ಅಭಿಮಾನಿಗಳೇ ರಾಜ್ಯದಂತ ಮಾಡುತ್ತಿದ್ದು ಇದು ದರ್ಶನ್ ಅವರಿಗೆ ಮತ್ತೊಂದು ಶಕ್ತಿ ದೊರೆತಂತಾಗಿದೆ.