ಸಾಕ್ಷಿ ಶಿವಾನಂದ್ ಬಗ್ಗೆ ಯಾರಿಗೆ ತಾನೇ ನೆನಪಿಲ್ಲ ಹೇಳಿ? ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಜೊತೆ ‘ಸಾಗರಿಯೇ ಸಾಗರಿಯೇ..’ ಎಂದು ಕುಣಿದು ಕುಪ್ಪಳಿಸಿದ ನಟಿ ಇವರು. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ನಟಿ. ಉಪೇಂದ್ರ ಜೊತೆ ಮತ್ತೊಮ್ಮೆ ‘ತಂದೆಗೆ ತಕ್ಕ ಮಗ’ ಸಿನಿಮಾದಲ್ಲಿ ನಟಿಸಿದ್ದ ಸಾಕ್ಷಿ, ‘ಸೌಂದರ್ಯ’ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆಗೆ ಬಣ್ಣ ಹಚ್ಚಿದ್ದರು. 2014ರಲ್ಲಿ ತೆರೆಕಂಡ ಕನ್ನಡದ ‘ಪರಮಶಿವ’ ಚಿತ್ರವೇ ಕೊನೇಅಲ್ಲಿಂದ ಬಣ್ಣದ ಲೋಕಕ್ಕೆ ಕಂಪ್ಲೀಟ್ ಆಗಿ ದೂರವಾದರು.
ಸಾಗರ್ ಎಂಬುವವರ ಜೊತೆ ಸಾಕ್ಷಿ ಅವರ ವಿವಾಹವಾಗಿದೆ ಎಂಬ ಮಾತಿದೆಯಾದರೂ, ಆ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಲ್ಲದೆ, ಅವರೀಗ ಭಾರತದಲ್ಲೇ ಇಲ್ಲ. ವಿದೇಶದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ಸೆಟಲ್ ಆಗಿದ್ದಾರಂತೆ. ಸಾಕ್ಷಿ ಸಹೋದರಿ ಶಿಲ್ಪಾ ಶಿವಾನಂದ್ ಕೂಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ನಟಿ ಸಾಕ್ಷಿ ಶಿವಾನಂದ್ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಈ ಎಲ್ಲಾ ಭಾಷೆಗಳಲ್ಲಿಯೂ ಟಾಪ್ ನಟಿಯಾಗಿ ಮಿಂಚಿದವರು. ಮಿಂಚಿನ ಬಳ್ಳಿಯಂತಿದ್ದ ಸಾಕ್ಷಿ ಶಿವಾನಂದ್ ಅವರು ಅಭಿನಯದಲ್ಲೂ ತುಂಬಾ ಚುರುಕುತನ ತೋರುತ್ತಿದ್ದರು. ಗಲಾಟೆ ಅಳಿಯಂದ್ರು ಸಿನಿಮಾದ ಮೂಲಕ ಕನ್ನಡ ಚಿತ್ರ ರಸಿಕರಿಗೆ ಪರಿಚಯವಾದರು ನಟಿ ಸಾಕ್ಷಿ ಶಿವಾನಂದ್. ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ನಾನು ನಾನೇ ಸಿನಿಮಾದಲ್ಲಿ ನಟಿಸಿದ್ದರು.
ನಟ ಯೋಗೇಶ್ ಅವರ ಅಭಿನಯದ ಸೈನಿಕ ಸಿನಿಮಾ ನಟಿ ಸಾಕ್ಷಿ ಶಿವಾನಂದ್ ಅವರಿಗೆ ತುಂಬಾ ಹೆಸರು ತಂದು ಕೊಟ್ಟಿತು. ನಟಿ ಸಾಕ್ಷಿ ಶಿವಾನಂದ್ ಏಪ್ರಿಲ್ 15, 1977 ರಂದು ಮುಂಬೈಯಲ್ಲಿ ಜನಿಸಿದರು. ನಟಿ ಸಾಕ್ಷಿ ಶಿವಾನಂದ್ ಗಲಾಟೆ ಅಳಿಯಂದ್ರು, ನಾನು ನಾನೇ, ಸೈನಿಕ, ಕೋದಂಡ ರಾಮ, ಸೌಂದರ್ಯ, ತಂದೆಗೆ ತಕ್ಕ ಮಗ, ಪರಮಶಿವ ಸೇರಿದಂತೆ ಕನ್ನಡದಲ್ಲಿ ಸುಮಾರು 7 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
2014 ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪರಮಶಿವ ನಟಿ ಸಾಕ್ಷಿ ಶಿವಾನಂದ್ ಅವರ ಕಡೆಯ ಸಿನಿಮಾ. ನಟಿ ಸಾಕ್ಷಿ ಶಿವಾನಂದ್ ಅವರು ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಮಹೇಶ್ ಬಾಬು, ಚಿರಂಜೀವಿ, ನಂದಮುರಿ ಬಾಲಕೃಷ್ಣ, ನಾಗಾರ್ಜುನ ಸೇರಿದಂತೆ ಹಲವಾರು ಖ್ಯಾತ ನಟರ ಜೊತೆ ನಟಿ ಸಾಕ್ಷಿ ಶಿವಾನಂದ್ ಅವರು ಅಭಿನಯಿಸಿದ್ದಾರೆ.
ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದಾಗ ನಟಿ ಸಾಕ್ಷಿ ಶಿವಾನಂದ್ ಅವರು ಅಮೆರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರು. ಅಮೆರಿಕಾದಲ್ಲಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿರುವಾಗಲೇ ಸಾಗರ್ ಎಂಬ ವ್ಯಕ್ತಿಯ ಪರಿಚಯವಾಗಿ ಆತನೊಂದಿಗೆ ಸಹ ಜೀವನ ನಡೆಸುತ್ತಿದ್ದರು ಹಾಗೂ ಸಾಗರ್ ಮಾಡುತ್ತಿದ್ದಂತಹ ಬಿಜ್ ನೆಸ್ ಗೆ ಆರ್ಥಿಕ ಸಹಾಯ ನೀಡಿದರು
ಆದರೆ ನಟಿ ಸಾಕ್ಷಿ ಶಿವಾನಂದ್ ಗೆ ಸಾಗರ್ ತನ್ನನ್ನು ಪ್ರೀತಿಸುತ್ತಿಲ್ಲ ತನ್ನಲ್ಲಿರುವ ಹಣವನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಷಯ ಕೆಲವು ಸಮಯದ ನಂತರ ತಿಳಿಯಿತು. ಆ ಸತ್ಯ ತಿಳಿಯುವ ಹೊತ್ತಿಗೆ ಸಾಗರ್ ಸಾಕ್ಷಿಯವರಿಂದ ತುಂಬಾ ಹಣವನ್ನು ಬಾಚಿಕೊಂಡಿದ್ದ. ನಂತರ ಈತನಿಂದ ದೂರವಾದರೂ ನಟಿ ಸಾಕ್ಷಿ ಶಿವಾನಂದ್. ಪ್ರಸ್ತುತ ನಟಿ ಸಾಕ್ಷಿ ಶಿವಾನಂದ್ ಅವರು ಅಮೆರಿಕಾದಲ್ಲಿ ನೆಲೆಸಿದ್ದು ಅಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.